ETV Bharat / state

ಗುರುಮಠಕಲ್‌ನಲ್ಲಿ ರಾರಾಜಿಸಿದ ಕೇಸರಿ ಬಾವುಟ: ಬಿಜೆಪಿ ವಿಜಯ ಸಂಕಲ್ಪ ರೋಡ್ ಶೋ

author img

By

Published : Mar 7, 2023, 11:02 PM IST

ಬಿಜೆಪಿ ವಿಜಯ ಸಂಕಲ್ಪ ರೋಡ್ ಶೋ
ಬಿಜೆಪಿ ವಿಜಯ ಸಂಕಲ್ಪ ರೋಡ್ ಶೋ

ಯಾದಗಿರಿ ನಗರದ ಬಸವೇಶ್ವರ ವೃತ್ತದಲ್ಲಿ ಆಯೋಜಿಸಿದ್ದ ಬಿಜೆಪಿ ಪಕ್ಷದ ರೋಡ್ ಶೋ ಯಾತ್ರೆಗೆ ಬಿಎಸ್​ವೈ ಚಾಲನೆ ನೀಡಿದರು.

ಬಿಜೆಪಿ ವಿಜಯ ಸಂಕಲ್ಪ ರೋಡ್ ಶೋ

ಯಾದಗಿರಿ : ಈ ಹಿಂದೆ ಕಾಂಗ್ರೆಸ್ ಭದ್ರಕೋಟೆ ಹಾಗೂ ಈಗ ಜೆಡಿಎಸ್ ಪ್ರಾಬಲ್ಯವಿರುವ ಗುರುಮಠಕಲ್ ಮತಕ್ಷೇತ್ರದಲ್ಲಿ ಮಂಗಳವಾರ ಬಿಜೆಪಿ ಪಕ್ಷದ ವಿಜಯ ಸಂಕಲ್ಪಯಾತ್ರೆಯ ರೋಡ್ ಶೋ ಮೂಲಕ ಕಮಲ ಅರಳಿಸಲು ಸಂಕಲ್ಪ ಮಾಡಲಾಯಿತು.

ಬಸವೇಶ್ವರ ವೃತ್ತದಲ್ಲಿ ಆಯೋಜಿಸಿದ್ದ ರೋಡ್ ಶೋ: ಹೆಲಿಕಾಪ್ಟರ್ ಮೂಲಕ ನೇರವಾಗಿ ಗುರುಮಠಕಲ್‌ಗೆ ಬಂದಿಳಿದ ಮಾಜಿ ಸಿಎಂ ಹಾಗೂ ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಪ್ರಮುಖರಾಗಿರುವ ಬಿ. ಎಸ್ ಯಡಿಯೂರಪ್ಪ ಅವರು ಖಾಸಾಮಠಕ್ಕೆ ಭೇಟಿ ನೀಡಿ, ದರ್ಶನ ಪಡೆದ ಬಳಿಕ ಬಸವೇಶ್ವರ ವೃತ್ತದಲ್ಲಿ ಆಯೋಜಿಸಿದ್ದ ರೋಡ್ ಶೋ ಯಾತ್ರೆಗೆ ಚಾಲನೆ ನೀಡಿದರು.

ಇದನ್ನೂ ಓದಿ : ಆಗಿನ ಶ್ರೀಕೃಷ್ಣದೇವರಾಯನ ಕಾಲದ ಸುವರ್ಣ ದಿನ ಈಗ ನೋಡುತ್ತಿದ್ದೇವೆ: ಶ್ರೀರಾಮುಲು ಬಣ್ಣನೆ

ನರೇಂದ್ರ ಮೋದಿ ಅವರು ವಿಶ್ವಮೆಚ್ಚಿದ ಜನ ನಾಯಕ ಎಂದ ಬಿಎಸ್​ವೈ: ಈ ವೇಳೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ರಾಜ್ಯ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿಯನ್ನು ಬೆಂಬಲಿಸಬೇಕು. ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಶ್ವಮೆಚ್ಚಿದ ಜನ ನಾಯಕರಾಗಿದ್ದಾರೆ. ಅವರು ದೇಶದ ಅಭಿವೃದ್ಧಿಯತ್ತ ಬಡವರ ಪರ ಕಾಳಜಿ ಹೊಂದಿದ್ದಾರೆ. ಒಂದು ಬಾರಿಯೂ ವಿಶ್ರಾಂತಿಯನ್ನು ಪಡೆಯದೇ ದೇಶಕ್ಕಾಗಿ ದುಡಿಯುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ : ಜನವಸತಿ ರಹಿತ ಗ್ರಾಮಗಳ ಪಟ್ಟಿ ನೀಡಲು ಕಾಲಾವಕಾಶ ಕೋರಿದ ಸರ್ಕಾರ: ಹೈಕೋರ್ಟ್ ತರಾಟೆ

