ETV Bharat / state

ರಾಜ್ಯ ಸಚಿವ ಸಂಪುಟ ವಿಸ್ತರಣೆ : ಅಧಿಕಾರ ಮೊಟಕುಗೊಳಿಸುವ ಸಾಧ್ಯತೆ

author img

By

Published : Jan 12, 2020, 4:45 PM IST

ಗದಗ್​ ಮತ್ತು ವಿಜಯಪುರ ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿರುವ ಸಚಿವ ಸಿ. ಸಿ. ಪಾಟೀಲ್, ಜ. 26 ರೊಳಗೆ ವಿಜಯಪುರ ಜಿಲ್ಲೆ ಉಸ್ತುವಾರಿ ಬಿಟ್ಟುಕೊಡುವ ಸಾಧ್ಯತೆಗಳಿವೆ. ಗಣರಾಜ್ಯೋತ್ಸವ ದಿನದಂದು ಸಿ. ಸಿ. ಪಾಟೀಲ ಬದಲು ನೂತನ ಸಚಿವರು ಧ್ವಜಾರೋಹಣ ನೇರವೇರಿಸಲಿದ್ದಾರೆ ಎನ್ನುವ ಮಾತು ಜಿಲ್ಲೆಯ ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ.

state-cabinet-expansion
ರಾಜ್ಯ ಸಚಿವ ಸಂಪುಟ ವಿಸ್ತರಣೆ

ವಿಜಯಪುರ: ರಾಜ್ಯ ಸಚಿವ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆಗಳು ಇರುವ ಬೆನ್ನಲ್ಲೆ, ಎರಡು ಜಿಲ್ಲಾ ಉಸ್ತುವಾರಿ ಹೊಂದಿರುವ ಸಚಿವರ ಅಧಿಕಾರ ಮೊಟಕುಗೊಳಿಸುವ ಸಾಧ್ಯತೆ ಕುರಿತು ಊಹಾಪೋಹ ಜಿಲ್ಲೆಯಲ್ಲಿ ಹರಿದಾಡುತ್ತಿದೆ.

ಸಚಿವ ಸಿ. ಸಿ. ಪಾಟೀಲ್ ಸದ್ಯ ಗದಗ್​ ಮತ್ತು ವಿಜಯಪುರ ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿದ್ದು, ಜ. 26 ರೊಳಗೆ ವಿಜಯಪುರ ಜಿಲ್ಲೆ ಉಸ್ತುವಾರಿ ಬಿಟ್ಟುಕೊಡುವ ಸಾಧ್ಯತೆಗಳಿವೆ. ಗಣರಾಜ್ಯೋತ್ಸವ ದಿನದಂದು ಸಿ. ಸಿ. ಪಾಟೀಲ ಬದಲು ನೂತನ ಸಚಿವರು ಧ್ವಜಾರೋಹಣ ನೇರವೇರಿಸಲಿದ್ದಾರೆ ಎನ್ನುವ ಮಾತು ಜಿಲ್ಲೆಯ ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ.

