ಹಾಕಿ ವಿಶ್ವಕಪ್ 2023.. ಮೊದಲ ಬಾರಿಗೆ ವಿಶ್ವಕಪ್​ ಆಡಲು ಚಿಲಿ ತಂಡ ಒಡಿಶಾಗೆ ಆಗಮನ

By

Published : Jan 5, 2023, 8:52 PM IST

Updated : Feb 3, 2023, 8:38 PM IST

thumbnail

ಭುವನೇಶ್ವರ(ಒಡಿಶಾ): ಹಾಕಿ ವಿಶ್ವಕಪ್‌ನಲ್ಲಿ ಮೊಟ್ಟ ಮೊದಲ ಪಂದ್ಯ ಆಡುತ್ತಿರುವ ಚಿಲಿ ಪುರುಷರ ಹಾಕಿ ತಂಡವು ಭುವನೇಶ್ವರದ ಬಿಜು ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದು ಇಳಿಯುತ್ತಿದ್ದಂತೆ ಆತ್ಮೀಯ ಸ್ವಾಗತ ಕೋರಲಾಯಿತು. ಎಫ್‌ಐಎಚ್ ಒಡಿಶಾ ಹಾಕಿ ಪುರುಷರ ವಿಶ್ವಕಪ್ 2023 ರ ಭುವನೇಶ್ವರ-ರೂರ್ಕೆಲಾದಲ್ಲಿ ಆಡಲು ಚಿಲಿ ಪುರುಷರ ಹಾಕಿ ತಂಡವು ಉತ್ಸುಕವಾಗಿದೆ. ಈ ತಂಡವು ರೂರ್ಕೆಲಾಗೆ ಹೊರಡುವ ಮೊದಲು ಭುವನೇಶ್ವರದಲ್ಲಿ ತಮ್ಮ ಅಂತಿಮ ಸಿದ್ಧತೆಗಳನ್ನು ನಡೆಸಲಿದೆ. ಈ ತಂಡದಲ್ಲಿ ಯುವ ಮತ್ತು ಹಿರಿಯ ಆಟಗಾರರಿದ್ದು, ಜನವರಿ 14 ರಂದು ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ನಮ್ಮ ತಂಡ ನಿಜವಾಗಿಯೂ ಉತ್ತಮವಾಗಿದ್ದು, ನಾವು ನಾಲ್ಕು ವರ್ಷಗಳಿಂದ ಒಟ್ಟಿಗೆ ಆಡುತ್ತಿದ್ದೇವೆ. ಹಾಕಿ ಪುರುಷರ ವಿಶ್ವಕಪ್ 2023 ರಲ್ಲಿ ನಾವು ಅತ್ಯುತ್ತಮ ಪ್ರದರ್ಶನ ನೀಡುತ್ತೇವೆ ಎಂದು ನಾಯಕ ಫೆರ್ನಾಂಡೊ ರೆನ್ಜ್ ವಿಶ್ವಾಸ ವ್ಯಕ್ತಪಡಿಸಿದರು.

Last Updated : Feb 3, 2023, 8:38 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.