ಕಲಿಯಕ್ಕವಿಲೈನ ಪೊಲೀಸ್ ಅಧಿಕಾರಿ ಮೇಲಿನ ಶೂಟೌಟ್​ ಪ್ರಕರಣ: ಆರೋಪಿಗಳ ವೀಡಿಯೊ ಲಭ್ಯ

By

Published : Jan 12, 2020, 5:46 PM IST

thumbnail

ತಿರುವನಂತಪುರಂ: ಕಲಿಯಕ್ಕವಿಲೈನಲ್ಲಿ ಬುಧವಾರ ಪೊಲೀಸ್ ಅಧಿಕಾರಿಯೊಬ್ಬರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ತಮಿಳುನಾಡು ಅಸಿಸ್ಟೆಂಟ್ ಸಬ್‌ ಇನ್ಸ್ಪೆಕ್ಟರ್ ವಿನ್ಸೆಂಟ್‌ಗೆ ಗುಂಡು ಹಾರಿಸಿದ್ದರು. ಈ ಘಟನೆಗೂ ಮುನ್ನ ಇಬ್ಬರು ಅರೋಪಿಗಳಾದ ತೌಫೀಕ್ ಮತ್ತು ಅಬ್ದುಲ್ ಸಮೀರ್ ಎಂಬುವವರು ನಯತಿಂಕಾರದಲ್ಲಿರುವ ಮಸೀದಿಯಿಂದ ಹೊರಬರುತ್ತಿದ್ದರು. ಇಲ್ಲಿ ದೊರೆತಿರುವ ಮಾಹಿತಿ ಪ್ರಕಾರ, ಇಲ್ಲಿಂದ ಈ ಇಬ್ಬರು ಆರೋಪಿಗಳು ಆಟೋರಿಕ್ಷಾದಲ್ಲಿ ತೆರಳುತ್ತಾರೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಲಭ್ಯವಾಗಿದೆ. ಚೆಕ್‌ಪೋಸ್ಟ್‌ವೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ಪೊಲೀಸ್ ಅಧಿಕಾರಿಗೆ ಗುಂಡು ಹಾರಿಸಲಾಗಿದ್ದು, ಘಟನೆಯಲ್ಲಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.