ಆರೋಪಿಯನ್ನ ವಿದ್ಯುತ್​ ಕಂಬಕ್ಕೆ ಕಟ್ಟಿ ಸಾರ್ವಜನಿಕವಾಗಿ ಥಳಿಸಿದ ಪೊಲೀಸರು.. ವಿಡಿಯೋ ವೈರಲ್​

By

Published : Jul 17, 2023, 3:54 PM IST

thumbnail

ಸೂರತ್ (ಗುಜರಾತ್​): ಇಲ್ಲಿನ ಸಯಾನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಪೊಲೀಸರು ಆರೋಪಿಯೊಬ್ಬನನ್ನು ಕೈಕಾಲು ಹಿಡಿದು ವಿದ್ಯುತ್ ಕಂಬದ ಬಳಿ ನಿಲ್ಲಿಸಿದ್ದಾರೆ. ನಂತರ ಸಯಾನ್ ಪೊಲೀಸ್ ಠಾಣೆಯ ಎಸ್‌ಐ ಕೈಯಲ್ಲಿ ದೊಣ್ಣೆ ಹಿಡಿದು ಆರೋಪಿಗೆ ದೊಣ್ಣೆಯಿಂದ ಹೊಡೆದಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ.

ಪಿಎಸ್​ವೈ ದೊಣ್ಣೆಯಿಂದ ಥಳಿಸಿರುವುದಕ್ಕೆ ತಡೆಯಲಾಗದೇ ಆರೋಪಿ ಕುಸಿದು ಬಿದ್ದಿರುವುದು ವೈರಲ್​ ಆದ ವಿಡಿಯೋದಿಲ್ಲಿದೆ. ಇದಾದ ಬಳಿಕ ಇತರ ಪೊಲೀಸ್ ಸಿಬ್ಬಂದಿ ಆರೋಪಿಯನ್ನು ಮತ್ತೆ ಎತ್ತಿಕೊಂಡು ಹೋಗಿ ವಿದ್ಯುತ್ ಕಂಬದ ಬಳಿ ಕರೆದೊಯ್ದು ನಿಲ್ಲುವಂತೆ ಮಾಡಿದ್ದಾರೆ. ಆಗ ಪಿಎಸ್​ಐ  ಮತ್ತೊಮ್ಮೆ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪರಿಣಾಮ ಮತ್ತೊಮ್ಮೆ ಆರೋಪಿ ಕುಸಿದು ಬಿದ್ದಿದ್ದಾನೆ. ಆರೋಪಿಗೆ ಕೈಕೋಳ ಹಾಕಲಾಗಿದೆ. ಆರೋಪಿಗಳ ವಿರುದ್ಧ ಸಂಜೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣವೂ ದಾಖಲಾಗಿದೆ.ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಕ್ಕೆ ಅವಕಾಶವಿರುವಾಗ ಸಾರ್ವಜನಿಕವಾಗಿ ಏಕೆ ಥಳಿಸುತ್ತಿದ್ದಾರೆ?  ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಇದಕ್ಕೆ ಸ್ಪಷ್ಟನೆ ನೀಡುರುವ ಎಸ್​​​ಐ, ಆರೋಪಿಗೆ ಥಳಿಸಿಲ್ಲ ಎಂದು ಹೇಳಿದ್ದಾರೆ. 

ಇದನ್ನೂ ಓದಿ: Thrashing Of Tribal Youth: ಜೆಸಿಬಿಗೆ ಕಟ್ಟಿ ಬುಡಕಟ್ಟು ಯುವಕನಿಗೆ ಥಳಿತ.. ಮೂವರು ಆರೋಪಿಗಳ ಬಂಧನ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.