8 ತಿಂಗಳ ಗರ್ಭಿಣಿ: ಬಜೆಟ್​ ಅಧಿವೇಶನಕ್ಕೆ ಆಗಮಿಸಿ ಮೆಚ್ಚುಗೆಗೆ ಪಾತ್ರರಾದ ಬಿಜೆಪಿ ಶಾಸಕಿ!

By

Published : Feb 29, 2020, 6:11 PM IST

Updated : Feb 29, 2020, 7:08 PM IST

thumbnail

ಮುಂಬೈ: ಶಿವಸೇನೆ ನೇತೃತ್ವದ ಸರ್ಕಾರವಿರುವ ಮಹಾರಾಷ್ಟ್ರದಲ್ಲಿ ಬಜೆಟ್​ ಅಧಿವೇಶನ ನಡೆಯುತ್ತಿದ್ದು, ಅಧಿವೇಶನಕ್ಕೆ ಆಗಮಿಸುತ್ತಿರುವ ಶಾಸಕರು ತಮ್ಮ ತಮ್ಮ ಕ್ಷೇತ್ರದ ಸಮಸ್ಯೆಗಳ ಕುರಿತು ಮಾತನಾಡುತ್ತಿದ್ದಾರೆ. ಇದರ ಮಧ್ಯೆ ಬೀಡ್​ ಕ್ಷೇತ್ರದ ಮಹಿಳಾ ಶಾಸಕಿ 30ವರ್ಷದ ನಮಿತಾ ಮುಂಡದ 8 ತಿಂಗಳ ಗರ್ಭಿಣಿಯಾಗಿದ್ದರೂ ಅಸೆಂಬ್ಲಿಗೆ ಹಾಜರಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ವೇಳೆ ಮಾತನಾಡಿರುವ ಶಾಸಕಿ, ಅಧಿವೇಶನದಲ್ಲಿ ಭಾಗಿಯಾಗುವುದು ನನ್ನ ಕರ್ತವ್ಯ. ಕ್ಷೇತ್ರದಲ್ಲಿನ ಸಮಸ್ಯೆಗಳ ಕುರಿತು ಸದನದಲ್ಲಿ ಮಾತನಾಡಿರುವೆ. ಸದನದಲ್ಲಿ ನನ್ನ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಗಮನಹರಿಸಲಿದೆ ಎಂದು ನಮಿತಾ ಹೇಳಿದ್ದಾರೆ.

Last Updated : Feb 29, 2020, 7:08 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.