ETV Bharat / state

ವಿಜಯಪುರದಲ್ಲಿ ವರುಣನ ಸಿಂಚನ: ಕೃಷಿ ಚಟುವಟಿಕೆ ಚುರುಕು

author img

By

Published : Jul 9, 2020, 5:01 PM IST

Updated : Jul 9, 2020, 7:04 PM IST

Heavy rain from Morning in part of Vijayapur District
ವಿಜಯಪುರದಲ್ಲಿ ವರುಣನ ಸಿಂಚನ...ಕೃಷಿಯತ್ತ ರೈತರ ಒಲವು

ವಿಜಯಪುರದಲ್ಲಿ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಕಂಡು ಬಂದಿದ್ದು, ಇದೀಗ ಅಲ್ಲಲ್ಲಿ ಉತ್ತಮ ಮಳೆಯಾಗಿದೆ.

ವಿಜಯಪುರ: ಬೆಳಗ್ಗಿನಿಂದಲೂ ಮೋಡ ಕವಿದ ವಾತಾವರಣದಿಂದ ಗುಮ್ಮಟ ನಗರಿಯಲ್ಲಿ ಮಳೆಯಾಗುತ್ತಿದ್ದು, ನಗರದ ನಿವಾಸಿಗಳಲ್ಲಿ ಸಂತಸ ಮೂಡಿಸಿದೆ.

ನಗರದ ಸ್ಟೇಷನ್ ರಸ್ತೆ, ಬಡೆ ಕಮಾನ ರಸ್ತೆ, ಗೋಪಾಲಪುರ ಗಲ್ಲಿ ಸೇರಿದಂತೆ ನಗರದ ಬಹುತೇಕ ಕಡೆಯಲ್ಲಿ ಉತ್ತಮವಾಗಿ ಮಳೆ‌ ಸುರಿದಿದೆ. ರಸ್ತೆಯಲ್ಲಿ ಓಡಾಟ ನಡೆಸುತ್ತಿದ್ದ ಜನರು ರಸ್ತೆ ಬದಿಯಲ್ಲಿ ಆಸರೆ ಪಡೆದುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ನಿನ್ನೆ ಕೂಡ ಅರ್ಧ ಗಂಟೆಗೂ ಅಧಿಕ ಕಾಲ ನಗರದಲ್ಲಿ ಮಳೆಯಾಗಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಜನತೆ ಸಂತಸಗೊಂಡಿದ್ದಾರೆ.

ವಿಜಯಪುರದಲ್ಲಿ ವರುಣನ ಸಿಂಚನ: ಕೃಷಿಯತ್ತ ರೈತರ ಒಲವು

ವಿಜಯಪುರ ನಗರಭಾಗದಲ್ಲೇ 14.2 ಮಿ.ಮೀಟರ್ ಮಳೆಯಾಗಿದೆ. ಇದರ ಜೊತೆ ಗ್ರಾಮೀಣ ಭಾಗದಲ್ಲೂ ಮಳೆ ಮುಂದುವರೆದಿದೆ. ಇದರಲ್ಲಿ ಮಟ್ಟಿಹಾಳದಲ್ಲಿ 44 ಮಿ.ಮೀ. ಅತಿ ಹೆಚ್ಚು ಮಳೆಯಾದರೆ, ನಾಗಠಾಣದಲ್ಲಿ 2.0 ಮಿ.ಮೀಟರ್​​​ ಕಡಿಮೆ ಮಳೆಯಾಗಿದೆ.

ಬಸವನ ಬಾಗೇವಾಡಿ 8.0 ಮಿ.ಮೀ., ಮನಗೂಳಿ 7.0, ಆಲಮಟ್ಟಿ 6.2, ಹೂವಿನ ಹಿಪ್ಪರಗಿ 16.4, ಅರೇಶಂಕರ 4.4, ಮಟ್ಟಿಹಾಳ 44.0, ವಿಜಯಪುರ 14.2, ನಾಗಠಾಣ 2.0, ಭೂತನಾಳ 4.2, ಹಿಟ್ನಳ್ಳಿ 19.0, ಮಮದಾಪುರ 14.8, ಬಬಲೇಶ್ವರ 17.2, ನಾದ ಬಿ.ಕೆ 2.0, ಹಲಸಂಗಿ 5.0, ನಾಲತವಾಡ 7.4, ತಾಳಿಕೋಟೆ 4.2, ಢವಳಗಿ 6.0, ಕಡ್ಲೇವಾಡ 3.0 ಮಿ.ಮೀ. ಮಳೆಯಾಗಿದೆ ಎಂದು ಜಿಲ್ಲಾ ಹವಾಮಾನ ಇಲಾಖೆ ತಿಳಿಸಿದೆ.

ಜಿಲ್ಲೆಯಾದ್ಯಂತ ಕಳೆದೆರಡು ದಿನಗಳಿಂದ ಉತ್ತಮವಾಗಿ ಮಳೆ ಸುರಿಯುತ್ತಿರುವ ಕಾರಣ ಜಿಲ್ಲೆಯ ಕೃಷಿಕ ವರ್ಗ ಸಂತಗೊಂಡಿದೆ. ಈಗಾಗಲೇ ಜಿಲ್ಲೆಯಲ್ಲಿ ತೊಗರಿ ಬಿತ್ತನೆ‌ ಮಾಡಿರುವ ರೈತರು ಉತ್ತಮ ಬೆಳೆ ಕೈಸೇರುವ ನಿರೀಕ್ಷೆಯಲ್ಲಿದ್ದಾರೆ.

Last Updated :Jul 9, 2020, 7:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.