ರಾಜ್ಯ ಸಚಿವ ಸಂಪುಟ ವಿಸ್ತರಣೆ

ಇದಕ್ಕೆ ಪೂರಕವಾಗಿ ವಿಜಯಪುರದಲ್ಲಿ ಮಾತನಾಡಿದ ಸಚಿವ ಸಿ. ಸಿ. ಪಾಟೀಲ್, ಗಣರಾಜ್ಯೋತ್ಸವಕ್ಕೆ ಇಲ್ಲಿಯೇ ಧ್ವಜಾರೋಹಣ ಮಾಡ್ತೀರಾ ಎಂಬ ಪ್ರಶ್ನೆಗೆ ನೋಡೋಣ ಎಂದು ಹಾರಿಕೆಯ ಉತ್ತರ ನೀಡಿದ್ದು ಇದಕ್ಕೆ ಸಾಕ್ಷಿಯಾಗಿತ್ತು. ಕನ್ನಡ ರಾಜ್ಯೋತ್ಸವಕ್ಕೆ ಗೈರಾಗಿದ್ದ ಸಚಿವರು ಇದೇ‌ ಮೊದಲ ಬಾರಿಗೆ ನಗರಕ್ಕೆ ಆಗಮಿಸಿ ಸ್ವಾಮಿ ವಿವೇಕಾನಂದ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Intro:ವಿಜಯಪುರ Body:ವಿಜಯಪುರ: ರಾಜ್ಯ ಸಚಿವ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆಗಳು ಇರುವ ಬೆನ್ನಲ್ಲೆ, ಎರಡು ಜಿಲ್ಲಾ ಉಸ್ತುವಾರಿ ಹೊಂದಿರುವ ಸಚಿವರ ಅಧಿಕಾರ ಮೊಟಕುಗೊಳಿಸುವ ಸಾಧ್ಯತೆ ಕುರಿತು ಊಹಾಪೋಹ ಜಿಲ್ಲೆಯಲ್ಲಿ ಹರಿದಾಡುತ್ತಿದೆ.
ಗದಗ ಜಿಲ್ಲೆಯರಾದ ಸಚಿವ ಸಿ.ಸಿ.ಪಾಟೀಲ ಸದ್ಯ ಗದಗ, ವಿಜಯಪುರ ಜಿಲ್ಲಾ ಉಸ್ತುವಾರಿ ವಹಿಸಿ ಕೊಂಡಿದ್ದು, ಜ.26 ರೊಳಗೆ ವಿಜಯಪುರ ಜಿಲ್ಲೆ ಉಸ್ತುವಾರಿ ಬಿಟ್ಟುಕೊಡುವ ಸಾಧ್ಯತೆಗಳಿವೆ.
ಗಣರಾಜ್ಯೋತ್ಸವ ದಿನದಂದು ಸಚಿವ ಸಿ.ಸಿ. ಪಾಟೀಲ ಬದಲು ಬೇರೊಬ್ಬ ನೂತನ ಸಚಿವರು ಧ್ವಜಾರೋಹಣ ನೇರವೇರಿಸಲಿದ್ದಾರೆ ಎನ್ನುವ ಮಾತು ಜಿಲ್ಲೆಯ ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ.
ಇದಕ್ಕೆ ಪೂರಕವಾಗಿ ವಿಜಯಪುರದಲ್ಲಿ ಮಾತನಾಡಿದ ಸಚಿವ ಸಿ.ಸಿ.ಪಾಟೀಲ, ಗಣರಾಜ್ಯೋತ್ಸವಕ್ಕೆ ಇಲ್ಲಿಯೇ ಧ್ವಜಾರೋಹಣ ಮಾಡ್ತೀರಾ ಎಂಬ ಪ್ರಶ್ನೆಗೆ ನೋಡೋಣ ಎಂದು ಹಾರಿಕೆಯ ಉತ್ತರ ನೀಡಿದ್ದು ಇದಕ್ಕೆ ಸಾಕ್ಷಿಯಾಗಿತ್ತು.
ನ‌. 1 ರಂದು ಕನ್ನಡ ರಾಜ್ಯೋತ್ಸವಕ್ಕೂ ವಿಜಯಪುರದಲ್ಲಿ ಸಚಿವ ಸಿ. ಸಿ. ಪಾಟೀಲ ಗೈರಾಗಿದ್ದರು.
ನ.13ರ ನಂತರ ಇದೇ‌ ಮೊದಲ ಬಾರಿಗೆ ವಿಜಯಪುರಕ್ಕೆ ಸಚಿವ ಸಿ. ಸಿ. ಪಾಟೀಲ ಆಗಮಿಸಿ ಸ್ವಾಮಿ ವಿವೇಕಾನಂದ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.Conclusion:ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.