ವಂದೇ ಭಾರತ್ ಎಕ್ಸ್​ಪ್ರೆಸ್ ರೈಲಿನಲ್ಲಿ ಸೈಯದ್ ಕಿರ್ಮಾನಿ, ಜಾಂಟಿ ರೋಡ್ಸ್​ ಪಯಣ: ವಿಡಿಯೋ

By ETV Bharat Karnataka Team

Published : Nov 9, 2023, 5:20 PM IST

thumbnail

ನವದೆಹಲಿ: ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲಿನಲ್ಲಿ ಹಿರಿಯ ಕ್ರಿಕೆಟಿಗರಾದ ಸೈಯದ್​​ ಕಿರ್ಮಾನಿ ಮತ್ತು ದಕ್ಷಿಣ ಆಫ್ರಿಕಾದ ಜಾಂಟಿ ರೋಡ್ಸ್ ಇಂದು ಪ್ರಯಾಣಿಸಿದರು. ಮಧ್ಯಪ್ರದೇಶದ ಭೋಪಾಲ್​ನಿಂದ ರಾಷ್ಟ್ರ ರಾಜಧಾನಿ ದೆಹಲಿಯ ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣಕ್ಕೆ ವಂದೇ ಭಾರತ್​ ರೈಲಿನಲ್ಲಿ ಇಬ್ಬರು ಒಟ್ಟಿಗೆ ಆಗಮಿಸಿದರು. ರೈಲ್ವೆ ಅಧಿಕಾರಿಗಳಿಂದ ಸ್ವಾಗತ ಕೋರಲಾಯಿತು.

ಇಂದು ಬೆಳಗ್ಗೆ ಭೋಪಾಲ್‌ನಿಂದ ಸೈಯದ್​​ ಕಿರ್ಮಾನಿ ಮತ್ತು ಜಾಂಟಿ ರೋಡ್ಸ್ ವಂದೇ ಭಾರತ್ ರೈಲು ಹತ್ತಿದ್ದರು. ಮಧ್ಯಾಹ್ನ 1 ಗಂಟೆಗೆ ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣವನ್ನು ಎಕ್ಸ್​ಪ್ರೆಸ್​ ರೈಲು ತಲುಪಿತು. ಹಿರಿಯ ಕ್ರಿಕೆಟಿಗರು ಆಗಮಿಸುತ್ತಿರುವ ವಿಷಯ ತಿಳಿದ ರೈಲ್ವೆ ಅಧಿಕಾರಿಗಳು ರೈಲ್ವೆ ನಿಲ್ದಾಣದಲ್ಲಿ ಹಾಜರಿದ್ದು, ಆತ್ಮೀಯವಾಗಿ ಬರಮಾಡಿಕೊಂಡರು. ಈ ವೇಳೆ, ಇಬ್ಬರು ಕೂಡ ವಂದೇ ಭಾರತ್ ರೈಲಿನಲ್ಲಿನ ಉತ್ತಮ ಸೌಲಭ್ಯಗಳ  ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಲೆಜೆಂಡ್ಸ್‌ ಲೀಗ್​ ಕ್ರಿಕೆಟ್ ಟ್ರೋಫಿ ಟೂರ್​ಗಾಗಿ ಭಾರತೀಯ ರೈಲ್ವೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. 17 ರಾಜ್ಯಗಳ 50 ನಗರಗಳಲ್ಲಿ ಸಂಚರಿಸಲಾಗುತ್ತದೆ. 

ಭಾರತದ ಮಾಜಿ ಕ್ರಿಕೆಟಿಗ ಕಿರ್ಮಾನಿ ಮಾತನಾಡಿ, ಪ್ರಸ್ತುತ ಏಕದಿನ ವಿಶ್ವಕಪ್​ನಲ್ಲಿ ಭಾರತ ತಂಡದ ಪ್ರದರ್ಶನ ಉತ್ತಮವಾಗಿದ್ದು, ಈ ಬಾರಿ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಪ್ರತಿಕ್ರಿಯಿಸಿ, ವಿಶ್ವಕಪ್ ಉತ್ತಮ ಪಂದ್ಯಾವಳಿ. ಟೂರ್ನಿಯನ್ನು ಭಾರತವು ಉತ್ತಮವಾಗಿ ಆಯೋಜಿಸಿದೆ. ಕ್ರಿಕೆಟ್​ ಎಂದರೆ ಒಂದು ತಂಡವಾಗಿರಲಿ ಅಥವಾ ವೈಯಕ್ತಿಕವಾಗಿರಲಿ ಅದೊಂದು ಅದ್ಭುತ. ಸದ್ಯ ಅಲ್ಲಿಂದ ಟೂರ್ನಿಯು ಹೆಚ್ಚು ಕಠಿಣವಾಗಲಿದೆ. ಏಕೆಂದರೆ, ಪ್ರತಿಯೊಬ್ಬರಿಗೆ ಒಂದೇ ಅವಕಾಶ ಸಿಗಲಿದೆ. ಇದನ್ನು ಸುದುಪಯೋಗ ಪಡಿಸಿಕೊಂಡವರು ಮತ್ತಷ್ಟು ಎತ್ತರಕ್ಕೆ ಹೋಗುತ್ತಾರೆ ಎಂದರು.

ಇದನ್ನೂ ಓದಿ: ಪ್ರೇಕ್ಷಕರ ಸ್ಟ್ಯಾಂಡ್‌ನಲ್ಲಿ ಫೀಲ್ಡರ್​ ನಿಲ್ಲಿಸುವ ಅವಕಾಶ ಇರಬೇಕಿತ್ತು: ಮ್ಯಾಕ್ಸ್‌ವೆಲ್‌ ಬ್ಯಾಟಿಂಗ್‌ ಬಗ್ಗೆ ಅಫ್ಘಾನ್ ಕೋಚ್ ಮಾತು

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.