ETV Bharat / sukhibhava

ಕಳೆದ 12 ತಿಂಗಳಲ್ಲಿ ಅತಿ ಹೆಚ್ಚು ತಾಪಮಾನಕ್ಕೆ ಒಳಗಾದ ಭೂಮಿ

author img

By ETV Bharat Karnataka Team

Published : Nov 11, 2023, 1:05 PM IST

Past 12 month period recorded hottest on earth Climate Central study says
Past 12 month period recorded hottest on earth Climate Central study says

ಅಧ್ಯಯದ ಫಲಿತಾಂಶ ಪ್ರಕಾರ ನವೆಂಬರ್​ 2022ರಿಂದ ಅಕ್ಟೋಬರ್​ 2023ರ ವರೆಗೆ 12 ತಿಂಗಳ ಕಾಲ ಅತಿ ಬಿಸಿಯಾದ ತಾಪಮಾನ ದಾಖಲಾಗಿದೆ.

ಹೈದರಾಬಾದ್​: ಕಳೆದ 12 ತಿಂಗಳಿನಿಂದ ಭೂಮಿಯು ಅತ್ಯಂತ ಬಿಸಿ ತಾಪಮಾನಕ್ಕೆ ಸಾಕ್ಷಿಯಾಗಿದ್ದು, ಹವಾಮಾನ ಬದಲಾವಣೆಯನ್ನು ಅನುಭವಿಸಿದೆ. ಈ ಕುರಿತು ಗಂಭೀರ ಚರ್ಚೆಯ ಹೊರತಾಗಿಯೂ ತ್ಯಾಜ್ಯ ವಸ್ತು ಸುಡುವಿಕೆ ಮತ್ತು ಇತರೆ ಮಾನವ ಚಟುವಟಿಕೆಗಳು ಹೆಚ್ಚಿವೆ ಎಂದು ಹೊಸ ಅಧ್ಯಯನ ತಿಳಿಸಿದೆ.

ವಿಜ್ಞಾನಿಗಳು ಮತ್ತು ಹವಾಮಾನ ಬದಲಾವಣೆ ದತ್ತಾಂಶ ಮತ್ತು ಮಾಹಿತಿ ಸಂಗ್ರಹಕಾರ ಸಂವಹನಕಾರರ ಸ್ವತಂತ್ರ ಗುಂಪಾದ ಕ್ಲೈಮೆಟ್​ ಸೆಂಟ್ರಲ್​ ನಡೆಸಿದ ಅಧ್ಯಯನದಲ್ಲಿ ಭೂಮಿಯು 1.3ಡಿಗ್ರಿ ಸೆಲ್ಸಿಯಸ್​​ಗಿಂತ ಹೆಚ್ಚಿನ ಶಾಖವನ್ನು ಅನುಭವಿಸಿದೆ. ಇದು ಪೂರ್ವ ಉದ್ಯಮದ ಹವಾಮಾನವನ್ನು ಈ ಸಮಯದಲ್ಲಿ ಅನುಭವಿಸಿದೆ ಎಂದು ಮಾಹಿತಿ ನೀಡಿದೆ.

ಹಸಿರುಮನೆ ಇಂಗಾಲದ ಹೊರಸೂಸುವಿಕೆ ಕುರಿತು ಜಾಗತಿಕ ನಾಯಕರು ಕ್ರಮ ಕೈಗೊಳ್ಳುವವರೆಗೆ ತಾಪಮಾನವು ಏರಿಕೆ ಕಾಣುತ್ತಿದ್ದು, ವಿಪರೀತ ಹವಾಮಾನವೂ ಮತ್ತಷ್ಟು ಕೆಟ್ಟದಾಗುತ್ತದೆ. ಪ್ರಸ್ತುತ ನೀತಿಗಳಿಂದ ತಾಪಮಾನವು ಹೀಗೆ ಮುಂದುವರೆಯಲಿದ್ದು, ಭೂಮಿಯು 3 ಮಿಲಿಯನ್​ ವರ್ಷದಲ್ಲೇ ಅತಿ ಹೆಚ್ಚು ಬಿಸಿಗೆ ಸಾಕ್ಷಿಯಾಗಲಿದೆ ಎಂಬ ಆಘಾತಕಾರಿ ಅಂಶ ಹೊರಬಿದ್ದಿದೆ.

