ETV Bharat / sukhibhava

ಭಾರತದಲ್ಲಿ ಬಾಲ್ಯ ವಿವಾಹ ಇಳಿಕೆಯಾದ್ರೂ, ಸಂಪೂರ್ಣವಾಗಿ ನಿಂತಿಲ್ಲ ಅಪ್ರಾಪ್ತರ ಮದುವೆ; ಲ್ಯಾನ್ಸೆಟ್​​ ವರದಿ

author img

By ETV Bharat Karnataka Team

Published : Dec 18, 2023, 11:49 AM IST

Child marriage in continue to be prevalent with one in five girls
Child marriage in continue to be prevalent with one in five girls

ಭಾರತದಲ್ಲಿ ಬಾಲ್ಯ ವಿವಾಹ ಸಂಖ್ಯೆ ಇಳಿಕೆ ಕಂಡಿದೆ. ಇತ್ತೀಚಿನ ದಿನದಲ್ಲಿ ಕೆಲವು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಇದನ್ನು ತಡೆಗಟ್ಟಲಾಗುತ್ತಿದೆ.

ನವದೆಹಲಿ: ದೇಶದಲ್ಲಿ ಬಾಲ್ಯ ವಿವಾಹ ಸಂಖ್ಯೆ ಕುಸಿತಗೊಂಡಿದೆಯಾದರೂ, ಐವರಲ್ಲಿ ಒಬ್ಬ ಹುಡುಗಿ ಮತ್ತು ಆರರಲ್ಲಿ ಓರ್ವ ಹುಡುಗ ಇನ್ನೂ ಕೂಡ ಬಾಲ್ಯ ವಿವಾಹಕ್ಕೆ ಒಳಗಾಗುತ್ತಿದ್ದಾರೆ ಎಂದು ಲ್ಯಾನ್ಸೆಟ್​ ಗ್ಲೋಬಲ್​ ಹೆಲ್ತ್​​ ವರದಿ ತಿಳಿಸಿದೆ.

ಹಾರ್ವಡ್​​ ಟಿ ಎಚ್​​ ಚಾನ್​ ಸ್ಕೂಲ್​ ಆಫ್​ ಪಬ್ಲಿಕ್​ ಹೆಲ್ತ್​​ ಸಂಶೋಧಕರ ನೇತೃತ್ವದಲ್ಲಿ ನಡೆದ ಅಧ್ಯಯನದಲ್ಲಿ, ಭಾರತದಲ್ಲಿ ಬಾಲ್ಯ ವಿವಾಹ ಸಂಖ್ಯೆ ಇಳಿಕೆ ಕಂಡಿದೆ. ಇತ್ತೀಚಿನ ದಿನದಲ್ಲಿ ಕೆಲವು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಇದನ್ನು ತಡೆಗಟ್ಟಲಾಗುತ್ತಿದೆ.

ಬಾಲ್ಯವಿವಾಹವನ್ನು ಮಾನವ ಹಕ್ಕು ಉಲ್ಲಂಘನೆ ಮತ್ತು ಲಿಂಗ ಮತ್ತು ಲೈಂಗಿಕಾಧಾರಿತ ದೌರ್ಜನ್ಯವಾಗಿ ಗುರುತಿಸಲಾಗಿದೆ. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ (ಎಸ್​ಡಿಜಿ)ಯ 2.3 ಟಾರ್ಗೆಟ್​​ ಅನ್ನು ಸಾಧಿಸುವಲ್ಲಿ ಭಾರತವೂ ಶೂನ್ಯ ಬಾಲ್ಯವಿವಾಹದ ಸಾಧನೆ ಮಾಡಬೇಕಿರುವುದು ನಿರ್ಣಾಯಕವಾಗಿದೆ.

ಈ ಅಧ್ಯಯನವೂ ಮೊದಲಿಗೆ ಕೇಂದ್ರಾಡಳಿತ ಪ್ರದೇಶದಲ್ಲಿ ಕಾಲಾನಂತರದಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳ ವಿವಾಹದ ದರಗಳು ಹೇಗೆ ಬದಲಾಗಿವೆ ಎಂದು ಅಂದಾಜಿಸಿದೆ. ವಿಶೇಷವಾಗಿ ಹುಡುಗರ ಬಾಲ್ಯ ವಿವಾಹವನ್ನು ಸಾಮಾನ್ಯವಾಗಿ ಕಡೆಗಣಿಸಲಾಗುತ್ತದೆ. ಇಲ್ಲಿಯವರೆಗೆ, ಅದರ ಹರಡುವಿಕೆಯನ್ನು ಯಾವುದೇ ಸಂಶೋಧನೆ ಅಂದಾಜು ಮಾಡಿಲ್ಲ ಎಂದು ಜನಸಂಖ್ಯಾ ಆರೋಗ್ಯ ಮತ್ತು ಭೌಗೋಳಿಕತೆಯ ಪ್ರೊಫೆಸರ್​ ಹಾಗೂ, ಅಧ್ಯಯನದ ಪ್ರಮುಖ ಲೇಖಕ ಎಸ್​ವಿ ಸುಬ್ರಮಣಿಯನ್​ ತಿಳಿಸಿದ್ದಾರೆ.

