ಪಾರ್ಟಿಯ ನೇತಾರರೇ ನನ್ನನ್ನು ಸೋಲಿಸಿದರು, ಡಿ.6ರ ಬಳಿಕ ಅವರ ಪಾಪದ ಕೆಲಸ ಹೇಳ್ತೀನಿ: ಸೋಮಣ್ಣ

By ETV Bharat Karnataka Team

Published : Nov 23, 2023, 7:32 PM IST

thumbnail

ಚಾಮರಾಜನಗರ: ಕಾಂಗ್ರೆಸ್​ನವರು ನನ್ನನ್ನು ಸೋಲಿಸಿಲ್ಲ, ನಮ್ಮ ಪಾರ್ಟಿಯ ಮಹಾ ನೇತಾರರೇ ನನ್ನನ್ನು ಸೋಲಿಸಿದರು ಎಂದು ಮಾಜಿ ಸಚಿವ ಸೋಮಣ್ಣ ಆರೋಪ ಮಾಡಿದ್ದಾರೆ. ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ ಅವರು, ನಮ್ಮ ಪಾರ್ಟಿಯ ಮಹಾನ್ ನೇತಾರರು ಎನಿಸಿಕೊಂಡವರು, ಜೊತೆಯಲ್ಲಿದ್ದವರು ನನ್ನನ್ನು ಸೋಲಿಸಿದರು. ಅವರ ಎಲ್ಲಾ ಪಾಪದ ಕೆಲಸವನ್ನು ವರಿಷ್ಠರಿಗೆ ಹೇಳುತ್ತೇನೆ ಎಂದರು.

ಡಿಸೆಂಬರ್​ 6ರ ತನಕ ನಾನು ಏನೂ ಮಾತನಾಡಲ್ಲ, ಒಂದಂತೂ ಸತ್ಯ. ರಾಜಕೀಯ ನಿಂತ ನೀರಲ್ಲ. ನನಗೆ ಉದ್ದೇಶಪೂರ್ವಕವಾಗಿ ತೊಂದರೆ ಕೊಟ್ಟವರಿಗೆಲ್ಲ ಉತ್ತರವನ್ನು ಡಿ. 6ರಂದು ನೀಡುತ್ತೇನೆ. ನಾನು ಶಕ್ತಿ ಪ್ರದರ್ಶನ ಮಾಡುತ್ತಿಲ್ಲ, ತಪ್ಪು ಮಾಡಿದವರನ್ನು ಅರ್ಥೈಸುವ ಕೆಲಸ ಮಾಡುತ್ತೇನೆ. 6ರ ಬಳಿಕ ವರಿಷ್ಠರಿಗೆ ಎಲ್ಲವನ್ನೂ ಹೇಳುತ್ತೇನೆ. ಸೋಮನಹಳ್ಳಿ ಮುದುಕಿ ಕಥೆ ಥರಾ ನಾನು ಆಗಲ್ಲ. ಎಲ್ಲದಕ್ಕೂ ನನ್ನಿಂದಲೇ ಎಂದರೆ ಅದು ಭ್ರಮೆ. ಆ ರೀತಿ ನಾನು ಆಗಲ್ಲ ಎಂದು, ಯಾರದೇ ಹೆಸರನ್ನು ಹೇಳದೇ ಸಚಿವ ಸೋಮಣ್ಣ ಕುಟುಕಿದರು.

ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡದಿಂದ ನಳಿನ್‌ ಕುಮಾರ್​ಗೆ ಬಿಜೆಪಿ ಟಿಕೆಟ್: ವಿಜಯೇಂದ್ರ ಸುಳಿವು

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.