ರಾಮ ನವಮಿ: ಗ್ರಾಮೋತ್ಸವದ ವೇಳೆ ಪಟಾಕಿಯ ಕಿಡಿ ಬಿದ್ದು ಪೆಂಡಾಲ್ ಸುಟ್ಟು ಭಸ್ಮ

By

Published : Mar 30, 2023, 5:46 PM IST

thumbnail

ಪಶ್ಚಿಮ ಗೋದಾವರಿ (ಆಂಧ್ರ ಪ್ರದೇಶ): ರಾಮ ನವಮಿ ಆಚರಣೆ ವೇಳೆ ಅಗ್ನಿ ಅವಘಡ ಸಂಭವಿಸಿದ ಘಟನೆ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ. ದೇವಸ್ಥಾನದ ಆವರಣದಲ್ಲಿ ಹಾಕಿದ್ದ ಪೆಂಡಾಲ್ ಮೇಲೆ ಪಟಾಕಿ ಬಿದ್ದು ಈ ಅವಘಡ ನಡೆದಿದೆ. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, ಅಗ್ನಿ ದುರಂತದಿಂದ ಪೆಂಡಾಲ್ ಸೇರಿ 2 ಲಕ್ಷ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ.

ಇಲ್ಲಿಮ ತಣುಕು ಮಂಡಲದ ದುವ್ವ ಗ್ರಾಮದ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಇಂದು ರಾಮ ನವಮಿ ಆಚರಿಸಲಾಗಿತ್ತು. ರಾಮ ನವಮಿ ನಿಮಿತ್ತ ಗ್ರಾಮದಲ್ಲಿ ಗ್ರಾಮೋತ್ಸವ ಹಮ್ಮಿಕೊಳ್ಳುವುದು ವಾಡಿಕೆ. ಈ ಗ್ರಾಮೋತ್ಸವದ ಉದ್ಘಾಟನೆ ಮತ್ತು ಉತ್ಸವ ಮೂರ್ತಿಗಳ ಮೆರವಣಿಗೆ ಸಂದರ್ಭದಲ್ಲಿ ಪಟಾಕಿ ಸಿಡಿಸಲಾಗಿದೆ. ಈ ಪಟಾಕಿಗಳ ಬೆಂಕಿಯ ಕಿಡಿ ದೇವಸ್ಥಾನದ ಆವರಣದಲ್ಲಿ ಹಾಕಿದ್ದ ಪೆಂಡಾಲ್​ ಮೇಲೆ ಬಿದ್ದಿದೆ. ಪರಿಣಾಮ ಇಡೀ ಪೆಂಡಾಲ್​ಗೆ​ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಭಕ್ತರು ಭಯ ಭೀತರಾಗಿ ಓಡಿ ಹೋಗಿದ್ದಾರೆ. ನಂತರ ಸ್ಥಳೀಯರು ಹಾಗೂ ಭಕ್ತರು ಸೇರಿ ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ದೇವಸ್ಥಾನದಲ್ಲಿ ಬಾವಿಯ ಮೇಲ್ಛಾವಣಿ ಕುಸಿತ: ಮಹಿಳೆಯರು ಸೇರಿ ಐವರ ದುರ್ಮರಣ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.