ETV Bharat / sukhibhava

ಕೇರಳದಲ್ಲಿ ಅತಿ ಹೆಚ್ಚು ಕೋವಿಡ್​ ಪ್ರಕರಣ ದಾಖಲು; ಕೇಂದ್ರ ಆರೋಗ್ಯ ಸಚಿವರ ನೇತೃತ್ವದಲ್ಲಿ ಇಂದು ಉನ್ನತ ಮಟ್ಟದ ಸಭೆ

author img

By ETV Bharat Karnataka Team

Published : Dec 20, 2023, 11:26 AM IST

Union Health Minister to hold review meeting Covid Case raising
Union Health Minister to hold review meeting Covid Case raising

ದೇಶದಲ್ಲಿ ಉಸಿರಾಟದ ಕಾಯಿಲೆಗಳ ಮತ್ತು ಕೋವಿಡ್​​ 19 ಪ್ರಕರಣಗಳಲ್ಲಿ ಹೆಚ್ಚಳ ಹಿನ್ನೆಲೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದೆ. ಇನ್ನು ವಿಶ್ವ ಆರೋಗ್ಯ ಸಂಸ್ಥೆ (WHO) COVID19ರ ರೂಪಾಂತರ JN.1 ಅನ್ನು BA.2.86ರ ಪ್ರತ್ಯೇಕ ರೂಪಾಂತರ (VOI) ಎಂದು ಘೋಷಿಸಿದೆ.

ತಿರುವನಂತಪುರ: ದೇಶದಲ್ಲಿಯೇ ಅತಿ ಹೆಚ್ಚು ಕೋವಿಡ್​ ಪ್ರಕರಣ ಕೇರಳದಲ್ಲಿ ದಾಖಲಾಗಿದೆ. ಮಂಗಳವಾರ ಸಂಜೆ ಬಿಡುಗಡೆಯಾದ ವರದಿ ಅನುಸಾರ, ಕಳೆದ 24 ಗಂಟೆಯಲ್ಲಿ 115 ಹೊಸ ಕೋವಿಡ್​ ಪ್ರಕರಣ ವರದಿಯಾಗಿದ್ದು, ರಾಜ್ಯದಲ್ಲಿ ಸಕ್ರಿಯವಾಗಿರುವ ಪ್ರಕರಣ 1,749 ಆಗಿದೆ.

ಕೇಂದ್ರದ ದತ್ತಾಂಶದ ಪ್ರಕಾರ ಸೋಮವಾರ ದೇಶದಲ್ಲಿ 142 ಪ್ರಕರಣ ಪತ್ತೆಯಾಗಿದ್ದು, ಇದರಲ್ಲಿ 115 ಪ್ರಕರಣಗಳು ಕೇರಳದಲ್ಲಿ ವರದಿಯಾಗಿದೆ.

ರಾಜ್ಯದಲ್ಲಿ ಕೋವಿಡ್​​ ಪ್ರಕರಣ ಏರಿಕೆ ಕುರಿತು ಮಾತನಾಡಿರುವ ಆರೋಗ್ಯ ಸಚಿವೆ ವೀಣಾ ಜಾರ್ಜ್​​, ಆರೋಗ್ಯ ಅಧಿಕಾರಿಗಳು ಪರಿಸ್ಥಿತಿಯನ್ನು ಗಮನಿಸುತ್ತಿದ್ದು, ನಿರ್ವಹಣೆ ಮಾಡುತ್ತಿದ್ದಾರೆ. ಜನರು ಜ್ವರ ಮತ್ತು ಇನ್ನಿತರ ಸೋಂಕಿನ ಹಿನ್ನಲೆ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ಇವರನ್ನು ಪರೀಕ್ಷೆ ಮಾಡಿದಾಗ ಕೋವಿಡ್​ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಕೇರಳದಲ್ಲಿ ಸಕ್ರಿಯ ಕೋವಿಡ್​​ ಪ್ರಕರಣಗಳು ಏರಿಕೆ ಕಂಡಿದೆ ಎಂದರು

ಮಂಗಳವಾರ ಸಭೆಯ ನಡೆಸಿದ ಅವರು, ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ​ ನಿಯಂತ್ರಣದಲ್ಲಿದ್ದು, ಆತಂಕದ ಅವಶ್ಯಕತೆ ಇಲ್ಲ. ಈ ಹಿನ್ನೆಲೆ ಯಾವುದೇ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎಂದಿದ್ದಾರೆ. ರಾಜ್ಯದಲ್ಲಿ ಚಳಿಗಾಲದ ಹಿನ್ನಲೆ ಡೆಂಘೀ, ಸಾಮಾನ್ಯ ಜ್ವರ ಸೇರಿದಂತೆ ಅನೇಕ ವಿಧದ ಜ್ವರಗಳು ವರದಿಯಾಗುತ್ತಿದೆ. ಆಸ್ಪತ್ರೆಗೆ ಭೇಟಿ ನೀಡುವ ಜನರಿಗೆ ಮಸ್ಕ್​ ಧರಿಸುವಂತೆ ಶಿಫಾರಸು ಮಾಡಲಾಗಲಾಗಿದೆ.