ಈ ಅಧ್ಯಯನವು ಕಳೆದ 12 ತಿಂಗಳಲ್ಲೇ ಜಗತ್ತಿನ ವಿವಿಧ ಕಡೆಗಿನ ಹವಾಮಾನದ ಬದಲಾವಣೆಗೆ ಕಾರಣವಾಗುವ ತಾಪಮಾನವನ್ನು ದಾಖಲಿಸಿದೆ.

ಪ್ರಮುಖ ಫಲಿತಾಂಶ: ಅಧ್ಯಯದ ಫಲಿತಾಂಶ ಪ್ರಕಾರ, ನವೆಂಬರ್​ 2022ರಿಂದ ಅಕ್ಟೋಬರ್​ 2023ರ ವರೆಗೆ 12 ತಿಂಗಳ ಕಾಲ ಅತಿ ಬಿಸಿಯಾದ ತಾಪಮಾನ ದಾಖಲಿಸಿದ್ದು, ಇದು ದೀರ್ಘಕಾಲದ ಜಾಗತಿಕ ತಾಪಮಾನದ ಪರಿಸ್ಥಿತಿಯನ್ನು ಸ್ಥಿರವಾಗಿಸಿದೆ. ಜಾಗತಿಕ ಸರಾಸರಿ ತಾಪಮಾನ (ಜಿಎಂಟಿ)ಯು ಪೂರ್ವ ಉದ್ಯಮ ಹವಾಮಾನಕ್ಕಿಂತ 1.3 ಡಿಗ್ರಿ ರಷ್ಟಿದೆ.

ಅಧ್ಯಯನವು ಮತ್ತೊಂದು ಆಘಾತಕಾರಿ ಅಂಶವನ್ನು ಹೊರ ಹಾಕಿದ್ದು, ಕಳೆದ 12 ತಿಂಗಳ ಹವಾಮಾನ ಬದಲಾವಣೆಯಿಂದ ಜಾಗತಿಕವಾಗಿ ನಾಲ್ಕರಲ್ಲಿ ಒಬ್ಬರು (1.9 ಬಿಲಿಯನ್​ ಜನರು) ಅಧಿಕ ಮತ್ತು ಅಪಾಯಕಾರಿ ಶಾಖಲೆಯ ಅಲೆಗೆ ಗುರಿಯಾಗಿದ್ದಾರೆ. ವರ್ಷದಲ್ಲಿ ಶೇ 90ರಷ್ಟು ಜನರು ಕನಿಷ್ಠ 10 ದಿನ ಅಧಿಕ ತಾಪಮಾನಕ್ಕೆ ಸಿಲುಕಿದ್ದಾರೆ.

ಎಲ್​ ನಿನೋ ಮತ್ತು ಹಡಗು ಮಾಲಿನ್ಯದ ಕಡಿತದ ಜೊತೆಗೆ ಇತರೆ ಅಂಶಗಳು ಕೂಡ ಕಳೆದ 12 ತಿಂಗಳಲ್ಲಿ ಜಾಗತಿಕ ತಾಪಮಾನ ಹೆಚ್ಚಳಕ್ಕೆ ಸಣ್ಣ ಪ್ರಭಾವವನ್ನು ಹೊಂದಿದೆ. ಮಾನವ ಹಸಿರು ಮನೆ ಪರಿಣಾಮಕ್ಕೆ ಹೋಲಿಕೆ ಮಾಡಿದಾಗ ಈ ಪ್ರಮಾಣ ಕಡಿಮೆ ಇದೆ.

