ಹೈದರಾಬಾದ್​ನಲ್ಲಿ ಭಾರಿ ಮಳೆ: ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು, ಜನ ಜೀವನ ಅಸ್ತವ್ಯಸ್ತ

By ETV Bharat Karnataka Team

Published : Sep 5, 2023, 6:06 PM IST

thumbnail

ಹೈದರಾಬಾದ್​: ತೆಲಂಗಾಣ ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿದೆ. ರಾಜಧಾನಿ ಹೈದರಾಬಾದ್‌ನಲ್ಲೂ ಭಾರಿ ಪ್ರಮಾಣದ ಮಳೆಯಾಗಿದೆ. ನಿನ್ನೆಯಿಂದ ಸುರಿಯುತ್ತಿರುವ ಸತತ ಮಳೆಗೆ ತಗ್ಗು ಪ್ರದೇಶಗಳಲ್ಲಿ ನೀರು ಶೇಖರಣೆಯಾಗಿ  ಅನೇಕ ಕಡೆ ರಸ್ತೆಗಳೆಲ್ಲ ಜಲಾವೃತಗೊಂಡಿವೆ. ಖೈರತಾಬಾದ್, ಪಂಜಗುಟ್ಟ, ನಾಂಪಲ್ಲಿ, ಬೇಗಂಪೇಟ್, ಅಮೀರ್ ಪೇಟ್​, ಸಿಕಂದರಾಬಾದ್, ಜೇಡಿಮೆಟ್ಲ, ಸೂರಾರಂ, ಬಾಲಾನಗರ, ಕುಕಟ್ ಪಲ್ಲಿ, ಎಲ್ ಬಿ ನಗರ, ಮಲಕ್ ಪೇಟ್​ದಲ್ಲಿ ಭಾರಿ ಮಳೆಯಾಗಿದೆ.

ಮಳೆಯಿಂದ ಇಲ್ಲಿಯ ಬೋಯಿನಪಲ್ಲಿ ಪ್ರದೇಶದ ಹಲವು ಕಾಲೋನಿಗಳು ಮುಳುಗಡೆಯಾಗಿವೆ. ಹಸ್ಮತ್ ಪೇಟೆಯ ಮುಖ್ಯರಸ್ತೆಯಲ್ಲಿ ನೀರು ಸಂಗ್ರಹವಾಗಿ ಇಡೀ ಪ್ರದೇಶವೇ ಕೆರೆಯಂತಾಗಿದೆ. ರಾಮಣ್ಣ ಕುಂಟಾ ಹೊಂಡದ ಬಳಿಯ ಶ್ರೀನಿವಾಸನಗರ ಕಾಲೋನಿಯಲ್ಲಿ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿವೆ. ಚರಂಡಿ ನೀರು ಮನೆಗಳಿಗೆ ನುಗ್ಗಿ, ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ. ಪುರಸಭೆ ಅಧಿಕಾರಿಗಳು ಕೂಡಲೇ ಸ್ಪಂದಿಸಿ ಮಳೆ ನೀರು ತೆಗೆಯಲು ಪ್ರಯತ್ನಿಸಬೇಕು ಎಂದು ಒತ್ತಾಯಿಸಿದ್ದಾರೆ.

ಗುಂಡ್ಲಪೋಚಂಪಲ್ಲಿ ಮೈಸಮ್ಮಗೌಡ ಎಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್‌ಗೆ ನೀರು ನುಗ್ಗಿವೆ. ಇಲ್ಲಿರುವ ಮಲ್ಲಾರೆಡ್ಡಿ, ಸೇಂಟ್ ಪೀಟರ್ಸ್, ನರಸಿಂಹರೆಡ್ಡಿ ಕಾಲೇಜುಗಳ ವಿದ್ಯಾರ್ಥಿಗಳು ಹಾಸ್ಟೆಲ್‌ಗಳಿಂದ ಹೊರಬರಲು ಪರದಾಡುವಂತಾಗಿದೆ. ಎರ್ರಗಡ್ಡ ಮುಖ್ಯರಸ್ತೆಯಲ್ಲಿ ನೀರು ನಿಂತ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಮ್ಯಾನ್‌ಹೋಲ್‌ನಲ್ಲಿ ಕಸ ಶೇಖರಣೆಯಾಗಿದ್ದರಿಂದ ನೀರನ ಹರಿವು ನಿಂತಿದೆ. ಪೊಲೀಸರು ಜನರಿಗೆ ಕಾಲುವೆಗಳು ಮತ್ತು ಚರಂಡಿಗಳನ್ನು ದಾಟಲು ಪ್ರಯತ್ನಿಸಬೇಡಿ ಎಂದು ಎಚ್ಚರಿಸಿದ್ದಾರೆ. 

ಇದನ್ನೂ ಓದಿ: ಕಲಬುರಗಿಯಲ್ಲಿ ಭಾರಿ ಮಳೆ: ಜನಜೀವನ ಅಸ್ತವ್ಯಸ್ತ.. ಸಿಡಿಲು ಬಡಿದು ಮಹಿಳೆ ಸಾವು

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.