ನೀರೊಳಗಿನ ಗುರಿ ಭೇದಿಸಿದ ಸ್ವದೇಶಿ ನಿರ್ಮಿತ ಹೆವಿವೇಟ್​ ಟಾರ್ಪಿಡೊ: ವಿಡಿಯೋ

By

Published : Jun 6, 2023, 11:39 AM IST

thumbnail

ನವದೆಹಲಿ: ಭಾರತೀಯ ನೌಕಾಪಡೆ ಸಶಸ್ತ್ರ ಉತ್ಪಾದನೆಯಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಹೆವಿ ವೇಟ್ ಟಾರ್ಪಿಡೊವನ್ನು ಮಂಗಳವಾರ ನೀರೊಳಗಿನ ಗುರಿ ಉಡಾಯಿಸುವ ಪ್ರಯೋಗ ಯಶಸ್ವಿಯಾಗಿದೆ.

'ಭಾರತೀಯ ನೌಕಾಪಡೆಯ ಮತ್ತು ಡಿಆರ್​​ಡಿಒ ಸಹಭಾಗಿತ್ವದಲ್ಲಿ ಈ ಸಾಧನ ಅಭಿವೃದ್ಧಿಪಡಿಸಲಾಗಿದೆ. ಇದು ಸಮುದ್ರದೊಳಗೆ ಶತೃ ಸಾಧನಗಳನ್ನು ನಿಖರ ಗುರಿಯೊಂದಿಗೆ ನಾಶ ಮಾಡುವ ಸಾಮರ್ಥ್ಯ ಹೊಂದಿದೆ. ಈ ಬಲಿಷ್ಠ ಟಾರ್ಪಿಡೋವನ್ನು ಸ್ಥಳೀಯವಾಗಿ ನಿರ್ಮಿಸಲಾಗಿದ್ದು, ಮಹತ್ವದ ಸಾಧನೆ' ಎಂದು ಎಂದು ಭಾರತೀಯ ನೌಕಾಪಡೆ ಹೇಳಿದೆ.

ಹಿಂದೂ ಮಹಾಸಾಗರದಲ್ಲಿ ಚೀನಾದಿಂದ ಹೆಚ್ಚುತ್ತಿರುವ ಬೆದರಿಕೆಯ ಹಿನ್ನೆಲೆಯಲ್ಲಿ ಭಾರತೀಯ ನೌಕಾಪಡೆಯು ತೀವ್ರ ನಿಗಾ ವಹಿಸಿದ್ದು, ಈ ಹಿನ್ನೆಲೆಯಲ್ಲಿ ಕೆಲವು ಸಿದ್ಧತೆಗಳನ್ನು ನಡೆಸಿದೆ. ಇದರ ಭಾಗವಾಗಿ ನೀರಿನೊಳಗಿನ ವಸ್ತುವನ್ನು ಯಶಸ್ವಿಯಾಗಿ ನಾಶಪಡಿಸುವ ಸ್ವದೇಶಿ ನಿರ್ಮಿತ ಟಾರ್ಪಿಡೊ ಯಶಸ್ವಿ ಪ್ರಯೋಗದ ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದೆ.

ಇದಕ್ಕೂ ಮೊದಲು ದೇಶೀಯವಾಗಿ ತಯಾರಿಸಿರುವ MH60 "ರೋಮಿಯೋ" ಹೆಲಿಕಾಪ್ಟರ್ ಅನ್ನು ಕೆಲ ದಿನಗಳ ಹಿಂದಷ್ಟೇ ಹಾರಾಟ ನಡೆಸಿ ಐಎನ್​ಎಸ್​ ವಿಕ್ರಾಂತ್​ ಮೇಲೆ ಯಶಸ್ವಿಯಾಗಿ ಮೊದಲ ಲ್ಯಾಂಡಿಂಗ್ ಮಾಡಲಾಗಿತ್ತು.

ಇದನ್ನೂ ಓದಿ: ಕೊಡಗು: ಸರ್ಕಾರಿ ಶಾಲೆಯಲ್ಲಿ ಸದ್ದಿಲ್ಲದೇ ನಡೆಯುತ್ತಿರುವ "ಫಲ ವೃಕ್ಷ ಕ್ರಾಂತಿ"

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.