ETV Bharat / sukhibhava

ಬಿರು ಬೇಸಿಗೆಯ ಅಕಾಲಿಕ ಮಳೆಗೆ ಈ ಪಾನೀಯಗಳು ಬೆಸ್ಟ್​​

author img

By

Published : May 5, 2023, 4:48 PM IST

drinks are best for the untimely rains of hot summer
drinks are best for the untimely rains of hot summer

ಬೇಸಿಗೆಯ ನಡುವೆ ಒಂದೆರಡು ಹನಿ ಮಳೆ ಬಿದ್ದರೆ, ರುಚಿಕರ ಬಿಸಿ ಬಿಸಿ ಪಾನೀಯ ಕುಡಿಯುವಂತೆ ಮನಸಾಗುತ್ತದೆ. ಅದಕ್ಕೆ ಇಲ್ಲಿದೆ ಉತ್ತಮ ಆಯ್ಕೆ

ಬೆಂಗಳೂರು: ಬಿರು ಬೇಸಿಗೆಯ ನಡುವೆ ಸುರಿಯುವ ಮಳೆ ಮನಸ್ಸಿಗೆ ಮುದ ನೀಡುವ ಜೊತೆಗೆ ಬಾಯಿ ಚಪ್ಪಲವನ್ನು ಹೆಚ್ಚಿಸುತ್ತದೆ. ಬೇಸಿಗೆಯಲ್ಲಿ ತಂಪು ಪಾನೀಯ ಕೇಳುವ ಮನ, ಮಳೆ ಬಂದಾಕ್ಷಣ ಬಿಸಿ ಬಿಸಿ ರುಚಿಕರ ಪಾನೀಯ ಸೇವಿಸುವಂತೆ ಬಯಕೆ ಮೂಡಿಸುತ್ತದೆ. ಬೇಸಿಗೆ ಅವಧಿಯಲ್ಲಿ ಬೀಳುವ ಅಕಾಲಿಕ ಮಳೆಗಳು ಸೋಂಕುಗಳಿಗೂ ಕಾರಣವಾಗುವ ಹಿನ್ನಲೆ ಆರೋಗ್ಯಯುತ ಪಾನೀಯಗಳ ಆಯ್ಕೆ ಉತ್ತಮವಾಗಿರುತ್ತದೆ. ಜೊತೆಗೆ ಎರಡೂ ಹವಾಗುಣಕ್ಕೆ ಹೊಂದಿಕೊಳ್ಳುವಂತೆ ಇರಬೇಕಿದೆ. ಸಂಜೆ ಸುರಿಯುವ ಮಳೆಗೆ ಬಿಸಿ ಬಿಸಿ ಪಾನೀಯಗಳು ಆರೋಗ್ಯದ ಜೊತೆಗೆ ಮನಸ್ಸು ತಣಿಸುತ್ತದೆ. ಅಂತಹ ಕೆಲವು ರುಚಿಕರ ಪಾನೀಯಗಳ ರೆಸಿಪಿ ಇಲ್ಲಿದೆ.

ಕುಲ್ಹದ್​ ವಾಲಿ ಚಾಯ್​
ಕುಲ್ಹದ್​ ವಾಲಿ ಚಾಯ್​

ಕುಲ್ಹದ್​ ವಾಲಿ ಚಾಯ್​: ಚಾಯ್​ ಎಂಬುದು ಬಹುತೇಕರ ನೆಚ್ಚಿನ ಪಾನೀಯ. ಇಂತಹ ಚಾಯ್​ ಎನ್ನು ಇಲ್ಲ ಎನ್ನುವುದು ಸಾಧ್ಯವಿಲ್ಲ. ಅದರಲ್ಲೂ ಕುಲ್ಹದ್​ ವಾಲಿ ಚಾಯ್​ ಅನ್ನು ಒಮ್ಮೆ ಸೇವಿಸಿದರೆ, ಅದನ್ನು ಮತ್ತೆ ಸೇವಿಸದೇ ಇರಲಾರಿರಿ. ಸಂಪ್ರದಾಯಿಯ ಮಣ್ಣಿನ ಕಪ್​ನಲ್ಲಿ ನೀಡುವ ಈ ಚಾಯ್​ಗಳು ಅನೇಕ ಆರೋಗ್ಯಯುತ ಪ್ರಯೋಜನ ಹೊಂದಿದ್ದು, ಗುಣಮಟ್ಟದ ಅನುಭವ ಅನ್ನು ನೀಡುತ್ತದೆ. ಆಧುನಿಕ ಕಾಲದಲ್ಲಿ ಮಣ್ಣಿನ ಕಪ್​ಗಳು ಕಡಿಮೆಯಾದರೂ, ಈ ಟೀ ಜನಪ್ರಿಯತೆ ಮಾತ್ರ ಕುಗ್ಗಿಲ್ಲ. ಅನೇಕ ಕಡೆ ಇದೀಗ ಮಡಕಾ ಚಾ ಎಂದು ಇದು ಜನಪ್ರಿಯಗೊಂಡಿದೆ.

