ಹಿರೇಕೋಡಿಯಲ್ಲಿ ನಡೆದ ಜೈನಮುನಿ ಹತ್ಯೆ ಖಂಡಿಸಿ ದೆಹಲಿಯ ಜಂತರ್​ ಮಂತರ್​ನಲ್ಲಿ ಮೌನ ಪ್ರತಿಭಟನೆ

By

Published : Jul 17, 2023, 2:00 PM IST

thumbnail

ನವದೆಹಲಿ: ಬೆಳಗಾವಿ ಜಿಲ್ಲೆಯ ಹಿರೇಕೋಡಿ ನಂದಿಪರ್ವತ ಆಶ್ರಮದ ಜೈನಮುನಿ ಹತ್ಯೆ ಪ್ರಕರಣ ಖಂಡಿಸಿ ಜೈನ ಸಮುದಾಯದವರಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಇಂದು ಮೌನ ಪ್ರತಿಭಟನೆ ನಡೆಸಲಾಯಿತು. ಕರ್ನಾಟಕದಲ್ಲಿ ನಡೆದ ಜೈನಮುನಿ ಹತ್ಯೆಯು ಘೋರ ದುರಂತವಾಗಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಸಮುದಾಯದ ಮುಖಂಡರು ಒತ್ತಾಯ ಮಾಡಿದರು. ಶತ್ರುಗಳನ್ನು ಪ್ರೀತಿಯಿಂದ ನೋಡುವ, ಎಲ್ಲ ಸಮಾಜವನ್ನು ಪ್ರೀತಿಯಿಂದ ಕಾಣುವ ಜೈನಮುನಿಯ ಹತ್ಯೆ ಮಾನವ ಕುಲಕ್ಕೆ ನಿಜಕ್ಕೂ ಕೇಡು ಎಂದು ಆತಂಕ ವ್ಯಕ್ತಪಡಿಸಿದರು. 

ಕರ್ನಾಟಕದಲ್ಲಿ ನಡೆದ ಈ ದುರಂತ ಮತ್ಯಾವುದೇ ಪ್ರದೇಶದಲ್ಲಿ ಯಾವುದೇ ಸಮಾಜದ ಮುಖಂಡರಿಗೆ ಆಗಬಾರದು. ಹಾಗಾಗಿ, ಜೈನ ಸನ್ಯಾಸಿ ಹತ್ಯೆಗೈದ ಈ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು. ಜೊತೆಗೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕೆಂದು ಆಗ್ರಹಿಸಿ ಜೈನ ಸಮುದಾಯದವರು ದೆಹಲಿಯ ಜಂತರ್ ಮಂತರ್​ನಲ್ಲಿ ಮೌನ ಪ್ರತಿಭಟನೆ ನಡೆಸಿದರು. 

ಬೆಳಗಾವಿಯ ಹಿರೇಕೋಡಿ ನಂದಿ ಪರ್ವತ ಜೈನ ಆಶ್ರಮದ ಶ್ರೀ ಆಚಾರ್ಯ ಕಾಮಕುಮಾರ ನಂದಿ ಮಹಾರಾಜರನ್ನು ಕೊಲೆಗೈದ ಪಾತಕರು, ಅವರ ದೇಹವನ್ನು ಹಲವು ಭಾಗಗಳಾಗಿ ಕತ್ತರಿಸಿ ಕೊಳವೆ ಬಾವಿಯಲ್ಲಿ ಎಸಗಿದಿದ್ದರು. ಈ ಕೊಲೆ ಪ್ರಕರಣ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 

ಇದನ್ನೂ ಓದಿ: ಜೈನಮುನಿ ದೇಹ ಕೊಳವೆ ಬಾವಿಯಲ್ಲಿ ಪತ್ತೆ: 9 ಭಾಗಗಳಾಗಿ ತುಂಡರಿಸಿ ಎಸೆದ ಹಂತಕರು!

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.