ETV Bharat / sukhibhava

ಯೋಗ, ಪ್ರಾಣಾಯಾಮ ಮಾಡಿ; ಕೊರೊನಾ ದೂರವಿಡಿ

author img

By

Published : Apr 13, 2020, 5:25 PM IST

Updated : May 21, 2020, 4:52 PM IST

Yoga and Pranayama increase immunity
Yoga and Pranayama increase immunity

ಸೂರ್ಯ ನಮಸ್ಕಾರ, ಯೋಗ ಹಾಗೂ ಪ್ರಾಣಾಯಾಮಗಳಿಂದ ಶರೀರದಲ್ಲಿ ಶಕ್ತಿ ಉತ್ಪನ್ನವಾಗಿ ವೈರಸ್​ ದಾಳಿಯಾಗುವ ಸಾಧ್ಯತೆಗಳು ಕಡಿಮೆಯಾಗುತ್ತವೆ. ಕಪಾಲಭಾತಿ, ಸೂರ್ಯಭೇದಿ, ಅನುಲೋಮ-ವಿಲೋಮ ಪ್ರಕಾರದ ಪ್ರಾಣಾಯಾಮಗಳು ವಿಶೇಷವಾಗಿ ಶರೀರದೊಳಗೆ ಹುಟ್ಟುವ ವೈರಸ್​ಗಳನ್ನು ನಾಶಪಡಿಸುತ್ತವೆ ಎನ್ನುತ್ತಾರೆ ರಚನಾ.

ಜೋಧಪುರ : ಕಳೆದ ಕೆಲ ತಿಂಗಳುಗಳಿಂದ ವಿಶ್ವಾದ್ಯಂತ ಕೊರೊನಾ ಮಹಾಮಾರಿಯ ಕರಿನೆರಳು ಆವರಿಸಿದೆ. ರೋಗ ನಿರೋಧಕ ಶಕ್ತಿ ಇಲ್ಲದವರು ಕೊರೊನಾ ವೈರಸ್​ ಸೇರಿ ಇನ್ನಿತರ ವೈರಸ್​ಗಳ ದಾಳಿಗೆ ಬಹುಬೇಗನೆ ತುತ್ತಾಗುತ್ತಾರೆ ಎಂಬುದು ಅಧ್ಯಯನಗಳಿಂದ ಸಾಬೀತಾಗಿದೆ. ಹೀಗಾಗಿ ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಎಲ್ಲಾ ಭಾರತೀಯರೂ ಮುಂದಾಗಬೇಕಿದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಯೋಗ ಹಾಗೂ ಪ್ರಾಣಾಯಾಮ ಅತ್ಯಂತ ಪರಿಣಾಮಕಾರಿ ಎಂದು ಇಲ್ಲಿನ ಯೋಗ ಶಿಕ್ಷಕಿ ರಚನಾ ರಾಂಕಾವತ್ ತಿಳಿಸಿದ್ದಾರೆ. ಲಾಕ್​ಡೌನ್​ನ ಸಮಯದಲ್ಲಿ ಮನೆಯಲ್ಲಿ ಇರುವ ಜನತೆ ಬೆಳಗ್ಗೆ ಹಾಗೂ ಸಂಜೆ ಸೂರ್ಯ ನಮಸ್ಕಾರ ಮತ್ತು ಪ್ರಾಣಾಯಾಮಗಳನ್ನು ಅಭ್ಯಾಸ ಮಾಡಬೇಕು. ಇದರಿಂದ ಶರೀರ ಸದೃಢವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಕಳೆದ 15 ವರ್ಷಗಳಿಂದ ಯೋಗ ಕಲಿಸುತ್ತಿರುವ ರಚನಾ ರಾಂಕಾವತ್ ಸಲಹೆ ನೀಡಿದ್ದಾರೆ.

ಸೂರ್ಯ ನಮಸ್ಕಾರ, ಯೋಗ ಹಾಗೂ ಪ್ರಾಣಾಯಾಮಗಳಿಂದ ಶರೀರದಲ್ಲಿ ಶಕ್ತಿ ಉತ್ಪನ್ನವಾಗಿ ವೈರಸ್​ ದಾಳಿಯಾಗುವ ಸಾಧ್ಯತೆಗಳು ಕಡಿಮೆಯಾಗುತ್ತವೆ. ಕಪಾಲಭಾತಿ, ಸೂರ್ಯಭೇದಿ, ಅನುಲೋಮ-ವಿಲೋಮ ಪ್ರಕಾರದ ಪ್ರಾಣಾಯಾಮಗಳು ವಿಶೇಷವಾಗಿ ಶರೀರದೊಳಗೆ ಹುಟ್ಟುವ ವೈರಸ್​ಗಳನ್ನು ನಾಶಪಡಿಸುತ್ತವೆ ಎನ್ನುತ್ತಾರೆ ರಚನಾ. ಜೋಧಪುರ ಜನತೆಗೆ ಉಚಿತವಾಗಿ ಯೋಗ ಕಲಿಸುತ್ತಿರುವ ರಚನಾ ರಾಂಕಾವತ್​ ಈಗ ಆನ್ಲೈನ್​ ಮೂಲಕ ಎಲ್ಲರಿಗೂ ಯೋಗ ಪಾಠಗಳನ್ನು ಹೇಳುತ್ತಿದ್ದಾರೆ.

ನಿತ್ಯ ಯೋಗಾಭ್ಯಾಸ ಮಾಡುವುದರಿಂದ ವ್ಯಕ್ತಿತ್ವದಲ್ಲಿ ತೇಜಸ್ಸು ಮೂಡಿ ವ್ಯಕ್ತಿ ಸದಾಕಾಲ ಚಟುವಟಿಕೆಯಿಂದಿರುತ್ತಾನೆ. ಲಾಕ್​ಡೌನ್​ನ ಬಿಡುವಿನ ವೇಳೆಯಲ್ಲಿ ಪ್ರತಿಯೊಬ್ಬರೂ ಬೆಳಗ್ಗೆ ಹಾಗೂ ಸಂಜೆ ತಪ್ಪದೇ ಯೋಗಾಭ್ಯಾಸ ಮಾಡಬೇಕೆಂದು ಅವರು ತಿಳಿಸಿದ್ದಾರೆ.

Last Updated :May 21, 2020, 4:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.