12 ತಿಂಗಳ ಅವಧಿಯ ಈ ಅಧಿಕ ತಾಪಮಾನವು ಜಗತ್ತಿನೆಲ್ಲೆಡೆ ದಾಖಲೆ ಮಟ್ಟದ ವಿಪರೀತ ತಾಪಮಾನಕ್ಕೆ ಸಾಕ್ಷ್ಯಿಯಾಗಿದೆ. ಜಗತ್ತು 2030ರ ಹೊತ್ತಿದೆ 110ರಷ್ಟು ಪಳೆಯುಳಿಕೆ ಇಂಧನವನ್ನು ಉತ್ಪಾದಿಸುತ್ತದೆ. ಇದು ಸ್ಥಿರವಾಗಿ ತಾಪಮಾನದಲ್ಲಿ ಶೇ 1.5 ಡಿಗ್ರಿ ಸೆಲ್ಸಿಯಸ್​ ಏರಿಕೆಗೆ ಕಾರಣವಾಗಲಿದೆ. ಇದು ಶೇ 69ರಷ್ಟು ಹೆಚ್ಚಾಗಲಿದ್ದು, ತಾಪಮಾನ 2 ಡಿಗ್ರಿ ಸೆಲ್ಸಿಯಸ್​ ಹೆಚ್ಚಲಿದೆ ಎಂದು ಪ್ರೊಡಕ್ಷನ್​ ಗ್ಯಾಪ್​ ವರದಿ ಪ್ರಕಟಿಸಿದೆ. ಪಳೆಯುಳಿಕೆ ಇಂಧನದ ಅಧಿಕ ಪೂರೈಕೆಯು ವಿಪರೀತ ತಾಪಮಾನವನ್ನು ಮತ್ತಷ್ಟು ಕೆಟ್ಟದಾಗಿಸುತ್ತದೆ. ಹಾಗೇ ಇದು ಜಾಗತಿಕ ತಾಪಮಾನವನ್ನು ಹೆಚ್ಚಿಸುತ್ತದೆ.

ಹವಾಮಾನ ಬದಲಾವಣೆಗಳು ಮಾನವನಿಂದ ಆಗಿದ್ದು, ದಕ್ಷಿಣ ಅಮೆರಿಕ ಬಹುತೇಕ ಪ್ರದೇಶದಲ್ಲಿ ಪರಿಣಾಮ ಹೊಂದಿದೆ. ಇದರಿಂದ ವರ್ಷದ ಆರು ತಿಂಗಳ ಕಾಲ ಸಾಮಾನ್ಯಕ್ಕಿಂತ ಮತ್ತಷ್ಟು ಬಿಸಿಯಾಗಿದೆ ಎಂದಿದ್ದಾರೆ. ತಾಪಮಾನದ ಹೆಚ್ಚಳದ ಉದಾಹರಣೆಯನ್ನು ಮಂಡಿಸಿದ ಅವರು, ಅರ್ಜೆಂಟೀನಾದಲ್ಲಿ ಬರಗಾಲವು ಅಂದಾಜು 3ರಷ್ಟು ಜಿಡಿಪಿ ಕಡಿತಕ್ಕೆ ಕಾರಣವಾಯಿತು. ಅಮೆಜಾನ್ ನದಿ ಪ್ರದೇಶದಲ್ಲಿ ನೀರಿನ ಮಟ್ಟವು ಇದುವರೆಗೆ ದಾಖಲಾದ ಅತ್ಯಂತ ಕಡಿಮೆ ಹಂತವನ್ನು ತಲುಪಿದೆ. ಇದು ಅರ್ಧ ಮಿಲಿಯನ್ ಜನರಿಗೆ ನೀರು ಮತ್ತು ಆಹಾರ ವಿತರಣೆ ಮೇಲೆ ಪರಿಣಾಮ ಬೀರಲಿದೆ. ಜಾಗತಿಕ ವಾಣಿಜ್ಯದ ಶೇ5ರಷ್ಟು ನಿರ್ವಹಣೆ ಮಾಡುವ ಪನಾಮ ಕಾಲುವೆ ಕಳೆದೆರಡು ವರ್ಷದಿಂದ ಬರಿದಾಗಿದ್ದು, ಇದು ತಿಂಗಳು ಕಾಲದ ವ್ಯಾಪಾರ ಮಾರ್ಗಕ್ಕೆ ಅಡಿ ಮಾಡಿತು.

