ETV Bharat / state

ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಬಂಡಲೋಗು ಜಲಪಾತ

author img

By

Published : Jul 23, 2021, 7:14 AM IST

Updated : Jul 23, 2021, 10:01 AM IST

bandalogu falls
ಬಂಡಲೋಗು ಜಲಪಾತ

ಗುರುಮಠಕಲ್ ಪಟ್ಟಣದ ಹೊರವಲಯದ ಸುಮಾರು 3 ಕಿ.ಮೀ ದೂರದಲ್ಲಿರುವ ಮಳ್ಳ ಕಾಡಿನಲ್ಲಿ ಬಂಡಲೋಗು ಜಲಪಾತವಿದ್ದು, ಪ್ರಕೃತಿ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ.

ಗುರುಮಠಕಲ್: ಗುರುಮಠಕಲ್ ಹೊರವಲಯದಲ್ಲಿನ ಮಳ್ಳ ಕಾಡಿನಲ್ಲಿರುವ ಬಂಡಲೋಗು ಜಲಪಾತ ನಯನ ಮನೋಹರವಾಗಿದೆ. ಮಲೆನಾಡ ಪಕೃತಿ ಸೊಬಗನ್ನು ಹೋಲುವ, ಪ್ರಕೃತಿ ಪ್ರಿಯರನ್ನು ಕೈಬೀಸಿ ಕರೆಯುವ ಸುಂದರ ತಾಣ ಬಹಳಾನೇ ಚೆಂದ. ಅದ್ರೆ ಮೂಲ ಸೌಕರ್ಯ ಮಾತ್ರ ಇಲ್ಲಿ ಕಣ್ಮರೆಯಾಗಿದೆ.

ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಬಂಡಲೋಗು ಜಲಪಾತ

ಪಟ್ಟಣದ ಹೊರವಲಯದ ಸುಮಾರು 3 ಕಿ.ಮೀ ದೂರದಲ್ಲಿರುವ ಮಳ್ಳ ಕಾಡಿನಲ್ಲಿ ಈ ಜಲಪಾತವಿದೆ. ಬಂಡೆಗಳ ಮೇಲೆ ಹರಿಯುತ್ತಾ ಸಾಗಿ ಸುಮಾರು 30 ಅಡಿ ಎತ್ತರದಿಂದ ನೀರು ಧುಮಿಕ್ಕುವ ದೃಶ್ಯ ಬಹಳ ಆಕರ್ಷಕ. ಸ್ಥಳೀಯರು ಇದನ್ನು ಬಂಡಲೋಗು ಎಂದು ಕರೆಯುತ್ತಾರೆ. ತೆಲಂಗಾಣದ ಗಡಿಭಾಗವಾಗಿರುವ ಕಾರಣ ಈ ಭಾಗದಲ್ಲಿ ತೆಲುಗು ಭಾಷೆ ಪ್ರಭಾವ ಹೆಚ್ಚಿದೆ. ತೆಲುಗು ಭಾಷೆಯಲ್ಲಿ ಬಂಡಲೋಗು ಎಂದರೆ ಬಂಡೆಗಳ ಹಳ್ಳ ಎನ್ನುವ ಅರ್ಥವಿದೆ. ಈ ಹೊಳೆಯು ಬಂಡೆಗಳ ಮೇಲೆ ಹರಿಯುವುದರಿಂದ ಈ ಹೆಸರು ಬಂದಿದೆ ಎಂಬುದು ಸ್ಥಳೀಯರ ಅಭಿಪ್ರಾಯ.

ಸಾಹಸಮಯ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣವಾಗಿದೆ. ಹರಿಯುವ ನೀರಿನಲ್ಲಿ ನಡೆದುಕೊಂಡು ಹೋಗುವುದು ಇನ್ನೂ ಚಂದ. ಕಲ್ಲಬಂಡೆಗಳಿಂದ ಕೂಡಿದ ಪ್ರದೇಶವಾಗಿದ್ದು, ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಇಲ್ಲದಿದ್ದರೆ ಆಯ ತಪ್ಪಿ ಬೀಳುವುದು ಗ್ಯಾರಂಟಿ.

ಇದನ್ನೂ ಓದಿ: ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ, ಪತ್ರಕರ್ತ ವಿಠ್ಠಪ್ಪ ಗೋರಂಟ್ಲಿ ನಿಧನ

ಗುರುಮಠಕಲ್, ನಜರಾಪುರ ಹಾಗೂ ಕೇಶ್ವಾರ ಗ್ರಾಮಗಳ ಮಧ್ಯದಲ್ಲಿ ಹರಡಿರುವ ಮಳ್ಳ ಅರಣ್ಯದಲ್ಲಿರುವ ಈ ಜಲಪಾತಕ್ಕೆ ಹೋಗಲು ಯಾವುದೇ ರಸ್ತೆಯಾಗಲಿ, ಮಾಹಿತಿಯಾಗಲಿ ಇಲ್ಲ. ಸ್ಥಳೀಯರ ನೆರವಿಲ್ಲದೇ ಹೋದರೆ ಕಾಡಿನಲ್ಲಿ ದಾರಿ ತಪ್ಪುವ ಸಾಧ್ಯತೆಯಿದೆ ಎನ್ನುತ್ತಾರೆ ಸ್ಥಳೀಯರಾದ ರವಿಂದ್ರರೆಡ್ಡಿ ಪೋತುಲ್.

Last Updated :Jul 23, 2021, 10:01 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.