ಕೃತಕ ಆನೆ ಮೇಲೆ ಕುಳಿತು ಬಂದು ನಾಮಪತ್ರ ಸಲ್ಲಿಸಿದ ಬಿಎಸ್‌ಪಿ ಅಭ್ಯರ್ಥಿ- ವಿಡಿಯೋ

By

Published : Apr 17, 2023, 10:31 PM IST

thumbnail

ಬೆಂಗಳೂರು : ಆನೇಕಲ್ 177 ಮೀಸಲು ಕ್ಷೇತ್ರದ ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಡಾ.ವೈ. ಚಿನ್ನಪ್ಪ ಕೃತಕ ಆನೆ ಮೇಲೆ ಕುಳಿತು ಮೆರವಣಿಗೆ ಮೂಲಕ ಆಗಮಿಸಿ ಶಕ್ತಿಕೇಂದ್ರದಲ್ಲಿ ನಾಮಪತ್ರ ಸಲ್ಲಿಸಿದರು. ಕೃತಕ ಆನೆ ಸವಾರಿ ಸಾರ್ವಜನಿಕರಲ್ಲಿ ಕುತೂಹಲ ಉಂಟು ಮಾಡಿತ್ತು.

ಆನೇಕಲ್ ಹೊಸ ಮಾಧ್ಯಮಿಕ ಶಾಲಾ ಆವರಣದಿಂದ ಪ್ರಮುಖ ಬೀದಿಗಳಲ್ಲಿ ಮಹಿಳಾ ಕೋಲಾಟ, ಗಾರುಡಿ ಬೊಂಬೆ ಹಾಗು ಬಿಎಸ್ಪಿ ಕಾರ್ಯಕರ್ತರೊಂದಿಗೆ ಆಗಮಿಸಿದ ಅವರು ನಾಮಪತ್ರ ಸಲ್ಲಿಸಿದರು. ಡಾ.ವೈ.ಚಿನ್ನಪ್ಪ 2 ಕೋಟಿಗೂ ಅಧಿಕ ಚರಾಸ್ತಿ ಮತ್ತು ಸ್ಥಿರಾಸ್ತಿ ಘೋಷಿಸಿದ್ದಾರೆ.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಹಲವು ವರ್ಷಗಳಿಂದ ಅಧಿಕಾರ ನಡೆಸಿರುವ ಬಿಜೆಪಿ ಆಗಲೀ ಕಾಂಗ್ರೆಸ್​ ಆಗಲೀ ಈ ಭಾಗಕ್ಕೆ ಯಾವುದೇ ಅಭಿವೃದ್ದಿ ಕೆಲಸ ಮಾಡಿಲ್ಲ. ಈ ಬಾರಿ ಬಹುಜನ ಸಮಾಜ ಪಕ್ಷಕ್ಕೆ ಮತ ನೀಡಿ, ನನ್ನನ್ನು ಗೆಲ್ಲಿಸಿಕೊಡಿ. ನಾನು ಗೆದ್ದರೆ ಶಿಕ್ಷಣ, ಆರೋಗ್ಯ ಮೂಲಭೂತ ಸೌಲಭ್ಯ ಒದಗಿಸುತ್ತೇನೆ" ಎಂದು ಭರವಸೆ ನೀಡಿದರು.   

ಇದನ್ನೂ ಓದಿ : 3ನೇ ಪಟ್ಟಿಯಲ್ಲಿ 3 ಕುಟುಂಬಕ್ಕೆ ಬಿಜೆಪಿ ಟಿಕೆಟ್: ಶೆಟ್ಟರ್ ಜಾಗಕ್ಕೆ ಟೆಂಗಿನಕಾಯಿಗೆ ಛಾನ್ಸ್‌

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.