ETV Bharat / sukhibhava

ಹವಾಮಾನ ಬದಲಾವಣೆ ಭಾರತದ ಅಂತರ್ಜಲ ಮಟ್ಟದ ಕುಸಿತವನ್ನು ಮೂರು ಪಟ್ಟು ಹೆಚ್ಚಿಸಲಿದೆ: ಅಧ್ಯಯನ

author img

By ETV Bharat Karnataka Team

Published : Sep 2, 2023, 10:38 AM IST

Warming climate to triple groundwater depletion rates in India
Warming climate to triple groundwater depletion rates in India

ಅಂತರ್ಜಲ ಕುಸಿತ ಮತ್ತು ಹವಾಮಾನ ಬದಲಾವಣೆ ದೇಶದ 1.4 ಬಿಲಿಯನ್​ ಜನರ ಜೀವನ ವ್ಯವಸ್ಥೆ ಮೇಲೆ ಪರಿಣಾಮ ಬೀರಲಿದೆ

ನ್ಯೂಯಾರ್ಕ್​: ತಾಪಮಾನದ ಏರಿಕೆಯೂ ಭಾರತದ ಅಂತರ್ಜಲದ ಮೇಲೆ ಭಾರೀ ಪರಿಣಾಮ ಬೀರಲಿದ್ದು, 2080ರ ಹೊತ್ತಿಗೆ ಅಂತರ್ಜಲದ ಕೊರತೆ ಮೂರು ಪಟ್ಟು ಹೆಚ್ಚುವಾಗುವ ಸಾಧ್ಯತೆ ಇದೆ. ಇದು ದೇಶದ ಆಹಾರ ಮತ್ತು ನೀರಿನ ಭದ್ರತೆ ಮೇಲೆ ಬೆದರಿಕೆ ಒಡ್ಡುತ್ತದೆ ಎಂದು ಅಧ್ಯಯನ ತಿಳಿಸಿದೆ.

ಆನ್​ಲೈನ್​ ಜರ್ನಲ್​ ಸೈನ್ಸ್​ ಅಡ್ವಾನ್ಸ್​ನಲ್ಲಿ ಈ ಕುರಿತು ಪ್ರಕಟಿಸಲಾಗಿದೆ. ನೀರಾವರಿಗಾಗಿ ಅಂತರ್ಜಲ ಮಟ್ಟವನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆಯುವ ಮೂಲಕ ಭಾರತದಲ್ಲಿನ ರೈತರು ತಾಪಮಾನ ಏರಿಕೆಗೆ ಹೊಂದಿಕೊಂಡಿದ್ದಾರೆ ಎಂದು ಅಧ್ಯಯನ ತೋರಿಸಿದೆ.

ಇದೇ ರೀತಿ ವರ್ತನೆಗಳು ಮುಂದುವರಿದರೆ, ಅಂತರ್ಜಲ ಮಟ್ಟ ಮೂರುರಷ್ಟು ಕುಸಿಯಲಿದೆ. ಭಾರತದಲ್ಲಿ ಅಂತರ್ಜಲ ಕುಸಿತ ಮತ್ತು ಹವಾಮಾನ ಬದಲಾವಣೆ ದೇಶದ 1.4 ಬಿಲಿಯನ್​ ಜನರ ಜೀವನ ವ್ಯವಸ್ಥೆ ಮೇಲೆ ಬೆದರಿಕೆ ಒಡ್ಡುತ್ತದೆ. ಈಗಾಗಲೇ ರೈತರು ಬಿಸಿಲಿನ ತಾಪ ಹೆಚ್ಚುತ್ತಿದ್ದಂತೆ ನೀರಾವರಿಯನ್ನು ಹೆಚ್ಚಿಸುತ್ತಿರುವುದನ್ನು ನಾವು ಕಂಡು ಹಿಡಿದಿದ್ದೇವೆ. ಈ ಹೊಂದಾಣಿಕೆ ತಂತ್ರವೂ ಭಾರತದಲ್ಲಿ ಹಿಂದಿನ ಅಂತರ್ಜಲ ಕುಸಿತವನ್ನು ಕಡಿಮೆ ಮಾಡುವುದಿಲ್ಲ ಎಂದು ಮಿಚಿಗನ್​ ಯುನಿವರ್ಸಿಟಿಯ ಅಸಿಸ್ಟಂಟ್​ ಪ್ರೋ ಮೆಹಾ ಜೈನ್​ ತಿಳಿಸಿದ್ದಾರೆ.

