ETV Bharat / state

15 ದಿನಗಳಿಂದ ಭೂಕಂಪನದ ಅನುಭವ : ನಿದ್ದೆಗೆಟ್ಟು ಕಂಗಾಲಾದ ವಿಜಯಪುರ ಜನ!

author img

By

Published : Sep 2, 2021, 5:42 PM IST

earthquake-tremors-felt-in-vijayapura
ಬೀದಿಯಲ್ಲಿಯೇ ಕಾಲ ಕಳೆದ ಜನ

ವಿಜಯಪುರ ಜಿಲ್ಲೆಯಲ್ಲಿ ಜನರಿಗೆ ಭೂಕಂಪನದ ಅನುಭವವಾಗಿದೆ. ನಮ್ಮ ಗ್ರಾಮದಲ್ಲಿ ಸುಮಾರು 15 ದಿನಗಳಿಂದ ಭೂಕಂಪವಾಗುತ್ತಿದೆ. ಈ ಬಗ್ಗೆ ಈಗಾಗಲೇ ತಹಶಿಲ್ದಾರ್​ ಅವರ ಗಮನಕ್ಕೂ ತಂದಿದ್ದೇವೆ. ಆದರೆ, ಅವರಿಂದ ಹಾರಿಕೆಯ ಉತ್ತರಗಳಷ್ಟೇ ಬರುತ್ತಿವೆ ಎಂದು ಹುಣಶ್ಯಾಳ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯಪುರ: ಏಕಾಏಕಿ ಭೂಮಿಯೊಳಗಿನಿಂದ ಭಾರಿ ಶಬ್ದ ಕೇಳಿಬಂದಿರುವ ಪರಿಣಾಮ ಜನ ಆತಂಕಗೊಂಡಿರುವ ಘಟನೆ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಹುಣಶ್ಯಾಳ ಪಿ‌ಬಿ, ಕರಭಂಟನಾಳ ಹಾಗೂ ಇತರೆ ಗ್ರಾಮಗಳಲ್ಲಿ ನಡೆದಿದೆ.

ಭೂಕಂಪನ ಅನುಭವ ಕುರಿತು ಗ್ರಾಮಸ್ಥರು ಮಾಹಿತಿ ಹಂಚಿಕೊಂಡಿದ್ದಾರೆ

ಬುಧವಾರ ರಾತ್ರಿ ವೇಳೆ ಆರಾಮಾಗಿ ನಿದ್ರಿಸುತ್ತಿದ್ದ ಜಿಲ್ಲೆಯ ಜನ, ಒಮ್ಮೆಲೇ ಕೇಳಿಬಂದಿರುವ ಭಾರಿ ಶಬ್ದಕ್ಕೆ ಹೆದರಿದ್ದಾರೆ. ಅಲ್ಲದೇ, ಈ ವೇಳೆ ಜೀವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮನೆಯಿಂದ ಹೊರಬಂದಿದ್ದಾರೆ. ನಂತರ ತಮಗಾದ ವಿಚಿತ್ರ ಅನುಭವದ ಬಗ್ಗೆ ಪರಸ್ಪರ ಒಬ್ಬರಿಗೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ. ಭೂಕಂಪನ ಆಗಿದೆ ಎಂದು ಭಯಗೊಂಡಿರೋ ಜನ ಮನೆಯಿಂದ ಹೊರಬಂದು ರಾತ್ರಿ ಇಡೀ ಬೀದಿಯಲ್ಲಿಯೇ ಸಮಯ ಕಳೆದಿದ್ದಾರೆ.

ನಮ್ಮ ಗ್ರಾಮದಲ್ಲಿ ಸುಮಾರು 15 ದಿನಗಳಿಂದ ಭೂಕಂಪವಾಗುತ್ತಿದೆ. ಈ ಬಗ್ಗೆ ಈಗಾಗಲೇ ತಹಶಿಲ್ದಾರ್​ ಅವರ ಗಮನಕ್ಕೂ ತಂದಿದ್ದೇವೆ. ಆದರೆ, ಅವರಿಂದ ಹಾರಿಕೆಯ ಉತ್ತರಗಳಷ್ಟೇ ಬರುತ್ತಿವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿನ್ನೆ ರಾತ್ರಿ ಸುಮಾರು 9 ಗಂಟೆಯ ಸಮಯಕ್ಕೆ ಪ್ರತೀ ಹತ್ತು ನಿಮಿಷಕ್ಕೆ ಒಮ್ಮೆ ಭೂಮಿ ನಡುಗಿರುವ ಅನುಭವವಾಗಿದೆ. ಹೀಗಾಗಿ, ಗ್ರಾಮಸ್ಥರೆಲ್ಲರೂ ಆತಂಕಗೊಂಡು ಮನೆಯಿಂದ ಹೊರಬಂದು ಕಟ್ಟೆಯಲ್ಲಿ ಕುಳಿತು ಕಾಲ ಕಳೆದಿದ್ದೇವೆ. ವಿಷಯ ಇಷ್ಟು ಗಂಭೀರವಾಗಿದ್ದರೂ ತಹಶಿಲ್ದಾರ್​ ಅವರು ಇತ್ತ ಮುಖಮಾಡಿಲ್ಲ. ಹೀಗಾಗಿ, ದಯವಿಟ್ಟು ಸಂಬಂಧಪಟ್ಟವರು ಗ್ರಾಮಕ್ಕೆ ಭೇಟಿ ನೀಡಿ ಜನರ ಆತಂಕವನ್ನು ದೂರಮಾಡುವಂತೆ ಹುಣಶ್ಯಾಳ ಗ್ರಾಮಸ್ಥ ಶುಶಾಂತ ಆಲೂರ ಮನವಿ ಮಾಡಿದ್ದಾರೆ.

ಓದಿ: ಜಾಲಹಳ್ಳಿ ವಾಯುನೆಲೆ ಮೇಲೆ ಯಾವುದೇ ಡ್ರೋನ್​ ಹಾರಾಟವಾಗಿಲ್ಲ: ಡಿಸಿಪಿ ಸ್ಪಷ್ಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.