ETV Bharat / state

ವಿಜಯಪುರ: ದ್ವಿ ಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ ರೂಲ್ಸ್

author img

By

Published : Dec 24, 2021, 3:19 PM IST

Helmet Mandatory in Vijayapur
ವಿಜಯಪುರದಲ್ಲಿ ಹೆಲ್ಮೆಟ್ ಕಡ್ಡಾಯ ರೂಲ್ಸ್

ವಿಜಯಪುರ ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯಕ್ಕೆ ಎಸ್​ಪಿ ಆನಂದ ಕುಮಾರ ಮುಂದಾಗಿದ್ದಾರೆ. ಹೆಲ್ಮೆಟ್ ಹಾಕಿಕೊಳ್ಳದಿದ್ದರೆ, ಕಠಿಣ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ.

ವಿಜಯಪುರ: 22 ಲಕ್ಷ ಜನಸಂಖ್ಯೆ ಹೊಂದಿರುವ ವಿಜಯಪುರ ಜಿಲ್ಲೆಯಲ್ಲಿ ವಾಹನ ಸಂಚಾರ ಹೆಚ್ಚಾಗುತ್ತಿದೆ. ಇದರ ಜತೆ ಅಪಘಾತದಲ್ಲಿ ಹೆಚ್ಚಾಗಿ ತಲೆಗೆ ಪೆಟ್ಟಾಗಿ ಸಾಯುವವರ ಸಂಖ್ಯೆಯೂ ಹೆಚ್ಚಿದೆ. ಇದನ್ನು ತಪ್ಪಿಸಲು ಮತ್ತೊಮ್ಮೆ ಜಿಲ್ಲೆಯಲ್ಲಿ ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಲು ಜಿಲ್ಲಾ ಪೊಲೀಸ್ ಇಲಾಖೆ ಮುಂದಾಗಿದೆ.

ವಿಜಯಪುರದಲ್ಲಿ ಹೆಲ್ಮೆಟ್ ಕಡ್ಡಾಯ ರೂಲ್ಸ್ : ಎಸ್​ಪಿ ಆನಂದ ಕುಮಾರ

2022 ರ ಜ. 1ರಿಂದ ಬೈಕ್ ಸವಾರರು ಹಾಗೂ ಹಿಂಬದಿ ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕೆಂದು ಜಿಲ್ಲೆಯಲ್ಲಿ ಜಾಗೃತಿ ಆರಂಭಿಸಲಾಗಿದೆ. ಲಾಕ್​​ಡೌನ್ ಸಮಯದಲ್ಲಿ ವಾಹನಗಳು ಅಷ್ಟಾಗಿ ರಸ್ತೆಗೆ ಇಳಿಯದಿದ್ದರೂ 2021ರಲ್ಲಿ ರಸ್ತೆ ಅಪಘಾತದಲ್ಲಿ 135 ಜನ ಸಾವನಪ್ಪಿದ್ದರು. ಇದರಲ್ಲಿ ಶೇ. 90ರಷ್ಟು ಜನ ಹೆಲ್ಮೆಟ್ ಇಲ್ಲದೇ ತಲೆಗೆ ಪೆಟ್ಟಾಗಿ ಸಾವಿಗೀಡಾಗಿದ್ದಾರೆ.

ಜಿಲ್ಲೆಯಲ್ಲಿ ಹಲವು ಬಾರಿ ನೂತನವಾಗಿ ಎಸ್​ಪಿಯಾಗಿ ಬಂದವರು ಹೆಲ್ಮೆಟ್ ಕಡ್ಡಾಯಕ್ಕೆ ಪ್ರಯತ್ನಿಸಿದ್ದಾರೆ. ನ್ಯಾಯಾಲಯ ಸಹ ಕಡ್ಡಾಯ ಹೆಲ್ಮೆಟ್ ಜಾರಿ ಮಾಡಲು ಸೂಚನೆ ನೀಡಿದರೂ ಸಹ ಯಾರು ಯಶಸ್ವಿ ಕಂಡಿಲ್ಲ. ಇದಕ್ಕೆ ಮುಖ್ಯ ಕಾರಣ ಬಿಸಿಲು. ಬಿಸಿಲಿನಲ್ಲಿ ಹೆಲ್ಮೆಟ್ ಹಾಕಿಕೊಳ್ಳಲು ಆಗುವುದಿಲ್ಲ ಎನ್ನುವ ನೆಪ ಹೇಳಿ ಹೆಲ್ಮೆಟ್ ಕಡ್ಡಾಯ ರೂಲ್ಸ್​​ ತಿರಸ್ಕರಿಸಿದ್ದರು.

ಆದರೆ, ಈಗ ಮತ್ತೆ ಹೆಲ್ಮೆಟ್ ಕಡ್ಡಾಯಕ್ಕೆ ಎಸ್​ಪಿ ಆನಂದ ಕುಮಾರ ಮುಂದಾಗಿದ್ದಾರೆ. ಹೆಲ್ಮೆಟ್ ಹಾಕಿಕೊಳ್ಳದಿದ್ದರೆ, ಕಠಿಣ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ. ಸದ್ಯ ಬೈಕ್ ಸವಾರರು ಸಹ ಹೆಲ್ಮೆಟ್ ಕಡ್ಡಾಯವನ್ನು ಮೇಲ್ನೋಟಕ್ಕೆ ಸ್ವಾಗತಿಸಿದ್ದಾರೆ. ಆದರೆ, ಜ.1ರಿಂದ ಹೆಲ್ಮೆಟ್ ಕಡ್ಡಾಯ ಜಾರಿಯಾದ ಮೇಲೆ ಸವಾರರ ಪ್ರತಿಕ್ರಿಯೆ, ಪೊಲೀಸರ ಖಡಕ್ ವಾರ್ನಿಂಗ್​​ಗಳ ಪರಿಣಾಮ ಗೊತ್ತಾಗಲಿದೆ.

ಇದನ್ನೂ ಓದಿ: ವಿದೇಶದಿಂದ ರಾಜ್ಯಕ್ಕೆ ಬಂದ ನಾಲ್ವರಿಗೆ ಕೋವಿಡ್ ಸೋಂಕು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.