ಅಜ್ಜಿ, ವಿಶೇಷಚೇತನ ಸಹೋದರಿ ಜೊತೆಗೆ ಬಂದು ಸ್ವಗ್ರಾಮದಲ್ಲಿ ಹಕ್ಕು ಚಲಾಯಿಸಿದ ನಟ ಡಾಲಿ ಧನಂಜಯ್​​

By

Published : May 10, 2023, 7:56 PM IST

thumbnail

ಅರಸೀಕೆರೆ (ಹಾಸನ) : ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಇಂದು ಸ್ಯಾಂಡಲ್​​ ವುಡ್​ ನಟ ನಟಿಯರು ಮತದಾನ ಮಾಡಿದರು. ಇದರ ಜೊತೆಗೆ ಸ್ಯಾಂಡಲ್ ವುಡ್ ಖ್ಯಾತ ನಟ ಡಾಲಿ ಧನಂಜಯ್ ತಮ್ಮ ಹುಟ್ಟೂರಾದ ಕಾಳೇನಹಳ್ಳಿ ಹಟ್ಟಿಯಲ್ಲಿ ಮತದಾನ ಮಾಡಿದರು. ಅಜ್ಜಿ ಮಲ್ಲಮ್ಮ, ಸಹೋದರ ಗಿರೀಶ ಹಾಗೂ ಸಹೋದರಿ ರಾಣಿಯೊಂದಿಗೆ ಆಗಮಿಸಿದ ಧನಂಜಯ್​ ಮತಗಟ್ಟೆ ಸಂಖ್ಯೆ 217ರಲ್ಲಿ ಮತ ಚಲಾಯಿಸಿದರು.

ಇದರ ಜೊತೆಗೆ ಇತರ ಸ್ಯಾಂಡಲ್​ವುಡ್​ ನಟ ನಟಿಯರು ಮತದಾನ ಮಾಡಿದರು. ಬ್ಯಾಟರಾಯನಪುರದಲ್ಲಿ ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್​ ದಂಪತಿ ಮತದಾನ ಮಾಡಿದರು. ವಿಜಯನಗರದಲ್ಲಿ ನಿರ್ದೇಶಕ ಜೋಗಿ ಪ್ರೇಮ್ ಹಾಗೂ ನಟಿ ರಕ್ಷಿತಾ ದಂಪತಿ ಮತದಾನ ಮಾಡಿದ್ದು, ಬೆಂಗಳೂರಿನಲ್ಲಿ ನಟ ಯಶ್​ ಮತದಾನ ಮಾಡಿದ್ರು.

ಅಲ್ಲದೆ ದುನಿಯಾ ವಿಜಯ್​, ಸಾಧು ಕೋಕಿಲ, ಸಪ್ತಮಿ ಗೌಡ, ಹರ್ಷಿಕಾ ಪೂಣಚ್ಚ, ನೆನಪಿರಲಿ ಪ್ರೇಮ್​, ಧ್ರುವ ಸರ್ಜಾ, ಗೋಲ್ಡನ್​ ಸ್ಟಾರ್​ ಗಣೇಶ್​, ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ, ಮಾಳವಿಕಾ ಅವಿನಾಶ್​, ಡಿವೈನ್​ ಸ್ಟಾರ್​ ರಿಷಭ್​ ಶೆಟ್ಟಿ ಮತ್ತಿತರು ಮತದಾನ ಮಾಡಿದರು. ರಾಜ್ಯ ವಿಧಾನಸಭಾ ಚುನಾವಣೆ ಇಂದು ಮುಕ್ತಾಯಗೊಂಡಿದೆ. ರಾಜ್ಯದ 224 ಕ್ಷೇತ್ರಗಳಿಗೆ ಮತದಾನ ನಡೆದಿದೆ. ಮೇ 13ರಂದು ಮತ ಎಣಿಕೆ ನಡೆಯಲಿದೆ.

ಇದನ್ನೂ ಓದಿ : ಚುನಾವಣೆ 2023: ಮತ ಚಲಾಯಿಸಿದ ಕನ್ನಡ ತಾರೆಯರು

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.