'ನೀವೂ ಪ್ರಧಾನಿಯಾಗಿ..' ಮಕ್ಕಳೊಂದಿಗೆ ಮೋದಿ ಅಕ್ಕರೆಯ ಮಾತುಕತೆ- ವಿಡಿಯೋ

By

Published : May 3, 2023, 9:54 AM IST

thumbnail

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರು ಮಕ್ಕಳೊಂದಿಗೆ ವಿಶೇಷ ಬಾಂಧವ್ಯ ಹೊಂದಿದ್ದಾರೆ. ಅದನ್ನವರು ಹಲವು ಬಾರಿ ತೋರಿಸಿಕೊಟ್ಟಿದ್ದಾರೆ. ಪ್ರಧಾನಿ ಕಚೇರಿಗೂ ಮಕ್ಕಳನ್ನು ಕರೆಯಿಸಿಕೊಂಡು ಸಂವಾದ ನಡೆಸಿದ್ದೂ ಇದೆ. ಸದ್ಯ ರಾಜ್ಯ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿರುವ ಅವರು ನಿನ್ನೆ ಕಲಬುರಗಿಯಲ್ಲಿ ಮತಬೇಟೆ ನಡೆಸಿದರು. ಇದೇ ವೇಳೆ ತಮ್ಮನ್ನು ಕಾಣಲು ಬಂದ ಪುಟಾಣಿಗಳನ್ನು ಪ್ರಧಾನಿ ಅಕ್ಕರೆಯಿಂದ ಮಾತನಾಡಿಸಿದ ಪ್ರಸಂಗ ನಡೆಯಿತು.

ಬಿಗಿ ಭದ್ರತೆಯನ್ನು ಲೆಕ್ಕಿಸದೇ ಮಕ್ಕಳಿದ್ದ ಜಾಗಕ್ಕೆ ತೆರಳಿದ ಪ್ರಧಾನಿ, ಅವರೊಂದಿಗೆ ಬೆರೆತರು. ಯೋಗದ ಮಾದರಿಯಾದ ಕೈಬೆರಳುಗಳನ್ನು ಅಗಲಿಸುವ ಟಾಸ್ಕ್​ ನೀಡಿದಾಗ ಮಕ್ಕಳು ಖುಷಿಯಿಂದಲೇ ಅದನ್ನು ಮಾಡಿ ತೋರಿಸಿದರು. ಬಳಿಕ ನೀವು ದೊಡ್ಡವರಾದ ಮೇಲೆ ಏನಾಗುತ್ತೀರಿ ಎಂದು ಒಬ್ಬೊಬ್ಬರನ್ನೇ ಕೇಳಿದಾಗ, ಮಕ್ಕಳು ಡಾಕ್ಟರ್​, ಪೊಲೀಸ್ ಎಂಜಿನಿಯರ್​ ಆಗುತ್ತೇವೆ ಎಂದರು.

ಮತ್ತೊಂದು ಮಗು ಕಾರ್ಯದರ್ಶಿ ಆಗುವೆ ಎಂದಿತು. ಇದಕ್ಕೆ ಮೋದಿ ಅವರು, ಕಾರ್ಯದರ್ಶಿ ಯಾಕೆ ಪ್ರಧಾನಿ ಆಗಬೇಕೆಂಬ ಆಸೆಯಿಲ್ಲವೇ?, ನೀನು ಪ್ರಧಾನಿಯಾಗು ಎಂದು ಹರಸಿದರು. ಪ್ರಧಾನಿ ಮೋದಿ ಅವರ ಮಕ್ಕಳ ಜೊತೆಗಿನ ಸಾಮೀಪ್ಯದ ಮಾತುಕತೆಯನ್ನು ಅಲ್ಲಿದ್ದವರು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ತವರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ರೋಡ್ ಶೋ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.