ಅಹಮದಾಬಾದ್​ಗೆ ಬಂದಿಳಿದ ಗಿಲ್​: ಪಾಕ್​ ವಿರುದ್ಧ ಕಣಕ್ಕಿಳಿಯುತ್ತಾರಾ ಸ್ಟಾರ್​ ಬ್ಯಾಟರ್​

By ETV Bharat Karnataka Team

Published : Oct 12, 2023, 2:05 PM IST

thumbnail

ಅಹಮದಾಬಾದ್​(ಗುಜರಾತ್​) : ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶನಿವಾರ ನಡೆಯಲಿರುವ ಪಾಕ್​ ಮತ್ತು ಭಾರತ ನಡುವಿನ ಪಂದ್ಯಕ್ಕೂ ಮುನ್ನ ಭಾರತದ ಸ್ಟಾರ್​ ಬ್ಯಾಟರ್​​ ಶುಭ್​ಮನ್​ ಗಿಲ್​ ಅಹಮದಾಬಾದ್​ ವಿಮಾನ ನಿಲ್ದಾಣಕ್ಕೆ ಇಂದು ಬಂದಿಳಿದಿದ್ದಾರೆ. ಡೆಂಘೀ ಜ್ವರ ಹಿನ್ನೆಲೆ ಕಳೆದ ಆಸ್ಟ್ರೇಲಿಯಾ ಮತ್ತು ಅಫ್ಗಾನಿಸ್ತಾನ್​ ನಡುವಿನ ಎರಡು ಪಂದ್ಯಗಳನ್ನು ಗಿಲ್ ತಪ್ಪಿಕೊಂಡಿದ್ದರು. ಇದೀಗ ಮೂರನೇ ಹೈವೋಲ್ಟೇಜ್​ ಪಂದ್ಯದಲ್ಲಿ  ಕಣಕ್ಕಿಳಿಯುತ್ತಾರಾ ಎಂಬ ಕುತೂಹಲ ಕೆರಳಿಸಿದೆ.

ಮೂಲಗಳ ಪ್ರಕಾರ, ಶುಭ್​ಮನ್​ ಗಿಲ್​ ಅವರು ಪಾಕಿಸ್ತಾನದ ಪಂದ್ಯದಲ್ಲಿ ಆಡಲು ಇನ್ನೂ ಫಿಟ್​ ಆಗಿಲ್ಲ. ಜ್ವರದಿಂದಾಗಿ ಇನ್ನೂ ಚೇತರಿಸಿಕೊಳ್ಳಬೇಕಿದೆ ಎಂದು ತಿಳಿದುಬಂದಿದೆ. ವಿಮಾನ ನಿಲ್ದಾಣದಲ್ಲಿ ಕಂಡ ಗಿಲ್​ ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಶುಭ್​ಮನ್​ ಗಿಲ್​ ಶೀಘ್ರದಲ್ಲೇ ತಂಡಕ್ಕೆ ಮರಳಲಿದ್ದಾರೆ. ಗಿಲ್​ ಅವರಿಗೆ ಚೇತರಿಸಿಕೊಳ್ಳಲು ಸಮಯವಕಾಶ ನೀಡಲಾಗಿದೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ. ವಿಶ್ವಕಪ್​ನಲ್ಲಿ ಶುಭಾರಂಭ ಮಾಡಿರುವ ಭಾರತ, ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ಥಾನವನ್ನು ಭರ್ಜರಿಯಾಗಿ ಸೋಲಿಸಿದೆ. ಜೊತೆಗೆ ಶನಿವಾರ ನಡೆಯಲಿರುವ ಬದ್ಧವೈರಿಗಳ ಕಾಳಗದಲ್ಲಿ ಭಾರತ ಜಯಸಾಧಿಸುವ ಉತ್ಸಾಹದಲ್ಲಿದೆ.

ಗಿಲ್ ಅನುಪಸ್ಥಿತಿ ಹೊರತಾಗಿಯೂ ಭಾರತದ ಬ್ಯಾಟಿಂಗ್ ಲೈನ್ ಅಪ್ ಬಲಿಷ್ಠವಾಗಿದೆ. ತಂಡದಲ್ಲಿ ಅನುಭವಿ ಬ್ಯಾಟ್ಸ್‌ಮನ್‌ಗಳಿದ್ದಾರೆ. ಪ್ರತಿಯೊಬ್ಬರಿಗೂ ಅವರ ಪಾತ್ರ ತಿಳಿದಿದೆ. ಮೈದಾನಕ್ಕಿಳಿದ ನಂತರ ಅವರು ಹೇಗೆ ಆಡಬೇಕು ಎಂಬ ಸ್ವಾತಂತ್ರ್ಯವನ್ನು ನಾವು ಅವರಿಗೆ ನೀಡಿದ್ದೇವೆ. ಹಾಗಾಗಿ ಟೀಂ ಇಂಡಿಯಾದ ಬ್ಯಾಟಿಂಗ್ ಕ್ರಮಾಂಕ ಕೇವಲ ಒಬ್ಬ ವ್ಯಕ್ತಿಯ ಮೇಲೆ ಅವಲಂಬಿತವಾಗಿಲ್ಲ ಎಂದು ಭಾರತದ ಬ್ಯಾಟಿಂಗ್​ ಕೋಚ್​​ ವಿಕ್ರಮ್​ ರಾಥೋಡ್ ಹೇಳಿದ್ದಾರೆ.

ಇದನ್ನೂ ಓದಿ : ICC Cricket World Cup 2023: ಪಾಕ್​ ವಿರುದ್ಧ ಕಣಕ್ಕಿಳಿಯಲಿದ್ದಾರಾ ಗಿಲ್​?.. ಏನಂದ್ರು ಬ್ಯಾಟಿಂಗ್​ ಕೋಚ್​?

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.