ಜಗತ್ತಿನಲ್ಲಿ ಹೆಚ್ಚಿನ ಅಂತರ್ಜಲ ಗ್ರಾಹಕರನ್ನು ಭಾರತ ಹೊಂದಿದ್ದು, ಇದು ಸ್ಥಳೀಯ ಮತ್ತು ಜಾಗತಿಕ ಆಹಾರ ಪೂರೈಕೆಗೆ ನಿರ್ಣಾಯಕ ಸಂಪನ್ಮೂಲವಾಗಿದೆ ಎಂದು ಅವರು ತಿಳಿಸಿದ್ದಾರೆ. ಅಕ್ಕಿ, ಗೋಧಿಗಳಂತಹ ಸಾಮಾನ್ಯ ಧಾನ್ಯಗಳನ್ನು ಬೆಳೆಯುವ ಜಾಗತಿಕವಾಗಿ ಎರಡನೇ ಅತಿ ದೊಡ್ಡ ದೇಶ ಭಾರತವಾಗಿದೆ. ಅಧ್ಯಯನವೂ ಅಂತರ್ಜಲ ಮಟ್ಟದ ಐತಿಹಾಸಿಕ ದತ್ತಾಂಶ, ಹವಾಮಾನ ಮತ್ತು ಬೆಳೆ ನೀರಿನ ಒತ್ತಡವನ್ನು ಇತ್ತೀಚಿನ ಬದಲಾವಣೆಗಳೊಂದಿಗೆ ವಿಶ್ಲೇಷಣೆ ನಡೆಸಿದೆ.

ಸಂಶೋಧಕರು ತಾಪಮಾನ ಮತ್ತು ಭಾರತದಲ್ಲಿ ಅಂತರ್ಜಲ ನಷ್ಟದ ಭವಿಷ್ಯದ ದರಗಳನ್ನು ಅಂದಾಜು ಮಾಡಲು 10 ಹವಾಮಾನ ಮಾದರಿಗಳನ್ನು ವಿಶ್ಲೇಷಿಸಿದ್ದಾರೆ. ಹಿಂದಿನ ಅಧ್ಯಯನಗಳು ಹವಾಮಾನ ಬದಲಾವಣೆ ಭಾರತದ ಪ್ರಮುಖ ಬೆಳೆಗಳ ಇಳುವರಿಯನ್ನು ಈ ಶತಮಾನದ ಮಧ್ಯಭಾಗದಲ್ಲಿ ಶೇ 20ರಷ್ಟು ಕಡಿಮೆ ಮಾಡಬಹುದು ಎಂದು ಅಧ್ಯಯನ ತೋರಿಸಿದೆ. ಇದೇ ವೇಳೆ, ದೇಶದ ಅಂತರ್ಜಲ ಮಟ್ಟ ಕೂಡ ಕುಸಿಯುವ ಎಚ್ಚರಿಕೆ ಗಂಟೆ ನೀಡಿದೆ.

