ನಾವು ನರೇಂದ್ರ ಮೋದಿ ಕುತ್ತಿಗೆ ಹಿಡಿದಿದ್ದೇವೆ, ಅವರನ್ನು ಅಧಿಕಾರದಿಂದ ತೆಗೆದುಹಾಕಬೇಕಿದೆ: ಲಾಲು ಪ್ರಸಾದ್

By ETV Bharat Karnataka Team

Published : Aug 29, 2023, 8:40 PM IST

Updated : Aug 31, 2023, 12:36 PM IST

thumbnail

ಪಾಟ್ನಾ (ಬಿಹಾರ): ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಪ್ರತಿಪಕ್ಷಗಳು ಒಗ್ಗಟ್ಟಿನ ಮಂತ್ರ ಜಪಿಸುತ್ತಿವೆ. ಕಾಂಗ್ರೆಸ್​ ಹಾಗೂ ಇತರ ಪಕ್ಷಗಳ 'ಇಂಡಿಯಾ' ಮೈತ್ರಿಕೂಟದ ಮತ್ತೊಂದು ಮಹತ್ವದ ಸಭೆ ಆಗಸ್ಟ್ 31ರಿಂದ ಮುಂಬೈನಲ್ಲಿ ನಡೆಯಲಿದೆ. ಇದಕ್ಕೂ ಮುನ್ನವೇ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ, ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: INDIA vs NDA: ಸೆ​ 1ರಂದು ಮುಂಬೈನಲ್ಲಿ ಎರಡೂ ಮೈತ್ರಿಕೂಟಗಳ ಮಹತ್ವದ ಸಭೆ.. INDIA ಲೋಗೋ ಅನಾವರಣ ಸಾಧ್ಯತೆ

ಬಿಹಾರ ರಾಜಧಾನಿ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ರಾಜಕಾರಣಿ ಲಾಲು ಪ್ರಸಾದ್​ ಮುಂಬೈನಲ್ಲಿ ನಡೆಯುವ ಪ್ರತಿಪಕ್ಷಗಳ ಮೈತ್ರಿಕೂಟದ ಸಭೆ ಕುರಿತು ಪ್ರತಿಕ್ರಿಯಿಸಿದರು. ''ಮುಂಬೈ ಮೇ ನರೇಂದ್ರ ಮೋದಿ ಕೆ ನರೇಟಿ ಪರ್ ಚಢ್ನೆ ಜಾ ರಹೇ ಹೈ ಹಮ್​ಲೋಗ್. ನರೇಂದ್ರ ಮೋದಿ ಕೆ ನರೇಟಿ ಕೋ ಪಕ್ಡೆ ಹುಯೆ ಹೈ ಹಮ್​, ಹಟಾನಾ ಹೈ'' (ಮುಂಬೈನಲ್ಲಿ ನಾವು ನರೇಂದ್ರ ಮೋದಿ ಅವರ ಕುತ್ತಿಗೆ ಏರಲು ಹೊರಟಿದ್ದೇವೆ. ನರೇಂದ್ರ ಮೋದಿ ಅವರ ಕುತ್ತಿಗೆಯನ್ನು ನಾವು ಹಿಡಿದಿದ್ದೇವೆ, ಅವರನ್ನು ಅಧಿಕಾರದಿಂದ ತೆಗೆದುಹಾಕಬೇಕಿದೆ) ಎಂದು ಲಾಲು ಹೇಳಿದ್ದಾರೆ.

2024ರ ಲೋಕಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ನಿಟ್ಟಿನಲ್ಲಿ ಪ್ರತಿಪಕ್ಷಗಳು ಪಾಟ್ನಾ ಹಾಗೂ ಬೆಂಗಳೂರಿನಲ್ಲಿ ಎರಡು ಸಭೆಗಳನ್ನು ನಡೆಸಿದ್ದಾರೆ. ಇದೀಗ ಮೂರನೇ ಸಭೆ ಮುಂಬೈನಲ್ಲಿ ನಡೆಯಲಿದೆ. ಈ ಕುರಿತು ಮಹಾರಾಷ್ಟ್ರ ಕಾಂಗ್ರೆಸ್​ನ ಹಿರಿಯ ನಾಯಕ ಅಶೋಕ್ ಚವಾಣ್ ಮಾತನಾಡಿ, ಆಗಸ್ಟ್ 31ರ ಸಂಜೆ ಅನೌಪಚಾರಿಕ ಸಭೆ ನಡೆಯಲಿದೆ. ಸೆಪ್ಟೆಂಬರ್ 1ರಂದು ಔಪಚಾರಿಕ ಸಭೆ ಜರುಗಲಿದೆ. ಈ ಮೂರನೇ ಸಭೆಯಲ್ಲಿ ಮುಂದಿನ ಅಜೆಂಡಾ ಕುರಿತು ಚರ್ಚೆ ನಡೆಯಲಿದೆ. ಆಗಸ್ಟ್ 31ರಂದು ಮೈತ್ರಿಕೂಟದ ಲೋಗೋ ಅನಾವರಣಗೊಳಿಸಬಹುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ನೀವು ಮದುವೆ ಮಾಡಿಕೊಳ್ಳಿ, ಈಗಲೂ ಸಮಯ ಮೀರಿಲ್ಲ, ನಮ್ಮ ಮಾತು ಕೇಳಿ..: ರಾಹುಲ್‌ಗೆ ಲಾಲು ಪ್ರಸಾದ್ ಸಲಹೆ- ವಿಡಿಯೋ

Last Updated : Aug 31, 2023, 12:36 PM IST

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.