ತೆಪ್ಪ ದರ ದುಪ್ಪಟ್ಟು: ಹೊಗೆನಕಲ್​ನಲ್ಲಿ ಪ್ರವಾಸಿಗರು-ತೆಪ್ಪ ನಡೆಸುವವರ ಮಧ್ಯೆ ಗಲಾಟೆ

By

Published : May 12, 2023, 11:54 AM IST

thumbnail

ಚಾಮರಾಜನಗರ: ದುಪ್ಪಟ್ಟು ದರ ವಸೂಲಿಯಿಂದ ಕೋಪಗೊಂಡು ತೆಪ್ಪ ನಡೆಸುವವರು ಹಾಗೂ ಪ್ರವಾಸಿಗರು ಹೊಡೆದಾಡಿಕೊಂಡಿರುವ ಘಟನೆ ಪ್ರಸಿದ್ಧ ಪ್ರವಾಸಿತಾಣ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಹೊಗೆನಕಲ್ ಜಲಪಾತದಲ್ಲಿ ನಡೆದಿದೆ. ಹೊಗೆನಕಲ್ ಜಲಪಾತ ತಮಿಳುನಾಡು ಹಾಗೂ ಕರ್ನಾಟಕ ಎರಡೂ ಭಾಗದಲ್ಲೂ ಹರಡಿಕೊಂಡಿದ್ದು ಗಲಾಟೆ ನಡೆದಿರುವುದು ತಮಿಳುನಾಡು ಭಾಗದಲ್ಲಿ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಶಿವಮೊಗ್ಗ ರಸ್ತೆ ಅಪಘಾತ: ಚಾಲಕನ ಮೊಬೈಲ್‌ ಮಾತು ಅವಘಡಕ್ಕೆ ಕಾರಣವಾಯಿತೇ?

ತಮಿಳುನಾಡು ಸರ್ಕಾರ ತೆಪ್ಪ ಸವಾರಿಗೆ 750 ರೂ. ನಿಗದಿ ಮಾಡಿದ್ದರೆ ಅಲ್ಲಿನ ಸಿಬ್ಬಂದಿ 4 ಸಾವಿರ ರೂ. ವಸೂಲಿ ಮಾಡುತ್ತಿದ್ದಾರೆ. ನದಿಯ ಒಂದು ಭಾಗಕ್ಕೆ ಕರೆದೊಯ್ದು ಹಣ ಕೊಡದಿದ್ದರೆ ವಾಪಸ್ ಬಿಡುವುದಿಲ್ಲ ಎಂದು ಕ್ಯಾತೆ ತೆಗೆದಿದ್ದಾರೆ ಎನ್ನಲಾಗಿದ್ದು, ಮಾತಿನ ಚಕಮಕಿ ನಡೆದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಪ್ರವಾಸಿಗರು ಹಾಗೂ ತೆಪ್ಪ ನಡೆಸುವವರು ಹೊಡೆದಾಡಿಕೊಳ್ಳುವುದನ್ನು ಪ್ರವಾಸಿರೊಬ್ಬರು ವಿಡಿಯೋ ಮಾಡಿದ್ದು ವೈರಲ್ ಆಗಿದೆ.

ಇದನ್ನು ಓದಿ: ಮಣಿಪುರದಲ್ಲಿ ಉಗ್ರಗಾಮಿಗಳ ದಾಳಿ: ಓರ್ವ ಪೊಲೀಸ್​ ಹುತಾತ್ಮ, ನಾಲ್ವರಿಗೆ ಗಾಯ

ಮತದಾನದಂದು ಕೈ, ಕಮಲ ಕಾರ್ಯಕರ್ತರ ಕಿತ್ತಾಟ; ಶಾಸಕರ ಸಹೋದರನ ಮೇಲೆ ಹಲ್ಲೆ- ವಿಡಿಯೋ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.