ಬಹಿರಂಗ ಮೆರವಣಿಗೆಯಲ್ಲಿ ಮೊಳಗಿದ ನಾನಾ ವಾದ್ಯ ಪರಿಕರಗಳು: ವಿಜಯ ಸಂಕಲ್ಪ ಯಾತ್ರೆಯು ಬಸವೇಶ್ವರ ವೃತ್ತದಿಂದ ನಿಜಶರಣ ಅಂಬಿಗರ ಚೌಡಯ್ಯ ವೃತ್ತದ ಮೂಲಕ ತಿಮ್ಮಣ್ಣ ಬಾವಿಯವರೆಗೆ 45 ನಿಮಿಷಗಳ ರೋಡ್ ಶೋ ನಡೆಯಿತು. ಬಹಿರಂಗ ಮೆರವಣಿಗೆಯಲ್ಲಿ ನಾನಾ ವಾದ್ಯ ಪರಿಕರಗಳು ಮೊಳಗಿದವು. ದಾರಿಯುದ್ದಕ್ಕೂ ಕಾರ್ಯಕರ್ತರು ಸೇರಿದಂತೆ ಪ್ರಮುಖ ಮುಖಂಡರು ಹಾಗೂ ಖುದ್ದಾಗಿ ಯಡಿಯೂರಪ್ಪ, ಎನ್. ರವಿಕುಮಾರ್​, ಬಾಬುರಾವ್ ಚಿಂಚನಸೂರ ಹಾಗೂ ನರೇಂದ್ರ ಮೋದಿ ಅವರಿಗೆ ಜಯಘೋಷಗಳು ಮೊಳಗಿದವು.

ಇದನ್ನೂ ಓದಿ : ನಮ್ಮ ಪಕ್ಷದಲ್ಲಿ ಪ್ರಾಥಮಿಕ ತನಿಖಾ ವರದಿ ಬರುವವರೆಗೂ ಉಚ್ಛಾಟನೆ ಮಾಡುವ ವ್ಯವಸ್ಥೆ ಇಲ್ಲ: ಸಿ.ಟಿ.ರವಿ

ಬ್ಯಾನರ್ ಹಾಗೂ ಧ್ವಜಗಳ ಮೂಲಕ ಕೇಸರಿಮಯವಾಗಿದ್ದ ಪಟ್ಟಣ: ಬಿಜೆಪಿ ಪಕ್ಷದ ಹೆಸರು, ಚಿಹ್ನೆ ಇರುವ ಟೋಪಿ, ಧ್ವಜದೊಂದಿಗೆ ಸೇರಿದ ಜನ ರಾರಾಜಿಸಿದರು. ದಾರಿಯುದ್ದಕ್ಕೂ ಧ್ವಜಗಳು, ಬ್ಯಾನರ್‌ಗಳ ಮೂಲಕ ಪಟ್ಟಣವು ಕೇಸರಿಮಯವಾಗಿತ್ತು. ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚೌಹಾಣ್, ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್​, ಎಂಎಲ್​ಸಿ ಬಾಬುರಾವ್​ ಚಿಂಚನಸೂರ, ಸುರಪುರ ಶಾಸಕ ರಾಜೂಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಶರಣಭೂಪಾಲರೆಡ್ಡಿ, ದೇವಿಂದ್ರನಾಥ, ಮಾಲಿಕಯ್ಯ ಗುತ್ತೇದಾರ, ಡಾ. ಇಂದ್ರಶಕ್ತಿ, ನಾಗರತ್ನ ಕುಪ್ಪಿ, ಗಿರೀಶ ಮಟ್ಟಣ್ಣನವರ್ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

ಇದನ್ನೂ ಓದಿ : ನಮ್ಮದು ಬಡವರ ದೀನ ದಲಿತರ ಕಾರ್ಮಿಕರ ಪರವಾದ ಸರ್ಕಾರ:ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.