ಮಲೆನಾಡಿನಲ್ಲಿ ಹೊಸ ವರ್ಷದ ಸಂಭ್ರಮ: ವಿಡಿಯೋ

By ETV Bharat Karnataka Team

Published : Jan 1, 2024, 7:24 AM IST

thumbnail

ಶಿವಮೊಗ್ಗ: 2024ರ ಹೊಸ ವರ್ಷವನ್ನು ಮಲೆನಾಡು ಶಿವಮೊಗ್ಗದ ಜನತೆ ಅತ್ಯಂತ ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ. 2023 ಅನ್ನು ಸಂತೋಷದಿಂದ ಬೀಳ್ಕೊಟ್ಟರು. ಜಿಲ್ಲೆಯಾದ್ಯಂತ ಜನರು ಹೊಸ ವರ್ಷವನ್ನು ಅತ್ಯಂತ ಸಂತೋಷದಿಂದ ತಮ್ಮದಾಗಿಸಿಕೊಂಡಿದ್ದಾರೆ. ವಿವಿಧ ಕ್ಲಬ್, ರೆಸಾರ್ಟ್‌ಗಳಲ್ಲಿ ಹೊಸ ವರ್ಷಕ್ಕಾಗಿ ಡಿಜೆ ಸೇರಿದಂತೆ ವಿವಿಧ ರಸಮಂಜರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.  

ರಾತ್ರಿ 12 ಗಂಟೆ ಆಗುತ್ತಲೇ ಯುವ ಜನತೆ ಕುಣಿದು ಕುಪ್ಪಳಿಸುತ್ತಾ 2024 ಅನ್ನು ಬರಮಾಡಿಕೊಂಡರು. ಶಿವಮೊಗ್ಗದ ಕಂಟ್ರಿ‌ ಕ್ಲಬ್, ಕಾಸ್ಮೋ ಕ್ಲಬ್, ಮಲೆನಾಡ್ ಶೈರ್​ ಹಾಗೂ ಸಾಗರದ ಟಿಪ್ ಟಾಪ್ ಹೋಟೆಲ್​ಸೇರಿದಂತೆ ವಿವಿಧೆಡೆ ಹೊಸ ವರ್ಷಕ್ಕಾಗಿ ವಿವಿಧ ರೀತಿಯ ಕಾರ್ಯಕ್ರಮಗಳು ನಡೆದವು. 

ಕಂಟ್ರಿ ಕ್ಲಬ್​ನಲ್ಲಿ ರಾತ್ರಿ 12 ಗಂಟೆಗೆ ಎಲ್ಲಾ ವಿದ್ಯುದ್ದೀಪಗಳನ್ನು ಆಫ್ ಮಾಡಿಸಿ ಮೊಬೈಲ್ ಟಾರ್ಚ್ ಆನ್ ಮಾಡುವ ಮೂಲಕ ಹೊಸ ವರ್ಷವನ್ನು ವೆಲ್‌ಕಮ್ ಮಾಡಲಾಯಿತು. ಇದರ ಜೊತೆಗೆ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಈ ವೇಳೆ ಯುವಕ, ಯುವತಿಯರು ಸೇರಿದಂತೆ ಎಲ್ಲರೂ ಡ್ಯಾನ್ಸ್ ಮಾಡಿ ಖುಷಿಪಟ್ಟರು.

ಇದನ್ನೂ ಓದಿ: ಹೊಸ ವರ್ಷಾಚರಣೆ : ಎಂಜಿ ರಸ್ತೆ, ಬ್ರಿಗೇಡ್​​ ರೋಡ್​ನಲ್ಲಿ ಕಳೆಗಟ್ಟಿದ ಸಂಭ್ರಮಾಚರಣೆ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.