ETV Bharat / state

ಉತ್ತರಕನ್ನಡದಲ್ಲಿ ಸರಳವಾಗಿ ಗಣರಾಜ್ಯೋತ್ಸವ ಆಚರಣೆ

author img

By

Published : Jan 26, 2021, 2:26 PM IST

Republic day Celebration
ಗಣರಾಜ್ಯೋತ್ಸವ

ಜಿಲ್ಲಾ ಕೇಂದ್ರ ಕಾರವಾರದ ಪೊಲೀಸ್ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಭಾಗವಹಿಸಿ ಧ್ವಜಾರೋಹಣ ನೆರವೇರಿಸಿದ್ದಾರೆ.

ಕಾರವಾರ: ಉತ್ತರಕನ್ನಡ ಜಿಲ್ಲೆಯಾದ್ಯಂತ ಇಂದು 72ನೇ ಗಣರಾಜ್ಯೋತ್ಸವವನ್ನು ಕೋವಿಡ್​ ಹಿನ್ನೆಲೆ ಸರಳವಾಗಿ ಆಚರಿಸಲಾಯಿತು.

ಜಿಲ್ಲಾ ಕೇಂದ್ರ ಕಾರವಾರದ ಪೊಲೀಸ್ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಧ್ವಜಾರೋಹಣ ನೆರವೇರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಪ್ರತಿಕ್ರಿಯೆ

ಬಳಿಕ ತೆರೆದ ವಾಹನದ ಮೂಲಕ ವಿವಿಧ ತುಕಡಿಗಳನ್ನು ವೀಕ್ಷಿಸಿದ ಸಚಿವರು ಗೌರವ ವಂದನೆ ಸ್ವೀಕರಿಸಿದರು. ನಂತರ ಪೊಲೀಸ್, ಗೃಹರಕ್ಷಕದಳ, ಅರಣ್ಯ ಇಲಾಖೆ, ಎನ್ ಸಿಸಿ, ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚನ ನಡೆಯಿತು.

ಕಾರವಾರದಲ್ಲಿ ಧ್ವಜಾರೋಹಣದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲ ಸರ್ಕಾರದಲ್ಲಿರುವಂತೆ ನಮ್ಮ‌ ಸರ್ಕಾರದಲ್ಲಿಯೂ ಖಾತೆ ಹಂಚಿಕೆಯಾದಾಗ ಸಚಿವರುಗಳಿಗೆ ಅಸಮಾಧಾನವಾಗಿದೆ. ಆದರೆ ಅದರಲ್ಲಿ ಮುಚ್ಚಿಡುವಂತದ್ದು ಏನು ಇಲ್ಲ‌‌. ಮುಖ್ಯಮಂತ್ರಿ ಮತ್ತೊಂದು ಬಾರಿ ಖಾತೆ ಮರುಹಂಚಿಕೆ ಮಾಡಿ ಸಮಾಧಾನ ಮಾಡೋ ಪ್ರಯತ್ನ ಮಾಡಿದ್ದಾರೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.

ಮಂತ್ರಿ ಮಂಡಲ‌ ರಚನೆಯಾದಾಗ ಖಾತೆ ಹಂಚಿಕೆ ಬಗ್ಗೆ ಅಸಮಾಧಾನ ಸಹಜ.‌ ಆದರೆ ಖಾತೆ ಬದಲಾವಣೆ ಮಾಡುವುದು ಮುಖ್ಯಮಂತ್ರಿಯ ಪರಮಾಧಿಕಾರ. ಮಂತ್ರಿ ಮಂಡಲ‌ ರಚನೆಯಾದಾಗ ಖಾತೆ ಹಂಚಿಕೆ ಬಗ್ಗೆ ಈ ರೀತಿಯ ಘಟನೆ ನಡೆಯುತ್ತವೆ. ಇದು ಕೇವಲ ಯಡಿಯೂರಪ್ಪ ಸರ್ಕಾರದಲ್ಲಿ ಮಾತ್ರವಲ್ಲ. ಅನೇಕ ಸರ್ಕಾರಗಳಲ್ಲಿ ಕಂಡಿದ್ದೇವೆ. ಆದರೆ ಮುಖ್ಯಮಂತ್ರಿ ಮತ್ತೊಂದು ಬಾರಿ ಖಾತೆ ಮರುಹಂಚಿಕೆ ಮಾಡಿ ಸಮಾಧಾನ ಮಾಡೋ ಪ್ರಯತ್ನ ಮಾಡಿದ್ದಾರೆ. ನಾವೆಲ್ಲ ಒಟ್ಟಿಗೆ ಇದ್ದು, ಬಿಜೆಪಿಯ ಗುಂಪಾಗಿ ಕೆಲಸ ಮಾಡ್ತಿದ್ದೇವೆ ಎಂದು ಹೇಳಿದರು.

