ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿನ ಪಟಾಕಿ ಕಾರ್ಖಾನೆಯಲ್ಲಿ ಅಗ್ನಿ ಅವಘಡ: ವಿಡಿಯೋ

By

Published : Apr 19, 2023, 4:08 PM IST

thumbnail

ಮೈಸೂರು :ನಗರದ ಹೊರವಲಯದಲ್ಲಿ ಇರುವ ಹೆಬ್ಬಾಳ ಕೈಗಾರಿಕಾ ಪ್ರದೇಶದ ಪಟಾಕಿ ದಾಸ್ತಾನು ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಇದರಿಂದ ಇಡೀ ಕಾರ್ಖಾನೆ ಬೆಂಕಿಗೆ ಆಹುತಿಯಾಗಿದೆ. ಈ ಬೆಂಕಿ ಸುತ್ತಮುತ್ತಲಿನ ನಾಲ್ಕು ಕಾರ್ಖಾನೆಗಳಿಗೆ ಹರಡಿದ್ದು, ಸ್ಥಳಕ್ಕೆ ಸುಮಾರು 15 ಅಗ್ನಿಶಾಮಕ ದಳ ವಾಹನಗಳು ಬಂದು ಬೆಂಕಿ ನಂದಿಸುವ ಕೆಲಸಕ್ಕೆ ಮುಂದಾಗಿವೆ.  

ಇದನ್ನೂ ಓದಿ: ಶಾರ್ಟ್ ಸರ್ಕ್ಯೂಟ್ ಶಂಕೆ: ಅಗ್ನಿಗಾಹುತಿಯಾದ ಮೊಬೈಲ್ ಅಂಗಡಿ

ಬೆಂಕಿ ನಂದಿಸಲು ಹರಸಾಹಸಪಟ್ಟ ಅಗ್ನಿಶಾಮಕ ಸಿಬ್ಬಂದಿ: ಮೈಸೂರು ನಗರದ ಸರಸ್ವತಿಪುರಂ ಅಗ್ನಿ ಶಾಮಕ ಠಾಣೆಯ ಮೂರು ಅಗ್ನಿ ಶಾಮಕ ವಾಹನಗಳು, ಬನ್ನಿಮಂಟಪದ 3, ಹೆಬ್ಬಾಳದ 3, ಆರ್​ಬಿಐನ ಎರಡು, ಹುಣಸೂರು ನಗರದ ಒಂದು, ಟಿ ನರಸೀಪುರದ ಒಂದು, ಕೆ ಆರ್ ನಗರದ ಒಂದು ಹಾಗೂ ಶ್ರೀರಂಗಪಟ್ಟಣದ ಒಂದು ಅಗ್ನಿಶಾಮಕ ವಾಹನ ಬೆಂಕಿಯನ್ನು ನಂದಿಸಲು ಹರಸಾಹಸಪಡುತ್ತಿದ್ದಾರೆ. ಈ ಬೆಂಕಿ ಅವಘಡ ಸಂಭವಿಸಿರುವ ಸ್ವಲ್ಪ ದೂರದಲ್ಲೇ ಇನ್ಫೋಸಿಸ್ ಕ್ಯಾಂಪಸ್ ಸಹ ಇದೆ.

ಇದನ್ನೂ ಓದಿ: ಪೊಲೀಸ್ ಠಾಣೆ ಆವರಣದಲ್ಲಿ ಅಗ್ನಿ ಅವಘಡ: 61 ವಾಹನಗಳಿಗೆ ಹಾನಿ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.