44ನೇ ಚೆಸ್ ಒಲಿಂಪಿಯಾಡ್‌ನ ಲೋಗೋ, ಮ್ಯಾಸ್ಕಾಟ್ ಬಿಡುಗಡೆ ಮಾಡಿದ ತಮಿಳುನಾಡು ಸಿಎಂ

By

Published : Jun 10, 2022, 10:17 AM IST

Updated : Feb 3, 2023, 8:23 PM IST

thumbnail

ಚೆನ್ನೈ (ತಮಿಳುನಾಡು): ಮುಂದಿನ ತಿಂಗಳು ಇಲ್ಲಿ ನಡೆಯಲಿರುವ 44ನೇ ಚೆಸ್ ಒಲಿಂಪಿಯಾಡ್‌ನ ಅಧಿಕೃತ ಲೋಗೋ ಮತ್ತು ಮ್ಯಾಸ್ಕಾಟ್ ಅನ್ನು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಗುರುವಾರ ಬಿಡುಗಡೆ ಮಾಡಿದರು. ಈ ವೇಳೆ, ಮಾತನಾಡಿದ ಅವರು, ಕ್ರೀಡಾಕೂಟವನ್ನು ಆಯೋಜಿಸುವುದು ಈ ರಾಜಧಾನಿಗೆ ಸಂದ ಸಂಪೂರ್ಣ ಗೌರವ. ನಮ್ಮ ಎಲ್ಲ ಅಧಿಕಾರಿಗಳು ಇದನ್ನು ಭಾರತೀಯ ಕ್ರೀಡಾ ಇತಿಹಾಸದಲ್ಲಿ ಭವ್ಯವಾದ ಮತ್ತು ಸ್ಮರಣೀಯ ಯಶಸ್ವಿಗೊಳಿಸಲು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು. ಪ್ರತಿಷ್ಠಿತ ಕಾರ್ಯಕ್ರಮದ ಪೂರ್ವಭಾವಿಯಾಗಿ ಸ್ಟಾಲಿನ್ ಅಧಿಕೃತ ಲೋಗೋ ಮತ್ತು ಮ್ಯಾಸ್ಕಾಟ್​ನ್ನು 'ತಂಬಿ' (ತಮಿಳಿನಲ್ಲಿ ಕಿರಿಯ ಸಹೋದರ) ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಿದರು. ಚೆಸ್ ಒಲಂಪಿಯಾಡ್ ಜುಲೈ 28 ರಿಂದ ಆಗಸ್ಟ್ 10 ರವರೆಗೆ ಮಾಮಲ್ಲಪುರಂನಲ್ಲಿ ನಡೆಯಲಿದೆ.

Last Updated : Feb 3, 2023, 8:23 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.