ತಾಪಮಾನದಿಂದ ಸುಡುತ್ತಿರುವ ಅಮೆರಿಕ; ಅಮೆರಿಕದಲ್ಲಿನ ವಿಪರೀತ ತಾಪಮಾನಕ್ಕೆ 373 ಮಂದಿ ಸಾವನ್ನಪ್ಪಿದ್ದು, 67 ಬಿಲಿಯನ್​ ಡಾಲರ್​ ಆರ್ಥಿಕ ನಷ್ಟ ಉಂಟಾಗಿದೆ. ಹವಾಯಿಯಲ್ಲಿ ಆಗುತ್ತಿರುವ ಅಮೆರಿಕದ ಮಾರಣಾಂತಿಕ ಬೆಂಕಿಗೆ 93 ಮಂದಿ ಸಾವನ್ನಪ್ಪಿದ್ದಾರೆ. ಕೆನಾಡದಲ್ಲಿ 200ರಲ್ಲಿ ಒಬ್ಬರು ಕಾಡ್ಗಿಚ್ಚಿನಿಂದ ಮನೆಯನ್ನು ತೊರೆಯುವಂತಾಗಿದೆ. ಈ ಕಾಡ್ಗಿಚ್ಚಿಗೆ ಕಳೆದ ತಿಂಗಳು 45 ಮಿಲಿಯನ್​ ಎಕರೆ ಭೂಮಿ ನಾಶವಾಗಿದೆ.

ಪೂರ್ವ ಮತ್ತು ದಕ್ಷಿಣ ಏಷ್ಯಾದಿಂದ ಯೂರೋಪ್​ ಮತ್ತು ಉತ್ತರ ಆಫ್ರಿಕಾದಲ್ಲಿ ಶಾಖಲೆ ಅಲೆ ಮಾನವನ ಜೀವಿಸುವ ಮಿತಿಯನ್ನು ಉಲ್ಲಂಘಿಸಿದೆ. ಭಾರತದಲ್ಲಿ ಈ ಬಿಸಿಲಿಗೆ 263 ಮಂದಿ ಸಾವನ್ನಪ್ಪಿದರೆ, ಸ್ಪೇನ್​ನಲ್ಲಿ 2000 ಮಂದಿ ಮರಣ ಹೊಂದಿದ್ದಾರೆ. ಇದೇ ಸಮಯದಲ್ಲಿ ಈ ದೇಶಗಳ ಹಲವು ಭಾಗಗಳು ಕಳೆದ 500 ವರ್ಷದಲ್ಲೇ ಅತಿ ಹೆಚ್ಚು ಒಣ ಭೂಮಿಯನ್ನು ಕಂಡಿವೆ. ಇಟಲಿಯಲ್ಲಿ ಕಳೆದ ಆಗಸ್ಟ್​​ ಮತ್ತು ಸೆಪ್ಟೆಂಬರ್​ನಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್​ ತಲುಪಿದೆ. ಆಸ್ಪತ್ರೆಗಳು ಶಾಖದ ಅಲೆಯ ಅನಾರೋಗ್ಯಕ್ಕೆ ಚಿಕಿತ್ಸೆ ನೀಡಲು ಸ್ಥಳ ನೀಡದಂತಹ ಪರಿಸ್ಥಿತಿಯನ್ನು ಎದುರಿಸಿವೆ.

ಮಾನವ ನಿರ್ಮಿತ ಹವಾಮಾನ ಬದಲಾವಣೆಗಳು ದಾಖಲೆ ಮಳೆ, ಪ್ರವಾಹದಂತಹ ಘಟನೆಗಳಿಗೆ ಕಾರಣವಾಗಿದೆ. ವಿಶ್ವದಾದ್ಯಂತ ನ್ಯೂಜಿಲ್ಯಾಂಡ್​ಮ ಮಲವಿ, ಮಡ್ಗಸ್ಕರ್​, ಚೀನಾ, ಲಿಬಿಯಾ, ಗ್ರೀಸ್​, ಬಲ್ಗೇರಿಯಾ ಮತ್ತು ಟರ್ಕಿಯಂತಹ ಮಿಲಿಯನಂತರ ಜನರು ಗುಡುಗು ಮಿಂಚಿನಂತಹ ಅನಾಹುತಕ್ಕೆ ಕಾರಣವಾಗಿದ್ದು, 4 ಸಾವಿರ ಮಂದಿ ಇದಕ್ಕೆ ಬಲಿಯಾಗಿದ್ದಾರೆ.

