ETV Bharat / sukhibhava

ವಿಶ್ವ ದತ್ತು ದಿನ: ಪ್ರೀತಿ ತುಂಬಿದ ಮನ - ಮನೆಗಳಿಗೆ ಕಾದು ಕುಳಿತ ಅನಾಥ ಕಂದಮ್ಮಗಳಿಗೆ ಬೇಕಿದೆ ಆಸರೆ

author img

By ETV Bharat Karnataka Team

Published : Nov 9, 2023, 3:06 PM IST

Updated : Nov 9, 2023, 3:36 PM IST

significance of adoption process in india on World Adoption Day
significance of adoption process in india on World Adoption Day

ದತ್ತು ಸ್ವೀಕಾರದಿಂದ ಮಗುವಿಗೆ ಪ್ರೀತಿ ತುಂಬಿದ ಮನೆಯ ಜೊತೆಗೆ ಮಕ್ಕಳಿಲ್ಲದ ಪೋಷಕರಿಗೂ ಮಗು ಪಡೆಯುವ ಭಾಗ್ಯ ಲಭಿಸುತ್ತದೆ.

ಬೆಂಗಳೂರು​: ಪೋಷಕರಿಲ್ಲದ, ಅವರಿಂದ ದೂರಾದ ಅಸಂಖ್ಯಾತ ಮಕ್ಕಳ ಪಾಲಿಗೆ ಆಸರೆ ಮತ್ತು ಬೆಂಬಲ ನೀಡುವಲ್ಲಿ ಅನಾಥಾಶ್ರಮಗಳ ಪಾತ್ರ ಹಿರಿದು. ಇಂತಹ ಮಕ್ಕಳು ಪೋಷಕರ ಪ್ರೀತಿ, ಆರೈಕೆಯಿಂದ ದೂರವೇ ಉಳಿದಿರುತ್ತಾರೆ. ಜಗತ್ತಿನಲ್ಲಿ ಅನೇಕ ಮಕ್ಕಳು ಇಂತಹ ಪ್ರೀತಿ, ಸುಸ್ಥಿರ ಬೆಳವಣಿಗೆಗೆ ಪೋಷಕರಿಗಾಗಿ ಕಾದು ಕುಳಿತಿರುತ್ತಾರೆ. ನಮ್ಮನ್ನು ಯಾರಾದರೂ ದತ್ತು ಪಡೆಯುತ್ತಾರೆಯೇ ಎಂಬ ಆಸೆ ಕಂಗಳಲ್ಲಿ ಕಾಯುತ್ತಿರುತ್ತಾರೆ.

ಇಂತಹ ಜಾಗತಿಕ ಅಗತ್ಯತೆ ಗಮನಿಸಿದ ಹ್ಯಾಂಕ್​ ಫೋರ್ಟೆನರ್ ಮತ್ತು ಅವರ ತಂಡವು ಅಡಾಪ್ಟ್ ಟುಗೆದರ್‌ ಎಂಬುದನ್ನು ಸ್ಥಾಪಿಸಿ, 2014ರಲ್ಲಿ ವಿಶ್ವ ದತ್ತು ದಿನ ಆರಂಭಕ್ಕೆ ಕಾರಣರಾದರು. ಲಾಭರಹಿತ ಕ್ರೌಡ್​ ಫಂಡಿಂಗ್​ ಫ್ಲಾಟ್​ಫಾರ್ಮ್​ ಆಗಿರುವ ಈ ಅಡಾಪ್ಟ್​​​ ಟುಗೆದರ್​ ಮೂಲಕ ಪೋಷಕರಿಗಾಗಿ ಹುಡುಕಾಡುತ್ತಿರುವ ಮತ್ತು ಮಕ್ಕಳಿಗಾಗಿ ಹಂಬಲಿಸುವವರ ನಡುವಿನ ಅಂತರ ಕಡಿಮೆ ಮಾಡಿದರು.

ದತ್ತು ತೆಗೆದುಕೊಳ್ಳುವ ವಿಚಾರದಲ್ಲಿ ಅಮೆರಿಕ ಪ್ರಮುಖ ಪಾತ್ರ ವಹಿಸಿದೆ. ಇಲ್ಲಿ ಸ್ಥಳೀಯವಾಗಿ ಶೇ.75ರಷ್ಟು ಮಕ್ಕಳನ್ನು ದತ್ತು ಪಡೆಯಲಾಗುವುದು. ಇಲ್ಲಿ ಅಂತರರಾಷ್ಟ್ರೀಯ ದತ್ತು ಪ್ರಮಾಣ ಇಳಿಕೆ ಕಂಡು ಸ್ಥಳೀಯ ಮಕ್ಕಳ ದತ್ತು ಪಡೆಯಲು ಮುಂದಾಗಿದೆ. ದತ್ತು ಪಡೆಯುವಲ್ಲಿ ಖಾಸಗಿ ದತ್ತುಗಳು ಮತ್ತು ಪೋಷಕ ಆರೈಕೆಯ ನಡುವೆ ಸಮಾನ ಭಾಗಗಳಾಗಿ ವಿಂಗಡಿಸಲಾಗಿದೆ.

