ಉತ್ತರಾಖಂಡದ ರಾಮನಗರದಲ್ಲಿ ರಸ್ತೆ ದಾಟುತ್ತಿರುವ ಆನೆಗಳ ಹಿಂಡು-ವಿಡಿಯೋ

By

Published : Apr 11, 2023, 5:27 PM IST

thumbnail

ಉತ್ತರಾಖಂಡ: ಇಲ್ಲಿನ ರಾಮನಗರ ಅರಣ್ಯ ವಿಭಾಗದ ಕಲಾಧುಂಗಿ ವ್ಯಾಪ್ತಿಯ ರಾಮನಗರ- ಹಲದ್ವಾನಿ ರಸ್ತೆಗೆ ಇದ್ದಕ್ಕಿದ್ದಂತೆ ಆನೆಗಳು ಬಂದಿವೆ. ಈ ದೃಶ್ಯ ವಾಹನ ಸವಾರರನ್ನು ಚಿಂತೆಗೀಡು ಮಾಡಿತು. ವಾಹನ ಸಂಚಾರವೂ ಕೆಲಕಾಲ ಅಸ್ತವ್ಯಸ್ತವಾಯಿತು. ಎರಡೂ ಕಡೆ ವಾಹನಗಳ ಉದ್ದನೆಯ ಸರತಿ ಸಾಲುಗಳು ಕಂಡುಬಂದವು. ಆನೆಗಳು ರಸ್ತೆಗಿಳಿದಿರುವ ಮಾಹಿತಿ ಆಧರಿಸಿ, ಅರಣ್ಯ ಇಲಾಖೆ ಸಿಬ್ಬಂದಿ ಕೂಡ ಸ್ಥಳಕ್ಕೆ ಭೇಟಿ ಕೊಟ್ಟರು.

ಆನೆಗಳ ಮಧ್ಯೆ ಕೆಲವು ಜನರು ತಮ್ಮ ಪ್ರಾಣದ ಹಂಗು ತೊರೆದು ಸಂಚರಿಸುತ್ತಿದ್ದ ದೃಶ್ಯಗಳು ಕಂಡುಬಂದವು. ಸ್ಥಳದಲ್ಲಿ ನಿಯೋಜನೆಗೊಂಡ ಅರಣ್ಯ ಇಲಾಖೆ ಸಿಬ್ಬಂದಿ ಜನರನ್ನು ಆನೆಗಳ ಹಿಂಡಿನಿಂದ ದೂರ ನಿಲ್ಲುವಂತೆ ಸೂಚಿಸಿದರು. ಕೆಲ ಸಮಯದ ನಂತರ, ಆನೆಗಳ ಹಿಂಡು ರಸ್ತೆ ದಾಟಿದಾಗ, ಪುನಃ ರಸ್ತೆ ಸಂಚಾರಕ್ಕೆ ಮುಕ್ತವಾಯಿತು.

ಇದೇ ಸಮಯದಲ್ಲಿ, ರಂಜಿತ್ ಸಿಂಗ್ ಎಂಬವರು ತಮ್ಮ ವಾಹನದಿಂದ ಆನೆಗಳ ಹಿಂಡಿನ ವಿಡಿಯೊ ಮಾಡಿದ್ದಾರೆ. ಕಾರ್ಬೆಟ್ ಪಾರ್ಕ್‌ನೊಳಗೆ ಸಫಾರಿಗೆ ಹೋಗುವ ಪ್ರವಾಸಿಗರು ಅನೇಕ ಬಾರಿ ವನ್ಯಜೀವಿಗಳನ್ನು ನೋಡಲು ಸಿಗುವುದಿಲ್ಲ ಎಂದು ಹೇಳುತ್ತಾರೆ. ಆದರೆ, ಹಲವು ಬಾರಿ ವನ್ಯಜೀವಿಗಳು ರಸ್ತೆಗಳಲ್ಲಿ ಕಾಣಿಸಿಕೊಳ್ಳುತ್ತಿವೆ.

ಇದನ್ನೂ ಓದಿ: Watch.. ಪಾಳು ಬಿದ್ದ ಮನೆಯಲ್ಲಿ ಮೂರು ಚಿರತೆ ಮರಿಗಳು ಪತ್ತೆ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.