ETV Bharat / state

ಇಂದು ರಾಜ್ಯದ ಜಲಾಶಯಗಳಲ್ಲಿ ಹೀಗಿದೆ ನೀರಿನ ಮಟ್ಟ

author img

By

Published : Jul 28, 2022, 3:35 PM IST

present water status of state reservoirs
ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ

ಇಂದು ರಾಜ್ಯದ ವಿವಿಧ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ ನೋಡಿ..

ಕಳೆದ ಕೆಲ ದಿನಗಳ ಹಿಂದೆ ರಾಜ್ಯದಲ್ಲಿ ಧಾರಾಕಾರ ಮಳೆಯಾಗಿ ನದಿ, ಹಳ್ಳ - ಕೊಳ್ಳ, ಜಲಾಶಯಗಳಲ್ಲಿ ಅಧಿಕ ಪ್ರಮಾಣದ ನೀರು ಸಂಗ್ರಹವಾಗಿದೆ. ನಿರಂತರವಾಗಿ ಸುರಿಯುತ್ತಿದ್ದ ಮಳೆ ಈ ವಾರ ಕೊಂಚ ಬಿಡುವು ನೀಡಿತ್ತು. ಇದೀಗ ಮತ್ತೆ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಜಲಾಶಯಗಳಲ್ಲಿ ಸದ್ಯ ಒಳಹರಿವು ಕಡಿಮೆಯಾಗಿದೆ, ಹೊರ ಹರಿವು ಕೂಡಾ ಕಡಿಮೆ ಮಾಡಲಾಗಿದೆ. ಇಂದು ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ ನೋಡಿ..

ಕಬಿನಿ ಜಲಾಶಯ

  • ಗರಿಷ್ಠ ಮಟ್ಟ: 2,284 ಅಡಿ
  • ಇಂದಿನ ಮಟ್ಟ: 2,283.66 ಅಡಿ
  • ಒಳ ಹರಿವು: 5,746 ಕ್ಯೂಸೆಕ್
  • ಹೊರ ಹರಿವು: 5,000 ಕ್ಯೂಸೆಕ್

ಆಲಮಟ್ಟಿ ಜಲಾಶಯ

  • ಗರಿಷ್ಠ ಮಟ್ಟ: 519.60 ಮೀಟರ್
  • ಇಂದಿನ ಮಟ್ಟ: 518.45 ಮೀಟರ್
  • ಒಳಹರಿವು: 27,154 ಕ್ಯೂಸೆಕ್
  • ಹೊರಹರಿವು: 18,451 ಕ್ಯೂಸೆಕ್
  • ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ: 123.08 ಟಿಎಂಸಿ
  • ಇಂದಿನ ನೀರಿನ ಸಂಗ್ರಹ: 104.368 ಟಿಎಂಸಿ

ಭದ್ರಾ ಜಲಾಶಯ

  • ಗರಿಷ್ಠ ಮಟ್ಟ : 186 ಅಡಿ
  • ಇಂದಿನ ಮಟ್ಟ: 184.1 ಅಡಿ
  • ಒಳಹರಿವು: 12,358 ಕ್ಯೂಸೆಕ್
  • ಹೊರಹರಿವು: 18,353 ಕ್ಯೂಸೆಕ್
  • ನೀರು ಸಂಗ್ರಹ: 69.139 ಟಿಎಂಸಿ
  • ಸಾಮರ್ಥ್ಯ: 71.535 ಟಿಎಂಸಿ
  • ಕಳೆದ ವರ್ಷ ಈ ದಿನದ ನೀರು ಸಂಗ್ರಹ 181 ಅಡಿ

ಲಿಂಗನಮಕ್ಕಿ ಜಲಾಶಯ

  • ಇಂದಿನ ಮಟ್ಟ: 1,798.35 ಅಡಿ
  • ಗರಿಷ್ಠ ಮಟ್ಟ : 1,819 ಅಡಿ
  • ಒಳಹರಿವು: 7,872 ಕ್ಯೂಸೆಕ್
  • ಹೊರಹರಿವು: 5,886.12 ಕ್ಯೂಸೆಕ್
  • ನೀರು ಸಂಗ್ರಹ: 91.00 ಟಿಎಂಸಿ
  • ಸಾಮರ್ಥ್ಯ: 151.64 ಟಿಎಂಸಿ
  • ಕಳೆದ ವರ್ಷ ಈ ದಿನ ನೀರು ಸಂಗ್ರಹ: 1805.80 ಅಡಿ

ಕೆಆರ್​ಎಸ್ ಜಲಾಶಯ

  • ಇಂದಿನ ಮಟ್ಟ:124.70 ಅಡಿ
  • ಗರಿಷ್ಠ ಮಟ್ಟ: 124.80 ಅಡಿ
  • ಒಳಹರಿವು: 12,588 ಕ್ಯೂಸೆಕ್
  • ಹೊರಹರಿವು: 14,227 ಕ್ಯೂಸೆಕ್
  • ನೀರು ಸಂಗ್ರಹ: 49.312 ಟಿಎಂಸಿ

ಬಸವ ಸಾಗರ ಜಲಾಶಯ

  • ಒಟ್ಟು ನೀರಿನ ಮಟ್ಟ: 492.25 ಆಡಿ
  • ಇಂದಿನ ನೀರಿನ ಮಟ್ಟ: 491.84 ಅಡಿ
  • ಒಟ್ಟು ನೀರಿನ ಸಾಮರ್ಥ್ಯ: 33.31 ಟಿಎಂಸಿ
  • ಇಂದಿನ ನೀರಿನ ಸಾಮರ್ಥ್ಯ: 31.44 ಟಿಎಂಸಿ
  • ಒಳಹರಿವು : 20,000 ಸಾವಿರ ಕ್ಯೂಸೆಕ್
  • ಹೊರಹರಿವು : 17,480 ಕ್ಯೂಸೆಕ್.
  • 94.30% ಜಲಾಶಯ ಭರ್ತಿಯಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಭಾರಿ ಮಳೆ ಮುಂದುವರಿಕೆ: ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.