ಸಂಶೋಧಕರ ತಂಡ ತಿಳಿಸುವಂತೆ ಮಳೆಗಾಲದಲ್ಲಿ ಅಂತರ್ಜಲ ಮಟ್ಟ ಹೆಚ್ಚಳವೂ ಚಳಿಗಾಲದಲ್ಲಿ ಉಂಟಾಗುವ ಬಿಸಿಲ ತಾಪಮಾನದಿಂದ ಕುಸಿಯುವಂತೆ ಮಾಡುತ್ತದೆ ಎಂದಿದ್ದಾರೆ. ಅನೇಕ ಕಡೆ ಆಗುತ್ತಿರುವ ಈ ಹವಾಮಾನ ಬದಲಾವಣೆಗಳು ಅಂತರ್ಜಲ ಮಟ್ಟವನ್ನು 2041-2080ರ ಹೊತ್ತಿಗೆ ಇಂದಿನ ಕುಸಿತಕ್ಕಿಂತ ಮೂರು ಪಟ್ಟು ಹೆಚ್ಚಾಗಿಸುವುದನ್ನು ತೋರಿಸಿದೆ.

ಬಳಕೆ ಮಾಡಿದ ಮಾದರಿ ಅಂದಾಜಿಸಿದಂತೆ ವಾಣಿಜ್ಯದಿಂದ ಸಾಮಾನ್ಯ ಪರಿಸ್ಥಿತಿಯಲ್ಲಿ ನಾವು ಯೋಜನೆ ಮಾಡಿದ್ದು, ಏರಿಕೆಯಾಗುತ್ತಿರುವ ತಾಪಮಾನ ಭವಿಷ್ಯದಲ್ಲಿ ಅಂತರ್ಜಲ ಮಟ್ಟದ ಕುಸಿತ ದರವನ್ನು ಮೂರುಪಟ್ಟು ಹೆಚ್ಚಿಸಲಿದೆ ಮತ್ತು ದಕ್ಷಿಣ ಮತ್ತು ಮಧ್ಯ ಭಾರತ ಸೇರಿದಂತೆ ಪ್ರಮುಖ ಹಾಟ್​ಸ್ಪಾಟ್​ನಲ್ಲಿ ಅಂತರ್ಜಲ ಮಟ್ಟ ಕುಸಿತ ವಿಸ್ತರಿಸಲಿದೆ ಎಂದು ಒಕ್ಲಾಮ ಯುನಿವರ್ಸಿಟಿಯ ಭೂಗೋಳ ಮತ್ತು ಪರಿಸರ ಸುಸ್ಥಿರತೆ ವಿಭಾಗದ ಮುಖ್ಯ ಲೇಖಕರಾದ ನಿಶಾನ್​ ಭಟ್ಟಾರೈ ತಿಳಿಸಿದ್ದಾರೆ. ಭಟ್ಟಾರೈ ಜೈನ್​ ಪ್ರಯೋಗಾಲಯದಲ್ಲಿ ಈ ಹಿಂದೆ ಸಂಶೋಧಕರಾಗಿದ್ದರು.

ನಿಯಮಗಳು ಮತ್ತು ಅಂರ್ಜಲ ಮಟ್ಟ ಉಳಿಕೆಯ ಮಧ್ಯಸ್ಥಿಕೆಯು ಅಂತರ್ಜಲ ಮಟ್ಟದ ಸಂರಕ್ಷಣೆಗೆ ಅಗತ್ಯವಾಗಿದೆ ಎಂದು ಸಲಹೆ ನೀಡಿದ್ದಾರೆ. ತಾಪಮಾನ ಹೆಚ್ಚಳ ಈಗಾಗಲೇ ಭಾರತದಲ್ಲಿ ಅಂತರ್ಜಲ ಕುಸಿತ ಸಮಸ್ಯೆ ಹೆಚ್ಚಿಸಿದೆ. ಈ ಹವಾಮಾನ ಬದಲಾವಣೆ ಭವಿಷ್ಯದಲ್ಲಿ ಆಹಾರ ಭದ್ರತೆ ಸವಾಲು ಹಾಕಬಹುದು ಎಂದಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: Extreme weather: ಹವಾಮಾನ ವೈಪರೀತ್ಯದಿಂದಾಗಿ ಹೆಚ್ಚುತ್ತಿದೆ ಬಾಲ್ಯ ವಿವಾಹ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.