Mega Princess: ತಂದೆಯಾದ ರಾಮ್​ ಚರಣ್​: ಮಗು ನೋಡಲು ಆಸ್ಪತ್ರೆಗೆ ಬಂದ ಅಲ್ಲು ಅರ್ಜುನ್

By

Published : Jun 20, 2023, 4:08 PM IST

thumbnail

ಹೈದರಾಬಾದ್ (ತೆಲಂಗಾಣ): ತೆಲುಗು ಸೂಪರ್ ಸ್ಟಾರ್ ರಾಮ್ ಚರಣ್ ಮತ್ತು ಉಪಾಸನಾ ಕೊನಿಡೇಲಾ ದಂಪತಿ ಪೋಷಕರಾಗಿ ಭಡ್ತಿ ಪಡೆದಿದ್ದಾರೆ. ಇಂದು ಬೆಳಗ್ಗೆ ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯಲ್ಲಿ ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹೆಣ್ಣು ಮಗುವಿನ ಆಗಮನವು ಮೆಗಾ ಫಾಮಿಲಿಯಲ್ಲಿ ಸಂಭ್ರಮಾಚರಣೆಗೆ ಕಾರಣವಾಗಿದೆ. ಚಿರಂಜೀವಿ, ರಾಮ್​ ಚರಣ್​​ ಅಭಿಮಾನಿಗಳು ಸಹ ಸಂಭ್ರಮಾಚರಣೆಯನ್ನು ವಿವಿಧ ರೀತಿಯಲ್ಲಿ ಮಾಡುತ್ತಿದ್ದಾರೆ.

ಆರ್​ಆರ್​ಆರ್ ಸ್ಟಾರ್ ರಾಮ್ ಚರಣ್ ಅವರ ಸೋದರ ಸಂಬಂಧಿ ಮತ್ತು ಸೂಪರ್​ ಸ್ಟಾರ್ ಅಲ್ಲು ಅರ್ಜುನ್ ಅವರು ತಮ್ಮ ಪತ್ನಿ ಅಲ್ಲು ಸ್ನೇಹಾ ರೆಡ್ಡಿ ಅವರೊಂದಿಗೆ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿ ರಾಮ್​ ಚರಣ್​ ಮತ್ತು ಉಪಾಸನಾ ದಂಪತಿಯನ್ನು ಅಭಿನಂದಿಸಿದರು. ಹುಟ್ಟಿದ ಕೂಡಲೇ #MegaPrincess ಎಂದು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿರುವ ನವಜಾತ ಶಿಶುವನ್ನು ನೋಡಿ ಆಶೀರ್ವದಿಸಿದರು.  

ಇದನ್ನೂ ಓದಿ: ಪೋಷಕರಾದ ರಾಮ್ ​ಚರಣ್​ - ಉಪಾಸನಾ ದಂಪತಿ: ಅಪೋಲೋ ಆಸ್ಪತ್ರೆಯಲ್ಲಿ ಅಭಿಮಾನಿಗಳಿಂದ ಸಂಭ್ರಮಾಚರಣೆ

ರಾಮ್ ಚರಣ್ ತಂದೆ, ಸೂಪರ್​ ಸ್ಟಾರ್ ಚಿರಂಜೀವಿ ಆಸ್ಪತ್ರೆಯ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿ, ತಾತನಾಗುತ್ತಿರುವ ಬಗ್ಗೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ಮಗು ನಮ್ಮ "ಕುಟುಂಬಕ್ಕೆ ಅದೃಷ್ಟ" ಎಂದು ಹೇಳಿದರು. ಏಕೆಂದರೆ ಕಳೆದ ಕೆಲವು ತಿಂಗಳುಗಳಿಂದ ಕುಟುಂಬದಲ್ಲಿ ಸರಣಿ ಸಂತಸದ ಘಟನೆಗಳು ನಡೆಯುತ್ತಿವೆ ಎಂದು ತಿಳಿಸಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.