'ಹೈಕಮಾಂಡ್​ ಹೇಳಿದ್ದನ್ನು ನಾವು ಕೇಳಬೇಕು': ದೆಹಲಿಯಲ್ಲಿ ಡಿ.ಕೆ.ಶಿವಕುಮಾರ್​ ಹೇಳಿಕೆ

By

Published : May 18, 2023, 10:27 AM IST

thumbnail

ನವದೆಹಲಿ/ಬೆಂಗಳೂರು: ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಂದ ಬಳಿಕ ಆರಂಭವಾಗಿದ್ದ ಸಿಎಂ ಆಯ್ಕೆ ಗೊಂದಲಕ್ಕೀಗ ತೆರೆಬಿದ್ದಿದೆ. ಸಿದ್ದರಾಮಯ್ಯ ಸಿಎಂ ಆಗಿ ಎರಡನೇ ಬಾರಿಗೆ ಅಧಿಕಾರ ಸ್ವೀಕಾರ ಮಾಡಲಿದ್ದು, ಡಿಸಿಎಂ ಆಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅಧಿಕಾರ ವಹಿಸಿಕೊಳ್ಳುವುದು ಬಹುತೇಕ ಖಚಿತ. ಇಂದು ನವದೆಹಲಿಯಲ್ಲಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್​ ಅವರ ನೇತೃತ್ವದ ಸಭೆಯಲ್ಲಿ ಭಾಗಿಯಾಗಲು ತೆರಳುತ್ತಿದ್ದ ಸಂದರ್ಭದಲ್ಲಿ ಡಿಸಿಎಂ ಸ್ಥಾನಕ್ಕೆ ಒಪ್ಪಿಗೆ ಸೂಚಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿ, "ಹೈಕಮಾಂಡ್​ ಏನು ಹೇಳುತ್ತೋ ಅದನ್ನು ನಾವು ಕೇಳಬೇಕಾಗುತ್ತೆ" ಎಂದರು. ಈ ಮೂಲಕ ತಮ್ಮ ಡಿಸಿಎಂ ಸ್ಥಾನವನ್ನು ಅವರು ಖಚಿತಪಡಿಸಿದಂತಿದೆ.

ಇನ್ನು ಬೆಂಗಳೂರಿನಲ್ಲಿರುವ ಡಿಕೆಶಿ​ ನಿವಾಸದ ಮುಂದೆ ಅವರ ಬೆಂಬಲಿಗರು ಮತ್ತು ಕಾರ್ಯಕರ್ತರು 'ಕರ್ನಾಟಕದ ಮುಂದಿನ ಉಪ ಮುಖ್ಯಮಂತ್ರಿ' ಎಂದು ಬರೆದ ಬ್ಯಾನರ್‌ಗಳನ್ನು ಈಗಾಗಲೇ ಅಳವಡಿಸಿದ್ದಾರೆ. ಮೇ 20 ರಂದು ಕಂಠೀರವ ಮೈದಾನದಲ್ಲಿ ಸಿಎಂ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ಸಿದ್ದರಾಮಯ್ಯಗೆ ಸಿಎಂ ಪಟ್ಟ, ಡಿಸಿಎಂ ಆಗಿ ಡಿ.ಕೆ.ಶಿವಕುಮಾರ್; 20ಕ್ಕೆ ಪ್ರಮಾಣ ವಚನ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.