ಆಫ್ರಿಕಾ ತತ್ತರ: ಇತ್ತೀಚಿನ ತನಿಖೆ ಮಾಹಿತಿಯಂತೆ ಅಧಿಕ ತಾಪಮಾನದಿಂದ ಈ ವರ್ಷ ಕನಿಷ್ಠ 15,700 ಮಂದಿ ಸಾವನ್ನಪ್ಪಿದ್ದಾರೆ. ಏಪ್ರಿಲ್​ನಲ್ಲಿ ರುವಾಂಡಾ ಮತ್ತು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಪ್ರವಾಹಕ್ಕೆ 400ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಸೆಪ್ಟೆಂಬರ್ ವೇಳೆಗೆ, ಘಾನಾದಲ್ಲಿ ಪ್ರವಾಹದಿಂದ ಕೃಷಿ ಭೂಮಿ ನಾಶವಾಗಿದ್ದು, ಸುಮಾರು 26,000 ಜನರು ಸ್ಥಳಾಂತರಗೊಂಡರು.

ಭಾರತದ ಪರಿಸ್ಥಿತಿ: ದೇಶದಲ್ಲಿ 32ರಾಜ್ಯದಲ್ಲಿ ವಿಶ್ಲೇಷಣೆ ಅನುಸಾರ 709 ನಗರಗಳು ಅಪಾಯದಲ್ಲಿದೆ. 12 ನಗರಗಳು ಕಳೆದ ವರ್ಷದಲ್ಲಿ 100 ದಿನಗಳ ಕಾಲ ಗಂಭೀರ ತಾಪಮಾನಕ್ಕೆ ಗುರಿಯಾಗಿದೆ. ಅವು ಬೆಂಗಳೂರು (124), ವಿಶಾಖಪಟ್ಟಣಂ (109), ಥಾಣೆ (101), ಗುವಾಹಟಿ (112), ತಿರುವನಂತಪುರಂ (187), ಐಜ್ವಾಲ್ (100), ಇಂಫಾಲ್ (139), ಶಿಲ್ಲಾಂಗ್ (123), ಪೋರ್ಟ್ ಬ್ಲೇರ್ (205), ಪಣಜಿ (108), ದಿಸ್ಪುರ್ (112), ಕವರಟ್ಟಿ (190) ಪ್ರದೇಶವಾಗಿದೆ.

ಕಳೆದ ವರ್ಷ 100 ದಿನಗಳಲ್ಲಿ ಅಧಿಕ ತಾಪಮಾನ ಎದುರಿಸಿದ 21 ನಗರಗಳ ಪಟ್ಟಿ ಹೀಗಿದೆ. ಮುಂಬೈ (134), ಬೆಂಗಳೂರು (148), ಚೆನ್ನೈ (121), ವಿಶಾಖಪಟ್ಟಣಂ (155), ಥಾಣೆ ( 143), ಕಲ್ಯಾಣ್ (129), ಗುವಾಹಟಿ (180), ವಿಜಯವಾಡ (106), ಮೈಸೂರು (118), ಭುವನೇಶ್ವರ (107), ತಿರುವನಂತಪುರಂ (242), ಅಗರ್ತಲಾ (107), ಐಜ್ವಾಲ್ (147), ಇಂಫಾಲ್ (209), ಶಿಲ್ಲಾಂಗ್ ( 204), ಪೋರ್ಟ್ ಬ್ಲೇರ್ (257), ಕೊಹಿಮಾ (150), ಪಣಜಿ (177), ದಮನ್ (110), ದಿಸ್ಪುರ್ (180) ಮತ್ತು ಕವರಟ್ಟಿ (241).

ಇದನ್ನೂ ಓದಿ: ವಿಶ್ವದ ಮೊದಲ ಚಿಕೂನ್​ಗುನ್ಯಾ ಲಸಿಕೆಗೆ ಅಮೆರಿಕದ ಎಫ್​ಡಿಎ ಅನುಮೋದನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.