ಭಾರತದಲ್ಲಿ ದತ್ತು ಪಡೆಯುವಿಕೆ ಪ್ರಮಾಣ: ಭಾರತದಲ್ಲಿ ಅನಾಥ ಮಕ್ಕಳ ದತ್ತು ಪಡೆಯುವಿಕೆಯು ಅನೇಕ ಸವಾಲು ಮತ್ತು ಅವಕಾಶಗಳನ್ನು ಹೊಂದಿದೆ. ದತ್ತು ಪಡೆಯುವಿಕೆ ಪ್ರಕ್ರಿಯೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಡಿ ಕಾರ್ಯನಿರ್ವಹಿಸುವ ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರ (ಸಿಎಆರ್​​ಎ) ನಡೆಸುತ್ತದೆ. ​ಇದು ದೇಶದೊಳಗೆ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಪ್ರಕ್ರಿಯೆ ನಡೆಸುವ ನೋಡಲ್​ ಏಜೆನ್ಸಿಯಾಗಿ ಕೆಲಸ ಮಾಡುತ್ತದೆ.

ಸಿಎಆರ್​​ಎ ದತ್ತಾಂಶದ ಪ್ರಕಾರ, 2021-22ರಲ್ಲಿ ಭಾರತದಲ್ಲಿ 2,992 ಮಕ್ಕಳ ದತ್ತು ಪಡೆಯಲಾಗಿದೆ. ಇದರ ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದಾಗ ಈ ಸಂಖ್ಯೆ ಇಳಿಕೆಯಾಗಿದೆ. 2019-20ರಿಂದ ಈ ದತ್ತು ಪಡೆಯುವಿಕೆ ಪ್ರಕ್ರಿಯೆಯಲ್ಲಿ ವರ್ಷದಿಂದ ವರ್ಷಕ್ಕೆ ದೇಶದಲ್ಲಿ ಇಳಿಕೆ ಕಂಡಿದೆ. ಇದೇ ರೀತಿಯ ಇಳಿಕೆಯನ್ನು ಅಂತರದೇಶೀಯ ಪ್ರಕ್ರಿಯೆಯಲ್ಲೂ ಕಾಣಬಹುದು. 2021-22ರಲ್ಲಿ ಅಂತರದೇಶೀಯವಾಗಿ 414 ಮಕ್ಕಳನ್ನು ದತ್ತು ಪಡೆದರೆ ಇದರ ಹಿಂದಿನ ವರ್ಷ 417 ಮಕ್ಕಳನ್ನು ದತ್ತು ಸ್ವೀಕರಿಸಲಾಗಿದೆ.

ಭಾರತದಲ್ಲಿ ದತ್ತು ಸ್ವೀಕಾರ ದರ ಕಡಿಮೆಯಾಗಲು ಕಾರಣ ಸಾಮಾಜಿಕ ವಿಷಯಗಳು. ಇದರಲ್ಲಿ ಜಾತಿ, ವರ್ಗ, ವಂಶ ಎಲ್ಲಾ ಅಂಶಗಳು ಸೇರಿವೆ. ಇದು ಐತಿಹಾಸಿಕವಾಗಿ ದತ್ತು ತೆಗೆದುಕೊಳ್ಳುವ ವರ್ತನೆಗಳ ಮೇಲೆ ಪ್ರಭಾವ ಬೀರಿದೆ. ದತ್ತು ತೆಗೆದುಕೊಳ್ಳಲು ಕಾಯುತ್ತಿದ್ದ ಪೋಷಕರ ಸಂಖ್ಯೆ ಕೂಡ ಗಮನಾರ್ಹವಾಗಿ ಬದಲಾಗಿದೆ.

ಈ ಬದಲಾವಣೆಯ ಹೊರತಾಗಿಯೂ, ಸಮಸ್ಯೆಯ ಪ್ರಮಾಣ ಗಮನಾರ್ಹವಾಗಿದೆ. ಭಾರತದಲ್ಲಿ ಸರಿಸುಮಾರು 29.6 ಮಿಲಿಯನ್​ ಅನಾಥ, ಸಿಕ್ಕಿದ, ಪರಿತ್ಯಕ್ತ ಮಕ್ಕಳಿದ್ದಾರೆ ಎಂದು ಅಂದಾಜಿಸಲಾಗಿದೆ. ಸಿಎಆರ್​ಎ ಪ್ರಕಾರ, ಇವರನ್ನು ಸಣ್ಣ ಸಾಂಸ್ಥಿಕ ಸಂಖ್ಯೆ ಆರೈಕೆ ಮಾಡುತ್ತಿದೆ. ಇಂತಹ ಮಕ್ಕಳನ್ನು ಸಣ್ಣ ಪ್ರಮಾಣದಲ್ಲಿ ಅಂದರೆ ವರ್ಷದಲ್ಲಿ 3 ರಿಂದ 4 ಸಾವಿರ ಮಕ್ಕಳ ದತ್ತು ಪ್ರಕ್ರಿಯೆ ನಡೆಸಲಾಗುವುದು. ಭಾರತದಲ್ಲಿ 16 ಸಾವಿರ ಪೋಷಕರು ಮಕ್ಕಳ ದತ್ತುಗಾಗಿ ಕಾದು ಕುಳಿತಿದ್ದಾರೆ. ಆದರೆ, ಕಾನೂನುಬದ್ದವಾಗಿ ದತ್ತು ಸ್ವೀಕಾರ ಮಾಡಲು ಇರುವ ಮಕ್ಕಳ ಸಂಖ್ಯೆಯು ಬೇಡಿಕೆಗಿಂತ ಕಡಿಮೆ ಇದೆ. (ಐಎಎನ್​ಎಸ್​)

ಇದನ್ನೂ ಓದಿ: ನಿಮ್ಮ ಮುದ್ದು ಕಂದನ ತ್ವಚೆ ಬಗ್ಗೆ ಇರಲಿ ಕಾಳಜಿ; ಚಳಿಗಾಲದ ಆರೈಕೆ ಹೀಗಿರಲಿ

Last Updated :Nov 9, 2023, 3:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.