ರಾಜ್ಯದ ತಿರುವನಂತಪುರ ಮತ್ತು ಕೇರಳದಲ್ಲಿ ಮಾತ್ರ ಕೋವಿಡ್​ ಪ್ರಕರಣದಲ್ಲಿ ಏರಿಕೆ ಕಂಡಿದೆ. ಈ ಎರಡು ಸ್ಥಳದಲ್ಲಿ ಹೆಚ್ಚಿನ ನಿಗಕ್ಕೆ ಸಲಹೆ ನೀಡಲಾಗಿದೆ. ಅಲ್ಲದೇ, ಅಧಿಕಾರಿಗಳಿಗೆ ಆಸ್ಪತ್ರೆಗಳಲ್ಲಿ ಎಲ್ಲ ಸೌಲಭ್ಯಗಳೊಂದಿಗೆ ಸಿದ್ಧತೆ ನಡೆಸುವಂತೆ ಕೂಡ ಸೂಚಿಸಲಾಗಿದೆ.

ಇಂದು ಉನ್ನತ ಮಟ್ಟದ ಸಭೆ: ದೇಶದಲ್ಲಿ ಉಸಿರಾಟದ ಕಾಯಿಲೆಗಳ ಮತ್ತು ಕೋವಿಡ್​​ 19 ಪ್ರಕರಣಗಳಲ್ಲಿ ಹೆಚ್ಚಳವಾಗಿರುವ ಹಿನ್ನಲೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳ ಕೇಂದ್ರಾಡಳಿತ ರಾಜ್ಯಗಳ ಆರೋಗ್ಯ ಮುಖ್ಯಸ್ಥರು ಮತ್ತು ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಈ ವೇಳೆ ದೇಶದಲ್ಲಿ ಕೋವಿಡ್​ ಮತ್ತು ಇತರೆ ಸೋಂಕಿನ ಕುರಿತು ಮೇಲ್ವಿಚಾರಣೆ ಮಾಡಲು ಮತ್ತು ಜಾಗರೂಕರಾಗಿರಲು ರಾಜ್ಯಗಳಿಗೆ ಸಲಹೆಯನ್ನು ನೀಡಲಿದೆ. ಕೋವಿಡ್​ ಪ್ರಕರಣ ನಿಯಂತ್ರಣ ಮತ್ತು ಸಿದ್ಧತೆ ಸಂಬಂಧ ಕೇಂದ್ರ ಸರ್ಕಾರ ಮಾರ್ಗ ಸೂಚನೆ ನೀಡಲಿದೆ. (ಐಎಎನ್​​ಎಸ್​)

JN.1 - BA.2.86ರ ಪ್ರತ್ಯೇಕ ರೂಪಾಂತರ- WHO:- ವಿಶ್ವ ಆರೋಗ್ಯ ಸಂಸ್ಥೆ (WHO) COVID19ರ ರೂಪಾಂತರ JN.1 ಅನ್ನು BA.2.86ರ ಪ್ರತ್ಯೇಕ ರೂಪಾಂತರ (VOI) ಎಂದು ಘೋಷಿಸಿದೆ. ಈ ವೈರಾಣು ಅತ್ಯಂತ ವೇಗವಾಗಿ ಹರಡುತ್ತಿದೆ ಎಂದು ಡಬ್ಲ್ಯುಹೆಚ್​ಒ ಹೇಳಿದೆ. ಇದನ್ನು ಹಿಂದೆ BA.2.86 ಉಪವರ್ಗಗಳ ಭಾಗವಾಗಿ VOI ಎಂದು ವರ್ಗೀಕರಿಸಲಾಗಿದೆ.

ಲಭ್ಯವಿರುವ ಪುರಾವೆಗಳ ಆಧಾರದ ಮೇಲೆ, JN.1 ನಿಂದ ಉಂಟಾಗುವ ಅಪಾಯ ಕಡಿಮೆ ಎಂದು ಅಂದಾಜಿಸಲಾಗಿದೆ. ಇದರ ಹೊರತಾಗಿಯೂ, ಉತ್ತರ ಗೋಳಾರ್ಧದಲ್ಲಿ ಚಳಿಗಾಲದ ಪ್ರಾರಂಭವಾಗಿರುವುದರಿಂದ JN.1 ಅನೇಕ ದೇಶಗಳಲ್ಲಿ ಉಸಿರಾಟ ಸಮಸ್ಯೆಯನ್ನು ಹೆಚ್ಚಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಈ ಹಿನ್ನೆಲೆಯಲ್ಲಿ WHO ನಿರಂತರವಾಗಿ ಈ ಸೋಂಕಿನ ಬಗ್ಗೆ ಮೇಲ್ವಿಚಾರಣೆ ಮಾಡುತ್ತಿದೆ.


ಇದನ್ನೂ ಓದಿ: JN.1 ತಳಿ ಮೇಲೆ ಕಣ್ಗಾವಲಿಡಿ, ಕೋವಿಡ್​ ಏರಿಕೆ ಕಾಣದಂತೆ ಜಾಗ್ರತೆ ವಹಿಸಿ; ರಾಜ್ಯಗಳಿಗೆ ಕೇಂದ್ರದ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.