ಬಾಲಸೋರ್​ ರೈಲು ಅಪಘಾತ- ಸಾವಿನ ಸಂಖ್ಯೆ 261ಕ್ಕೆ ಏರಿಕೆ: ಹಳಿಗಳ ಮೇಲೆ ಮರಣ ಮೃದಂಗ, ಸುಮಾರು 50 ಟ್ರೈನ್​ಗಳು ರದ್ದು​!

By

Published : Jun 3, 2023, 1:03 PM IST

thumbnail

ಬಾಲಸೋರ್​: ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 261ಕ್ಕೆ ಏರಿಕೆಯಾಗಿದ್ದು, ಸಾವಿರಾರೂ ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗುವ ಸಾಧ್ಯತೆಯೂ ಇದೆ. ಕೆಲವೊಂದು ವಿಷಯಗಳ ಬಗ್ಗೆ ರೈಲ್ವೇ ಅಧಿಕಾರಿಗಳು ಬಹಿರಂಗ ಪಡಿಸಿದ್ದಾರೆ. 

ರೈಲ್ವೇ ಅಪಘಾತದಲ್ಲಿ ನೂರಾರು ಜನ ಮೃತಪಟ್ಟಿದ್ದು, ಸಾವಿರಾರೂ ಜನ ಗಾಯಗೊಂಡಿದ್ದಾರೆ. ನಮ್ಮ ಎರಡನೇ ಆದ್ಯತೆ ಮೃತ ದೇಹಗಳನ್ನ ಸಂಬಂಧಪಟ್ಟ ಕುಟುಂಬಸ್ಥರಿಗೆ ಹಸ್ತಾಂತರಿಸುವುದಾಗಿದೆ. ಇದಕ್ಕೆ ಬೇಕಾದ ವ್ಯವಸ್ಥೆಯನ್ನು ನಾವು ರಾಜ್ಯ ಸರ್ಕಾರದ ಜೊತೆ ಕೈಗೂಡಿ ಕೆಲಸ ಮಾಡುತ್ತೇವೆ. ಅವರ ಎಕ್ಸ್​ - ಗ್ರೇಷಿಯಾ ಪಾವತಿಗಳು ಆದಷ್ಟು ಬೇಗ ಆಗುವಂತೆ ನೋಡಿಕೊಳ್ಳುತ್ತಿದ್ದೇವೆ ಎಂದು ಮಾಹಿತಿ ಪ್ರಕಟಣೆ ರೈಲ್ವೆ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ ಅಮಿತಾಭ್ ಶರ್ಮಾ ಹೇಳಿದರು. 

ಸದ್ಯಕ್ಕೆ 100 ಕ್ಕೂ ಹೆಚ್ಚು ಜನರು ಎಕ್ಸ್-ಗ್ರೇಷಿಯಾ ಪಾವತಿಗಳನ್ನು ಕ್ಲೈಮ್ ಮಾಡಿದ್ದಾರೆ. ಇದಕ್ಕಾಗಿ ಬಾಲಾಸೋರ್, ಸೊರೊ ಮತ್ತು ಬಹನಾಗಾ ಬಜಾರ್ ಸ್ಥಳಗಳಲ್ಲಿ ಕೌಂಟರ್‌ಗಳನ್ನು ತೆರೆಯಲಾಗಿದೆ. ಇಲ್ಲಿಯವರೆಗೆ 48 ರೈಲುಗಳನ್ನು ರದ್ದುಗೊಳಿಸಲಾಗಿದೆ. 39 ಮಾರ್ಗಗಳನ್ನು ಬದಲಾಯಿಸಲಾಗಿದೆ. ಈ ನಿರ್ಣಯ ಯಾವಾಗಬೇಕಾದರೂ ಬದಲಾಗುವ ಸಾಧ್ಯತೆ ಇದೆ ಎಂದರು.

ರೈಲು ಅಪಘಾತದಿಂದಾಗಿ ಅನೇಕ ರೈಲ್ವೇ ನಿಲ್ದಾಣದಲ್ಲಿ ರೈಲುಗಳನ್ನು ನಿಲ್ಲಿಸಲಾಗಿದೆ. ಇದರಿಂದ ಅನೇಕ ಪ್ರಯಾಣಿಕರು ತೊಂದರೆಗೀಡಾಗಿದ್ದಾರೆ. ಹೀಗಾಗಿ ಅವರಿಗೆ ಆಹಾರ, ನೀರು ಸೇರಿದಂತೆ ಮೂಲ ಸೌಲಭ್ಯವನ್ನು ಒದಗಿಸಲು ಏರ್ಪಾಡು ಮಾಡಲಾಗುತ್ತಿದೆ ಎಂದರು.

ಚೆನ್ನೈಗೆ ಪ್ರಯಾಣಿಕರನ್ನು ಹೊತ್ತು ಸಾಗಿದ ರೈಲು:  250 ಪ್ರಯಾಣಿಕರನ್ನು ಹೊತ್ತ ವಿಶೇಷ ರೈಲು C P13671 EX-BBS-MAS ಶನಿವಾರ ಬೆಳಿಗ್ಗೆ 8: 40 ಕ್ಕೆ ಬಾಲಸೋರ್​ನಿಂದ ಪ್ರಯಾಣ ಬೆಳಸಿತು. ರೈಲು ಸಂಖ್ಯೆ 12841 ರ ಎಲ್ಲಾ ನಿಗದಿತ ನಿಲ್ದಾಣಗಳಲ್ಲಿ ನಿಲ್ಲುವುದಾಗಿ ತಿಳಿದು ಬಂದಿದೆ. ವಿಶೇಷ ರೈಲು ಭಾನುವಾರ ಬೆಳಗ್ಗೆ 9 ಗಂಟೆಗೆ ತಾತ್ಕಾಲಿಕವಾಗಿ ಚೆನ್ನೈ ಸೆಂಟ್ರಲ್ ರೈಲ್ವೆ ನಿಲ್ದಾಣವನ್ನು ತಲುಪಲಿದೆ ಎಂದು ಅಧಿಕಾರಿ ಹೇಳಿದ್ದಾರೆ. 

ಓದಿ: ರೈಲು ದುರಂತ: ಕನ್ನಡಿಗರ ಸುರಕ್ಷತೆಗಾಗಿ ಘಟನಾ ಸ್ಥಳಕ್ಕೆ ಸಂತೋಷ್ ಲಾಡ್; ಧಾರವಾಡದ ರೈಲ್ವೆ ಮೇಲ್ಸೇತುವೆ ಉದ್ಘಾಟನೆ ರದ್ದು 

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.