120 ಕೆಜಿ ತೂಕದ ಬೈಕ್ ಹೊತ್ತು 30 ಸೆಕೆಂಡ್‌ನಲ್ಲಿ 100 ಮೀಟರ್ ಸಾಗಿದ ಪರಾಕ್ರಮಿ!

By

Published : Jan 5, 2023, 2:28 PM IST

Updated : Feb 3, 2023, 8:38 PM IST

thumbnail

ಬಿಹಾರ: ಬಿಹಾರದ ಕೈಮೂರ್ ಜಿಲ್ಲೆಯ 'ಹ್ಯಾಮರ್ ಹೆಡ್‌ಮ್ಯಾನ್' ಎಂದೇ ಜನಪ್ರಿಯರಾಗಿರುವ ಧರ್ಮೇಂದ್ರ ಇದೀಗ ಮತ್ತೊಂದು ಸಾಹಸ ಮಾಡಿದ್ದಾರೆ. ಭುಜದ ಮೇಲೆ 115 ಸಿಸಿ 120 ಕೆ.ಜಿ ತೂಕದ ಬೈಕ್ ಹೊತ್ತುಕೊಂಡು 30 ಸೆಕೆಂಡ್​ಗಳಲ್ಲಿ 100 ಮೀಟರ್ ದೂರ ಕ್ರಮಿಸಿ ಗಮನ ಸೆಳೆದಿದ್ದಾರೆ. ಡಿಸೆಂಬರ್ 31ರಂದು ತ್ರಿಪುರಾ ರಾಜಧಾನಿ ಅಗರ್ತಲಾದಲ್ಲಿ ನಡೆದ ಸ್ಪರ್ಧೆಯಲ್ಲಿ ಇವರು 21 ಪ್ರತಿಸ್ಪರ್ಧಿಗಳನ್ನು ಸೋಲಿಸಿ ಈ ಸಾಧನೆ ತೋರಿದರು. ಹ್ಯಾಮರ್ ಹೆಡ್​ಮ್ಯಾನ್ ಸಾಹಸ ಇಂಡಿಯಾ ಬುಕ್ ಆಫ್ ರೆಕಾರ್ಡ್​ ಸೇರಿದೆ. 'ಈ ಸಾಧನೆಯ ನಂತರ ಬಹಳ ಉತ್ಸುಕನಾಗಿದ್ದೇನೆ. ದೇಶದ ಯುವಕರಿಗೂ ಇದು ಸ್ಫೂರ್ತಿಯಾಗಲಿ. ಈಗ ನಾನು ವಿಶ್ವದಾಖಲೆ ಮಾಡುವ ತುಡಿತ ಹೊಂದಿದ್ದೇನೆ' ಎಂದು ತ್ರಿಪುರಾ ಪೊಲೀಸ್ ಇಲಾಖೆಯಲ್ಲಿ ಇನ್ಸ್‌ಪೆಕ್ಟರ್ ಕೂಡಾ ಆಗಿರುವ ಧರ್ಮೇಂದ್ರ ಹೇಳಿದರು.

Last Updated : Feb 3, 2023, 8:38 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.