ಆನಂದ್ ಸಿಂಗ್ ಅಸಮಾಧಾನದ‌ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ನೂರಕ್ಕೆ ನೂರು ಆನಂದ್ ಸಿಂಗ್ ಜತೆಯಿದ್ದೇನೆ. ಆನಂದ್ ಸಿಂಗ್ ಮಾತ್ರವಲ್ಲ, ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳ ಎಲ್ಲರ ಜತೆಯಿದ್ದೇನೆ. ಆನಂದ್ ಸಿಂಗ್​ಗೆ ತಾಳ್ಮೆ ಕಳೆದುಕೊಳ್ಳದಂತೆ ಹೇಳಿದ್ದೇನೆ ಎಂದರು.

ಸಾರ್ವಜನಿಕ ಕ್ಷೇತ್ರದಲ್ಲಿ ಎಲ್ಲವೂ ನಮ್ಮ ಅಣತಿಯಂತೆ ಆಗಲ್ಲ. ಇಂತಹ ನೋವು-ನಲಿವು ಎಲ್ಲವನ್ನೂ ಸಮಾಧಾನವಾಗಿಯೇ ಸ್ವೀಕರಿಸಬೇಕಿದೆ. ಆ ನಿಟ್ಟಿನಲ್ಲಿ ನನ್ನ ಅನುಭವವನ್ನೂ ಹಂಚಿಕೊಂಡಿದ್ದೇನೆ. ಸರ್ಕಾರಕ್ಕೆ ಏನೂ ತೊಂದರೆ ಆಗಲ್ಲ. ಎಲ್ಲವೂ ಸರಿ ಹೋಗುತ್ತದೆ. ಮುಖ್ಯಮಂತ್ರಿ ಎಲ್ಲವನ್ನು ಸರಿಪಡಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎಂಟಿಬಿ ನಾಗರಾಜ್ ಮತ್ತೆ ಅಸಮಾಧಾನಗೊಂಡ ಬಗ್ಗೆ ಪ್ರತಿಕ್ರಿಯಿಸಿದ ಅವರು ಎಂಟಿಬಿ ನನ್ನ ಹಿರಿಯ ಸ್ನೇಹಿತರು. ಅವರ ಜತೆ ಕುಳಿತು ಚರ್ಚೆ ಮಾಡುತ್ತೇನೆ. ಆಡಳಿತ ದೃಷ್ಠಿಯಿಂದ ಪದೇ ಪದೇ ಖಾತೆ ಬದಲಾವಣೆ ಮಾಡೋದು ಸರಿಯಲ್ಲ ಅನ್ನೋದು ಎಲ್ಲರ ಅಭಿಪ್ರಾಯ.‌ ಸಚಿವ ಸಂಪುಟದಲ್ಲಿ ಎರಡೆರಡು ಖಾತೆಯಿದ್ದಾಗ ಎಲ್ಲರಿಗೂ ನೀಡದೆ ಇರೋದಕ್ಕೂ ಆಗಲ್ಲ.‌ ನಾವೆಲ್ಲರೂ ಒಟ್ಟಾಗಿ ಯಡಿಯೂರಪ್ಪ ಅವರ ಆಡಳಿತದಲ್ಲಿ ಉತ್ತಮ ಸರ್ಕಾರ ನೀಡುತ್ತೇವೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.