ETV Bharat / state

ವಿಜಯಪುರದಲ್ಲಿ 37 ಜನರಿಗೆ ಕೋವಿಡ್‌: ಕೂಡಗಿ ವಿದ್ಯುತ್ ಸ್ಥಾವರದ 22 ಸಿಬ್ಬಂದಿಗೆ ಸೋಂಕು

author img

By

Published : Jan 7, 2022, 3:31 PM IST

Updated : Jan 7, 2022, 5:15 PM IST

ವಿಜಯಪುರ ಜಿಲ್ಲೆಯಲ್ಲಿ ಇಂದು 37 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಈ ಪೈಕಿ ಕೂಡಗಿ ಉಷ್ಣ ವಿದ್ಯುತ್ ಸ್ಥಾವರದಲ್ಲೇ 22 ಜನರಿಗೆ ಸೋಂಕು ತಗುಲಿದೆ.

sunil kumar
ಡಿಸಿ ಸುನೀಲ್ ಕುಮಾರ್

ವಿಜಯಪುರ: ಜಿಲ್ಲೆಯಲ್ಲಿಂದು 37 ಜನರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 95 ತಲುಪಿದೆ.

ಆಸ್ಪತ್ರೆಯಲ್ಲಿ 9 ರೋಗಿಗಳು ಸೇರಿದಂತೆ ಹೋಂ ಐಸೋಲೇಷನ್​ನಲ್ಲಿ 6 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಮೂವರು ರೋಗಿಗಳು ಬಿಡುಗಡೆಯಾಗಿದ್ದಾರೆ.‌

ಇಂದು 2,011 ಜನರ ಗಂಟಲು ದ್ರವ ಸಂಗ್ರಹಿಸಲಾಗಿದೆ. 1,716 ಜನರ ಗಂಟಲು ದ್ರವ ವರದಿಗೆ ಕಾಯಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.

ಕೂಡಗಿ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಸೋಂಕು:

37 ಜನರಲ್ಲಿ ಕೂಡಗಿ ಉಷ್ಣ ವಿದ್ಯುತ್ ಸ್ಥಾವರದಲ್ಲಿಯೇ 22 ಜನರಿಗೆ ಪಾಸಿಟವ್ ದೃಢಪಟ್ಟಿದೆ. ಮುಂಬೈನಿಂದ ಆಗಮಿಸಿದವರಿಂದ ಸೋಂಕು ಹರಡಿರುವ ಶಂಕೆ ವ್ಯಕ್ತವಾಗಿದೆ. ಉಷ್ಣ ವಿದ್ಯುತ್ ಸ್ಥಾವರದಲ್ಲಿ 3500 ಕ್ಕೂ ಅಧಿಕ ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸುವ ಸಾಧ್ಯತೆ ಇದೆ.

ಒಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಕೋವಿಡ್ ದೃಢಪಟ್ಟ 18 ಸೋಂಕಿತರ ಗಂಟಲು ದ್ರವ ಮಾದರಿಯನ್ನು ಜಿನೋಮ್ ಸೀಕ್ವೆನ್ಸಿಂಗ್ ಟೆಸ್ಟ್​​ಗೆ ಬೆಂಗಳೂರಿಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ನಿಖರ ಮಾಹಿತಿ ಲಭ್ಯವಾಗಲಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮಕ್ಕಳಿಗೆ ಲಸಿಕೆ, ಸಂಪರ್ಕಿತರ ಪತ್ತೆಯಲ್ಲಿ ಚಾಮರಾಜನಗರಕ್ಕೆ ಮೊದಲ ಸ್ಥಾನ

Last Updated : Jan 7, 2022, 5:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.