ಬಳ್ಳಾರಿಯಲ್ಲಿ ಎನ್​ಟಿಆರ್​ ಪ್ರತಿಮೆ ಅನಾವರಣ ಮಾಡಿದ ಮಾಜಿ ಸಿಎಂ ಚಂದ್ರಬಾಬು ನಾಯ್ಡು: ವಿಡಿಯೋ

By ETV Bharat Karnataka Team

Published : Sep 5, 2023, 7:55 PM IST

thumbnail

ಬಳ್ಳಾರಿ: ತೆಲುಗು ಭಾಷೆ ಇರುವವರೆಗೂ ಎನ್​ಟಿಆರ್​ ಜೀವಂತವಾಗಿರುತ್ತಾರೆಂದು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ, ತೆಲುಗುದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಹೇಳಿದರು. ಅವರು ನಗರದ ಕಮ್ಮ ಭವನದಲ್ಲಿ ಸ್ಥಾಪಿಸಿರುವ ಏಳು ವರೆ ಅಡಿ ಎತ್ತರದ ಸ್ವರ್ಣವರ್ಣದ ನಟ ಸಾರ್ವಭೌಮ ಎನ್.ಟಿ.ರಾಮರಾವ್ ಅವರ ಪ್ರತಿಮೆ  ಅನಾವರಣಗೊಳಿಸಿ ಮಾತನಾಡಿದ ಅವರು, ಎನ್​ಟಿಆರ್​ ಒಂದು ಶಕ್ತಿ, ಅವರ ಮೂರ್ತಿ ಮುಂದೆ ನಿಂತು ಸಂಕಲ್ಪ ಮಾಡಿಕೊಂಡರೆ ಅದು ನರವೇರುತ್ತದೆ. ಕಾರ್ಯಕ್ರಮದಲ್ಲಿ ಇಲ್ಲಿನ ಜನರ ಉತ್ಸಾಹ ನೋಡಿದರೆ ನಾನು ಆಂಧ್ರದಲ್ಲಿ ಇದ್ದೇನಾ, ಬಳ್ಳಾರಿಯಲ್ಲಿದ್ದೇನಾ ಎಂದು ಗೊತ್ತಾಗುತ್ತಿಲ್ಲ. ಈ ವರ್ಷ ಎನ್​ಟಿಆರ್​ ಅವರ ನೂರನೇ ಜಯಂತ್ಯುತ್ಸವವಾಗಿದೆ ಎಂದರು. 

ಈ ಸಂದರ್ಭದಲ್ಲಿ ಅವರ ಪ್ರತಿಮೆ ಅನಾವರಣ ಮಾಡುತ್ತಿರುವುದಕ್ಕೆ ಸಂತಸ ವಾಗುತ್ತಿದೆ. ತೆಲುಗು ಸಿನಿಮಾ ರಂಗದಲ್ಲಿ ಮತ್ತೊಮ್ಮೆ ಎನ್​ಟಿಆರ್​ ಅವರಂತಹ ನಾಯಕ ನಟ ಹುಟ್ಟಿ ಬರೋದಿಲ್ಲ. ಅವರು ರಾಮ, ಭೀಮಾ, ವೆಂಕಟೇಶ್ವರ ಸ್ವಾಮಿ ಮೊದಲಾದ ಪಾತ್ರಗಳು ಜನ ಮಾನಸದಲ್ಲಿ ಇಂದಿಗೂ ಉಳಿದಿವೆ. ಎನ್​ಟಿಆರ್​ ಅವರನ್ನು ಕೇವಲ ಆಂಧ್ರದವರೆಂದು ಭಾವಿಸಬೇಕಿಲ್ಲ. ಅವರು ಈ ಭಾರತ ದೇಶದ ಆಸ್ತಿ ಇದ್ದಹಾಗೆ. ಅವರು ಆಂಧ್ರಪ್ರದೇಶದಲ್ಲಿ 1982ರಲ್ಲಿ ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದಿದ್ದರು. ಚಿತ್ರ ನಟರಾಗಿದ್ದ ಎನ್​ಟಿಆರ್​ ರಾಜಕೀಯಕ್ಕೆ ಬರಲು ಆಂಧ್ರದ ಜನರ ಸಂಕಷ್ಟವೇ ಕಾರಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ ನಾಗೇಂದ್ರ ಮಾತನಾಡಿ, ದೇಶದ ಬುದ್ಧಿವಂತ ರಾಜಕಾರಣಿಯಲ್ಲಿ ಚಂದ್ರಬಾಬು ನಾಯ್ಡು ಒಬ್ಬರು, ಒಳ್ಳೆಯ ಆಲೋಚನೆ ಮಾಡುವ ಮತ್ತು ಅಂದು ಕೊಂಡಿದ್ದನ್ನು ಮಾಡೋ ನಾಯಕ ನಾಯ್ಡು. 1999ರಲ್ಲಿ ನಾಯ್ಡು ಬಳ್ಳಾರಿಗೆ ಬಂದಿದ್ದು ಇದೀಗ ಮತ್ತೊಮ್ಮೆ ಬಂದಿದ್ದಾರೆ ಎಂದರು. ಈ ವೇಳೆ ನಗರ ಶಾಸಕ ನಾರಾ ಭರತ್ ರೆಡ್ಡಿ, ಕಮ್ಮ ಮಹಾಜನ ಸಂಘದ ಜಿಲ್ಲಾ ಅಧ್ಯಕ್ಷ ಮುಂಡ್ಲೂರು ಅನೂಪ್ ಕುಮಾರ್ ಮತ್ತಿತರರು ಇದ್ದರು.

ಇದನ್ನೂ ಓದಿ: ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯ ಸರ್ಕಾರ ವಿರೋಧಿಸುತ್ತದೆ: ಗೃಹ ಸಚಿವ ಡಾ ಜಿ ಪರಮೇಶ್ವರ್

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.