ಭಾರತದಲ್ಲಿ ಬಾಲ್ಯ ವಿವಹಾದ ದೊಡ್ಡ ಹೊರೆಯನ್ನು ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಫಲಿತಾಂಶವೂ ದೊಡ್ಡ ಹೆಜ್ಜೆಯಾಗಿದೆ. ಪರಿಣಾಮಕಾರಿ ನೀತಿ ನಿರೂಪಣೆಗೆ ಇದು ನಿರ್ಣಾಯಕವಾಗಿರುತ್ತದೆ ಎಂದಿದ್ದಾರೆ.

ಭಾರತದಲ್ಲಿ ಕಾನೂನು ಬದ್ಧ ಮದುವೆ ವಯಸ್ಸು ಹುಡುಗಿಯರಿಗೆ 18 ವರ್ಷ ಆಗಿದ್ದು, ಹುಡುಗರಿಗೆ 21 ವರ್ಷ ಆಗಿದೆ. ಅಧ್ಯಯನ ಉದ್ದೇಶದಿಂದ ಉಭಯ ಲಿಂಗದವರಲ್ಲಿ (ಗಂಡು/ಹೆಣ್ಣು) 18 ವರ್ಷಕ್ಕಿಂತ ಮುಂಚೆ ನಡೆಯುವ ಮದುವೆಯನ್ನು ಬಾಲ್ಯವಿವಾಹ ಎಂದು ವ್ಯಾಖ್ಯಾನಿಸಲಾಗಿದೆ.

ಅಧ್ಯಯನದ ಉದ್ದೇಶಕ್ಕಾಗಿ ಸಂಶೋಧಕರು ಭಾರತ ರಾಷ್ಟ್ರೀಯ ಮತ್ತು ಕುಟುಂಬ ಆರೋಗ್ಯ ಸಮೀಕ್ಷೆಯಿಂದ 1993, 1999, 2006, 2016 ಮತ್ತು 2021ರ ದತ್ತಾಂಶವನ್ನು ಬಳಕೆ ಮಾಡಿದ್ದಾರೆ. ಅಧ್ಯಯನದಲ್ಲಿ 1993 ರಿಂದ 2021ರ ನಡುವೆ ಬಾಲ್ಯ ವಿವಾಹ ರಾಷ್ಟ್ರೀಯವಾಗಿ ಇಳಿಕೆ ಕಂಡು ಬಂದಿದೆ.

1993ರಲ್ಲಿ ಬಾಲಕಿಯರ ಬಾಲ್ಯ ವಿವಾಹ ಶೇ 49ರಷ್ಟು ಕುಸಿತಕಂಡರೆ 2021ರಲ್ಲಿ ಶೇ 22ರಷ್ಟು ಕುಸಿತ ಕಂಡಿದೆ. ಇನ್ನು ಬಾಲಕರ ಬಾಲ್ಯ ವಿವಾಹ 2006ರಲ್ಲಿ ಶೇ 7ಕ್ಕೆ ಕುಸಿತ ಕಂಡರೆ 2021ರಲ್ಲಿ ಶೇ 2ಕ್ಕೆ ಇಳಿಕೆ ಕಂಡಿದೆ.

ಆದಾಗ್ಯೂ, ಇತ್ತೀಚಿನ ವರ್ಷದಲ್ಲಿ ಬಾಲ್ಯ ವಿವಾಹ ಆಚರಣೆಯನ್ನು ನಿಲ್ಲಿಸುವ ನಿಟ್ಟಿನಲ್ಲಿ ಪ್ರಗತಿ ಸ್ಥಗಿತಗೊಳಿಸಲಾಗಿದೆ. 206 ಮತ್ತು 2016 ರ ನಡುವೆ ಬಾಲ್ಯ ವಿವಾಹದ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. 2016 ಮತ್ತು 2021 ರ ನಡುವೆ ಕಡಿಮೆ ಪ್ರಮಾಣದ ಇಳಿಕೆ ಕಂಡುಬಂದಿದೆ.

ಕಳೆದ ವರ್ಷ ಮಣಿಪುರ, ಪಂಜಾಬ್​, ತ್ರಿಪುರ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಆರು ರಾಜ್ಯ/ ಕೇಂದ್ರಾಡಳಿಕ ಪ್ರದೇಶದಲ್ಲಿ ಬಾಲಕಿಯರ ಬಾಲ್ಯ ವಿವಾಹ ಹೆಚ್ಚಳ ಕಂಡು ಬಂದಿದೆ. ಛತ್ತೀಸ್​ಗಢ, ಗೋವಾ, ಮಣಿಪುರ, ಪಂಜಾಬ್​ ಸೇರಿದಂತೆ 8 ಪ್ರದೇಶದಲ್ಲಿ ಬಾಲಕರ ಬಾಲ್ಯ ವಿವಾಹ ಏರಿಕೆ ಕಂಡಿದೆ. ಐವರು ಹುಡುಗಿಯರಲ್ಲಿ ಒಬ್ಬರು ಮತ್ತು ಆರು ಹುಡುಗರಲ್ಲಿ ಒಬ್ಬರು ಇನ್ನೂ ಭಾರತದ ಕಾನೂನುಬದ್ಧ ವಿವಾಹದ ವಯಸ್ಸಿಗಿಂತ ಕಡಿಮೆ ಪ್ರಾಯದಲ್ಲಿ ಮದುವೆಯಾಗಿದ್ದಾರೆ ಎಂದು ಫಲಿತಾಂಶಗಳು ತೋರಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.