ETV Bharat / state

ಹೆಂಡತಿ, ಮಕ್ಕಳ ಬಂಗಾರ ಅಡವಿಟ್ಟು ಕೆಲಸ ಮಾಡಿದ್ದೇವೆ, ಸಾಲದ ಬಡ್ಡಿ ದುಪ್ಪಟ್ಟಾಗಿದೆ.. ಗುತ್ತಿಗೆದಾರರ ಅಳಲು

author img

By

Published : Apr 10, 2023, 9:23 AM IST

ಕಾಮಗಾರಿ ಮುಕ್ತಾಯಗೊಂಡು ವರ್ಷಗಳು ಕಳೆದರೂ ಇನ್ನೂ ಬಿಲ್ ಪಾವತಿಯಾಗಿಲ್ಲ ಎಂದು ಆರೋಪಿಸಿ ಏ.12 ರಂದು ಕಾರವಾರ ನಗರಸಭೆ ಮುಂಭಾಗ ಗುತ್ತಿಗೆದಾರರು ಸೇರಿ ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

contractor
ಗುತ್ತಿಗೆದಾರರು

ಸರ್ಕಾರದ ವಿರುದ್ಧ ಗುತ್ತಿಗೆದಾರರು ಆಕ್ರೋಶ

ಕಾರವಾರ: ಸರ್ಕಾರಿ ಕಾಮಗಾರಿಗಳನ್ನು ಗುತ್ತಿಗೆ ಆಧಾರದ ಮೇಲೆ ನೀಡಿ ಬಳಿಕ ಗುತ್ತಿಗೆದಾರರಿಗೆ ಹಂತ ಹಂತವಾಗಿ ಹಣ ಸಂದಾಯ ಮಾಡಲಾಗುತ್ತದೆ. ಆದರೆ, ರಾಜ್ಯದ ಬಹುತೇಕ ಕಡೆ ಕಾಮಗಾರಿ ಪೂರ್ಣಗೊಂಡು ಸರ್ಕಾರದ ಅವಧಿ ಕೂಡ ಮುಕ್ತಾಯದ ಹಂತದಲ್ಲಿದ್ದರೂ ಕಾಮಗಾರಿ ಬಿಲ್ ಪಾವತಿಯಾಗದೆ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿರುವ ಆರೋಪ‌ಗಳು ಕೇಳಿಬಂದಿವೆ. ಇದೀಗ ಉತ್ತರ ಕನ್ನಡ ಜಿಲ್ಲೆಯಲ್ಲೂ ಗುತ್ತಿಗೆದಾರರು ತಮ್ಮ ಅಳಲನ್ನು ಮಾಧ್ಯಮದವರ ಎದುರು ತೋಡಿಕೊಂಡಿದ್ದಾರೆ.

ಹೌದು, ಸರ್ಕಾರ ಮಂಜೂರು ಮಾಡುವ ಪ್ರತಿ ಕಾಮಗಾರಿಗಳನ್ನು ಗುತ್ತಿಗೆ ಆಧಾರದ ಮೇಲೆ ನೀಡಲಾಗುತ್ತದೆ. ಅತಿ ಕಡಿಮೆ ದರದಲ್ಲಿ ಬಿಡ್ ಮಾಡಿದವರಿಗೆ ಕೆಲಸ ನೀಡಲಾಗುತ್ತದೆ. ಅದರಂತೆ ಉತ್ತರಕನ್ನಡ ಜಿಲ್ಲೆಯಲ್ಲಿಯೂ ಇದೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ಕಾಮಗಾರಿಗಳನ್ನು ನಡೆಸಿ ಅಭಿವೃದ್ಧಿ ಕೈಗೊಳ್ಳಲಾಗಿದೆ. ಇದೀಗ ಇದೇ ಅಭಿವೃದ್ಧಿಯನ್ನು ಮುಂದಿಟ್ಟುಕ್ಕೊಂಡು ಸರ್ಕಾರ ಕೂಡ ಚುನಾವಣೆ ಎದುರಿಸಲು ಸಜ್ಜಾಗಿದೆ. ಆದರೆ, ಕಾಮಗಾರಿ ಮುಕ್ತಾಯಗೊಂಡು ವರ್ಷಗಳು ಕಳೆದರೂ ಕೂಡ ಬಿಲ್ ಪಾವತಿಯಾಗಿಲ್ಲ. ನಿತ್ಯವೂ ಕಚೇರಿಗೆ ಅಲೆದರೂ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ. ಹಣಕಾಸು ವರ್ಷದ ಕೊನೆಯಲ್ಲಾದರೂ ಪಾವತಿಯಾಗಬಹುದೆಂದು ಕಾದರೂ ಅದು ಕೂಡ ವಿಫಲವಾಗಿದೆ. ಇದರಿಂದ ಗುತ್ತಿಗೆದಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರದ ಕಣ್ಣು ತೆರೆಸುವ ಸಂಬಂಧ ಏ.12 ರಂದು ಕಾರವಾರ ನಗರಸಭೆ ಮುಂಭಾಗ ಗುತ್ತಿಗೆದಾರರು ಸೇರಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಕಾರವಾರ ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯಕ ಎಚ್ಚರಿಸಿದ್ದಾರೆ.

