ಉತ್ತರಕಾಶಿಯಲ್ಲಿ ವರುಣನಾರ್ಭಟ: ನೀರಿನಲ್ಲಿ ಕೊಚ್ಚಿ ಹೋದ ಎಟಿಎಂ ಕೇಂದ್ರ!

By

Published : Aug 11, 2022, 1:41 PM IST

Updated : Feb 3, 2023, 8:26 PM IST

thumbnail

ಉತ್ತರಕಾಶಿ(ಉತ್ತರಾಖಂಡ್): ಉತ್ತರಕಾಶಿಯಲ್ಲಿ ವರುಣನಾರ್ಭಟ ಮುಂದುವರಿದಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಪುರೋಲದಲ್ಲಿ ಕುಮೋಲಾ ನದಿ ಉಕ್ಕಿ ಹರಿದಿದ್ದು, ಎಂಟು ಅಂಗಡಿಗಳು ಕೊಚ್ಚಿ ಹೋಗಿವೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಎಟಿಎಂ ಕೂಡ ಕೊಚ್ಚಿ ಹೋಗಿದೆ. ಬುಧವಾರ ಸಂಜೆಯಷ್ಟೇ ಈ ಎಟಿಎಂನಲ್ಲಿ 24 ಲಕ್ಷ ರೂ. ಡೆಪಾಸಿಟ್ ಮಾಡಲಾಗಿತ್ತು. ಸದ್ಯ ಎಟಿಎಂನಲ್ಲಿ ಎಷ್ಟು ಹಣ ಉಳಿದಿದೆ ಎಂಬ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ ಎಂದು ಪಿಎನ್‌ಬಿ ಶಾಖೆಯ ವ್ಯವಸ್ಥಾಪಕ ಚಂಚಲ್ ಜೋಶಿ ಮಾಹಿತಿ ನೀಡಿದ್ದಾರೆ. ಉಳಿದಂತೆ ಅನೇಕ ಕಟ್ಟಡಗಳು ಅಪಾಯದ ಸ್ಥಿತಿಯಲ್ಲಿದೆ. ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದ್ದಾರೆ. ಭದ್ರತೆಯ ದೃಷ್ಟಿಯಿಂದ ಜನರನ್ನು ಸಮೀಪದ ಮನೆಗಳಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಪ್ರವಾಹ ಪ್ರದೇಶಗಳಲ್ಲಿ ಎಸ್‌ಡಿಆರ್‌ಎಫ್ ತಂಡ ಕಾರ್ಯವ್ರವೃತ್ತವಾಗಿದೆ.

Last Updated : Feb 3, 2023, 8:26 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.