45 ಪಾಕಿಸ್ತಾನಿ ಭಕ್ತರ ಭಾರತ ದರ್ಶನ.. ದೇವಾಲಯಕ್ಕೆ ಭೇಟಿ ನೀಡಿ ಪುನೀತರಾದ ಯಾತ್ರಿಕರು

By

Published : Jan 22, 2023, 8:45 PM IST

Updated : Feb 3, 2023, 8:39 PM IST

thumbnail

ಪುರಿ (ಒಡಿಶಾ): ಪಾಕಿಸ್ತಾನದ ಕರಾಚಿಯಿಂದ ಹಿಂದೂ ಭಕ್ತರ ಗುಂಪು ಒಡಿಶಾದ ಪುರಿಯ ಪ್ರಸಿದ್ಧ ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡಿ ಭಗವಾನ್ ಜಗನ್ನಾಥನಿಗೆ ಪ್ರಾರ್ಥನೆ ಸಲ್ಲಿಸಿದರು. ಒಟ್ಟು 45 ಜನರ ಗುಂಪು ಜನವರಿ 11 ರಂದು ಕರಾಚಿಯಿಂದ ಪ್ರಯಾಣ ಆರಂಭಿಸಿ ಭಾರತದ ಪುಣ್ಯ ಕ್ಷೇತ್ರಗಳ ದರ್ಶನ ಪಡೆದರು. ಭಕ್ತರಲೊಬ್ಬ ಮಾತನಾಡಿ, ನಾವು ಪುರಿಗೆ ಭೇಟಿ ನೀಡಲು ಕಳೆದ 14 ವರ್ಷಗಳಿಂದ ಕಾಯುತ್ತಿದ್ದೆವು. ಅಂತಿಮವಾಗಿ ಅವಕಾಶ ಸಿಕ್ಕಿತು. ನಾವು ನಮ್ಮ ಕನಸನ್ನು ನನಸು ಮಾಡಿಕೊಂಡಿದ್ದೇವೆ. ಭಗವಾನ್ ಜಗನ್ನಾಥನನ್ನು ನೋಡಿ ಪಾವನವಾದೆವು. ಈ ಅವಕಾಶವನ್ನು ನೀಡಿದ ಭಾರತ ಸರ್ಕಾರಕ್ಕೆ ಭಕ್ತ ಧನ್ಯವಾದ ಅರ್ಪಿಸಿದ್ದಾರೆ. ಇವರ ಸಂಪೂರ್ಣ ಪ್ರವಾಸದ ನಿರ್ವಹಣೆ ಒಡಿಶಾ ಇಂಟರ್ನ್ಯಾಷನಲ್ ಸೆಂಟರ್ ಮಾಡಿತ್ತು. 

ಕರಾಚಿಯಿಂದ ಜನವರಿ 11 ರಂದು ಪ್ರವಾಸವನ್ನು ಪ್ರಾರಂಭಿಸಿದ 45 ಜನ, 12ರಂದು ಲಾಹೋರ್‌ನಲ್ಲಿರುವ ಗುರುದ್ವಾರಕ್ಕೆ ಭೇಟಿ ನೀಡಿ ನಂತರ 13 ರಂದು ನಾವು ಪಂಜಾಬ್‌ನ ಅಮೃತಸರದಲ್ಲಿರುವ ರಾಮ್ ತೀರಥ್ ದೇವಸ್ಥಾನ ಮತ್ತು ದುರ್ಗಿಯಾನ ಮಂದಿರದ ದರ್ಶನ ಪಡೆದಿದ್ದೇವೆ. ಸಂಕ್ರಾಂತಿಯಂದು ಹರಿದ್ವಾರದಲ್ಲಿ ಪವಿತ್ರ ಸ್ನಾನ ಮಾಡಿ ಜಮ್ಮುವಿಗೆ ಭೇಟಿ ನೀಡಿದ್ದಾಗಿ ತಿಳಿಸಿದ್ದಾರೆ.  

ಇದನ್ನೂ ಓದಿ: ಶನಿ ದೇವರಿಗೆ 1 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಕಲಶ ಅರ್ಪಿಸಿದ ಭಕ್ತ

Last Updated : Feb 3, 2023, 8:39 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.