ಇದನ್ನೂ ಓದಿ : ಅನಧಿಕೃತ ಪ್ಲಾಂಟೇಷನ್ ಬೆಳೆ ಬೆಳೆದ ಜಮೀನು ಗುತ್ತಿಗೆ ನೀಡಿ ಸಕ್ರಮಗೊಳಿಸಲು ಕ್ರಮ: ಸಚಿವ ಅಶೋಕ್

ಇನ್ನು ಜಿಲ್ಲೆಯಲ್ಲಿ ಪ್ಯಾಕೇಜ್ ರೂಪದಲ್ಲಿ ಟೆಂಡರ್ ನೀಡಲು ಮುಂದಾದಾಗ ವಿರೋಧಿಸಲಾಗಿತ್ತು. ಆದರೂ ಕೆಆರ್​ಐಡಿಎಲ್ ನವರಿಗೆ ಗುತ್ತಿಗೆ ನೀಡಿ ಇದೀಗ ಮುಂಗಡ ಹಣ ಕೂಡ ಪಾವತಿ ಮಾಡಲಾಗುತ್ತಿದೆ. ಆದರೆ, ನೇರವಾಗಿ ಗುತ್ತಿಗೆ ಪಡೆದವರು ಪ್ರಾಮಾಣಿಕವಾಗಿ ಕೆಲಸ ಮುಗಿಸಿದವರಿಗೆ ಹಣ ಪಾವತಿಯಾಗುತ್ತಿಲ್ಲ. ಜಿಲ್ಲೆಯಲ್ಲಿ ಕೆಲ ಗುತ್ತಿಗೆದಾರರಿಗೆ ಲಕ್ಷಾಂತರ ರೂ. ಹಣ ಬಾಕಿ ಉಳಿಸಲಾಗಿದೆ. ಬ್ಯಾಂಕ್​ನಲ್ಲಿ ನಮ್ಮ ಹೆಂಡತಿ ಮಕ್ಕಳ ಬಂಗಾರ ಅಡು ಇಟ್ಟು ಸಾಲ ಮಾಡಲಾಗಿದೆ. ಆದರೆ, ಇದೀಗ ಅದರ ಬಡ್ಡಿಯೇ ದುಪ್ಪಟ್ಟಾಗಿದ್ದು ಬಂಗಾರ ಕಳೆದುಕೊಳ್ಳುವ ಸ್ಥಿತಿಗೆ ಬಂದಿದ್ದೇವೆ. ಸರ್ಕಾರ ಕೂಡಲೇ ಬಾಕಿ ಹಣ ಬಿಡುಗಡೆ ಮಾಡಬೇಕು. ಇಲ್ಲದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಇದನ್ನೂ ಓದಿ : ನ್ಯಾಯಾಲಯದ ಅನುಮತಿ ಇಲ್ಲದೆ ಗುತ್ತಿಗೆ ಪ್ರಕ್ರಿಯೆ ಪೂರ್ಣಗೊಳಿಸಬೇಡಿ: ಹೈಕೋರ್ಟ್

"ಸರ್ಕಾರ ಕಾಮಗಾರಿ ನೀಡಿ ಕೆಲಸ ಮುಗಿದ ಬಳಿಕ ಹಣ ಪಾವತಿಸಲು ವಿಳಂಬವಾದ ಕಾರಣ ಗುತ್ತಿಗೆದಾರರು ಕಂಗಾಲಾಗಿದ್ದಾರೆ. ಆದ್ರೆ, ಇದೀಗ ಸರ್ಕಾರವು ಅದೇ ಕಾಮಗಾರಿಯನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದು, ಕೂಡಲೇ ಕಾಮಗಾರಿಗಳಿಗೆ ಹಣ ಪಾವತಿಸಬೇಕಿದೆ" ಎಂದು ಗುತ್ತಿಗೆದಾರ ರೋಹದಾಸ್ ಕೊಠಾರಕರ್ ಮನವಿ ಮಾಡಿದ್ದಾರೆ.

ಇದನ್ನೂ ಓದಿ : NHM ಗುತ್ತಿಗೆ ನೌಕರರಿಗೆ ಸಿಹಿ ಸುದ್ದಿ: ಶೇ 15ರಷ್ಟು ಸಂಭಾವನೆ ಹೆಚ್ಚಿಸಿ ಸರ್ಕಾರದ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.