ಹಾಟ್​ ಚಾಕೋಲೆಟ್
ಹಾಟ್​ ಚಾಕೋಲೆಟ್

ಹಾಟ್​ ಚಾಕೋಲೆಟ್​: ಚಾಕೋಲೆಟ್​ ಪ್ರಿಯರು ನೀವಾಗಿದ್ದರೆ, ಇದು ನಿಮಗೆ ಉತ್ತಮ ಆಯ್ಕೆ ಆಗಲಿದೆ. ಮಳೆಯಲ್ಲಿ ಬಿಸಿ ಪಾನೀಯದ ಜೊತೆಗೆ ಚಾಕೋಲೆಟ್​ ಬೆರೆಸಿ ಕುಡಿಯುವುದರ ಮಜವೇ ಬೇರೆ ಆಗಿರುತ್ತದೆ. ಹಾಲಿನಲ್ಲಿ ಈ ಚಾಕೋಕೆಟ್​ ಬೆರಸಿ ಕೂಡಿದರೆ, ನಿಮ್ಮ ನಾಲಿಗೆ ಮತ್ತಷ್ಟು ಬಾಯಿ ಚಪ್ಪರಿಸುವಂತೆ ಮಾಡುತ್ತದೆ. ಜೊತೆಗೆ ಹೊಸ ಉತ್ಸಾಹವೂ ಮೂಡಿಸುತ್ತದೆ.

ಬಿಸಿ ಬಿಸಿ ಕಾಫಿ
ಬಿಸಿ ಬಿಸಿ ಕಾಫಿ

ಬಿಸಿ ಬಿಸಿ ಕಾಫಿ: ಮಳೆಯಾದಕ್ಷಣ ಅನೇಕ ಮಂದಿ ನೆನಪಾಗುವುದು ಬಿಸಿ ಬಿಸಿ ಕಾಫಿ. ಅದರಲ್ಲೂ ಫಿಲ್ಟರ್​ ಕಾಫಿ ಇದ್ದರಂತೂ ಇದರ ಮಜಾವೇ ಬೇರೆ. ಕಾಫಿಯ ಮತ್ತೊಂದು ಗುಣ ಎಂದರೆ ಇದನ್ನು ಬಿರು ಬಿಸಿಲಿನಲ್ಲೂ ಸೇವಿಸಬಹುದು. ಆದರೆ, ಅದು ಕೋಲ್ಡ್​ ಕಾಫಿಯಾಗಿರುವಂತೆ ನೋಡಿಕೊಳ್ಳಬೇಕು. ಹವಾಮಾನಕ್ಕೆ ತಕ್ಕಂತೆ ನಿಮಗಿಷ್ಟವಾದ ಕಾಫಿಯನ್ನು ಆಯ್ಕೆ ಮಾಡಬೇಕಿದೆ.

ಅರಿಶಿಣ ಹಾಲು
ಅರಿಶಿಣ ಹಾಲು

ಅರಿಶಿಣ ಹಾಲು: ಭಾರತದ ಸಂಪ್ರದಾಯಿಕ ಗೋಲ್ಡನ್​ ಮಿಲ್ಕ್​ ಎಂದೇ ಜನಪ್ರಿಯವಾಗಿರುವ ಈ ಪಾನೀಯ ಸಂಪ್ರದಾಯಿಕ ಮತ್ತು ರೋಗ ನಿರೋಧಕ ಶಕ್ತಿ ಹೊಂದಿರುವ ಪಾನೀಯವಾಗಿದೆ. ಪೋಷಕಾಂಶದ ಮೌಲ್ಯದ ಜೊತೆಗೆ ಸೋಂಕಿನ ವಿರುದ್ಧ ಹೋರಾಡಲು ಇದು ಶಕ್ತಿ ನೀಡುತ್ತದೆ. ಈ ಅರಿಶಿಣ ಹಾಲಿನ ರುಚಿ ಹೆಚ್ಚಿಸಲು ಅದಕ್ಕೆ ಬೇಕಾದಲ್ಲಿ ಸಕ್ಕರೆ ಸೇರಿಸಬಹುದಾಗಿದೆ.

ನಿಂಬೆ ಟೀ
ನಿಂಬೆ ಟೀ

ನಿಂಬೆ ಟೀ: ಸಿಟ್ರಸ್​ ಅಂಶವಿರುವ ನಿಂಬೆ ಮತ್ತು ಜೇನು ತುಪ್ಪ ಬೇರಿಸಿದ ಈ ಪಾನೀಯ ಕೂಡ ಅಕಾಲಿಕ ಮಳೆಯಿಂದ ಎದುರಾಗುವ ಸೋಂಕಿನ ವಿರುದ್ಧ ಹೋರಾಡಲು ಸಹಕಾರಿಯಾಗಿದೆ. ಅಲ್ಲದೇ, ಈ ನಿಂಬೆ ಟೀ ಮಧ್ಯಾಹ್ನ ಊಟವಾದ ಬಳಿಕ ಮೂಡುವ ಆಲಸ್ಯವನ್ನು ಹೊಡೆದೂಡಿಸುತ್ತದೆ.

ಇದನ್ನೂ ಓದಿ: ಬೇಸಿಗೆಯಲ್ಲಿ ತಂಪು ಮಾತ್ರವಲ್ಲ, ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ ಈ ಬಗೆ ಬಗೆಯ ಲಸ್ಸಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.