ETV Bharat / state

ಮುರುಡೇಶ್ವರದಲ್ಲಿ ಪಾರ್ಕಿಂಗ್ ಸಮಸ್ಯೆ: ಕಡಲ ತೀರದಲ್ಲೇ ವಾಹನ ನಿಲ್ಲಿಸುತ್ತಿರುವ ಪ್ರವಾಸಿಗರು

author img

By ETV Bharat Karnataka Team

Published : Dec 14, 2023, 2:33 PM IST

Updated : Dec 14, 2023, 2:42 PM IST

ಮುರುಡೇಶ್ವರದಲ್ಲಿ ಪಾರ್ಕಿಂಗ್ ಸಮಸ್ಯೆ
ಮುರುಡೇಶ್ವರದಲ್ಲಿ ಪಾರ್ಕಿಂಗ್ ಸಮಸ್ಯೆ

ಮುರುಡೇಶ್ವರದಲ್ಲಿ ವಾಹನಗಳ ಪಾರ್ಕಿಂಗ್ ಸಮಸ್ಯೆ ಉಂಟಾಗಿದ್ದು ಬೀಚ್​ನಲ್ಲೇ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ.

ಮುರುಡೇಶ್ವರದಲ್ಲಿ ಪಾರ್ಕಿಂಗ್ ಸಮಸ್ಯೆ

ಕಾರವಾರ: ಧಾರ್ಮಿಕ ಕ್ಷೇತ್ರ ಮತ್ತು ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿರುವ ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರಕ್ಕೆ ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಆದರೆ ಹೀಗೆ ಬಂದ ಪ್ರವಾಸಿಗರಿಗೆ ವಾಹನ ನಿಲ್ಲಿಸಲು ಸ್ಥಳವಿಲ್ಲದೇ ನೇರವಾಗಿ ಸಮುದ್ರಕ್ಕೆ ವಾಹನಗಳನ್ನು ಕೊಂಡೊಯ್ಯುತ್ತಿದ್ದು ಇದು ಕಡಲ ಸೌಂದರ್ಯ ಆಸ್ವಾದಿಸಲು ಬರುವ ಪ್ರವಾಸಿಗರ ಕಿರಿ ಕಿರಿಗೆ ಕಾರಣವಾಗಿದೆ.

ಏಷ್ಯಾದ ಎರಡನೇ ಅತಿ ಎತ್ತರದ ಈಶ್ವರನ ಬೃಹತ್ ಮೂರ್ತಿ ಹೊಂದಿರುವ ಮತ್ತು ಪಕ್ಕದಲ್ಲಿಯೇ ಕಡಲತೀರ ಇರುವ ಮುರುಡೇಶ್ವರಕ್ಕೆ ಪ್ರವಾಸಿಗರ ದಂಡೆ ಹರಿದುಬರುತ್ತಿದೆ. ಅದರಲ್ಲಿಯೂ ಕಳೆದ ಹದಿನೈದು ದಿನಗಳಿಂದ ನಿತ್ಯ ಸಾವಿರಾರು ಜನ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಆದರೆ ಇಲ್ಲಿ ಬರುವ ಪ್ರವಾಸಿಗರು ವಾಹನ ನಿಲುಗಡೆ ಮಾಡುವುದೇ ಬಹು ದೊಡ್ಡ ಸಮಸ್ಯೆ ಆಗಿದೆ.

ಎಲ್ಲಿಯೂ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಅನಿವಾರ್ಯವಾಗಿ ಪ್ರವಾಸಿಗರು ಬಿಚ್​ನಲ್ಲಿ ವಾಹನ ನಿಲುಗಡೆ ಮಾಡುವ ಪರಿಸ್ಥಿತಿ ಉಂಟಾಗಿದೆ. ಆದರೇ ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಅಕ್ರಮವಾಗಿ ಪಾರ್ಕಿಂಗ್ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇಂತಹ ಅಕ್ರಮ ವಸೂಲಿಯನ್ನು ನಿಲ್ಲಿಸಲು ಕೂಡಲೇ ದೇವಸ್ಥಾನದ ಆಡಳಿತ ಮಂಡಳಿ ಅಗತ್ಯ ಕ್ರಮ‌ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ನಿತ್ಯ ಸಾವಿರಾರು ವಾಹನಗಳಿಂದ ಪ್ರವಾಸಿಗರು ಇಲ್ಲಿಗೆ ಬಂದು, ಗಂಟೆ ಗಟ್ಟಲೆ ಬೀಚ್​ನಲ್ಲೆ ಆಟ ಆಡುತ್ತ ಇಲ್ಲಿಯ ಸೌಂದರ್ಯವನ್ನು ಆಸ್ವಾದಿಸುತ್ತಿದ್ದಾರೆ. ಆದರೆ ವಾಹನಗಳು ಬೀಚ್​ಗೆ ಬರುತ್ತಿರುವುದರಿಂದ ಪ್ರವಾಸಿಗರಿಗೆ ಕಿರಿ ಕಿರಿ ಉಂಟಾಗುತ್ತಿದೆ. ಅಷ್ಟೆ ಅಲ್ಲದೆ ಅಲೆ ಹೆಚ್ಚಾದರೇ ಬೀಚ್​ನಲ್ಲಿ ಸ್ಥಳ ಇಲ್ಲದಂತಾಗುತ್ತದೆ. ಇನ್ನು ಸಮುದ್ರ ತೀರದಲ್ಲಿ ಪಾರ್ಕಿಂಗ್ ಮಾಡುವ ವಾಹನಗಳಿಗೆ ಸಮುದ್ರದ ಅಲೆಗಳು ಬಡೆದು ಮರಳಿನಲ್ಲಿ ವಾಹನಗಳು ಸಿಲುಕಿ ಪ್ರವಾಸಿಗರು ತೊಂದರೆ ಅನುಭವಿಸುವಂತಾಗಿದೆ.

ಇದಲ್ಲದೇ ಅಕ್ರಮವಾಗಿ ಹಲವು ಅಂಗಡಿ ಮುಂಗಟ್ಟುಗಳು ತೆರೆದಿದ್ದು ಬೀಚ್​ನ ಸೌಂದರ್ಯ ಹಾಳಾಗುತ್ತಿದೆ. ಆದರೆ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರವಾಸೋದ್ಯಮ ಅಧಿಕಾರಿ ಇಲಾಖೆ ಅಧಿಕಾರಿ ಕೃಷ್ಣ ನಾಯಕ, ಮುರುಡೇಶ್ವರದಲ್ಲಿ ಪಾರ್ಕಿಂಗ್​ ಸಮಸ್ಯೆ ಉಂಟಾಗಿದೆ. ಇಲ್ಲಿಗೆ ವಾಹನದಲ್ಲಿ ಬರುವವರು ಬೀಚ್​ನಲ್ಲಿ ತಮ್ಮ ವಾಹನಗಳನ್ನು ಪಾರ್ಕಿಂಗ್​ ಮಾಡುತ್ತಿದ್ದಾರೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಲಾಗುತ್ತಿದೆ. ಪಾರ್ಕಿಂಗ್​ಗೆ ಬೇಕಾದ ಸೂಕ್ತ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದು ಪ್ರವಾಸೋದ್ಯಮ ಅಧಿಕಾರಿ ತಿಳಿಸಿದ್ದಾರೆ. ಡಿಸೆಂಬರ್ ಕೊನೆ ವಾರದಿಂದ ಜನವರಿ ಮೊದಲ ವಾರದಲ್ಲಿ ಹೆಚ್ಚು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.

ಇದನ್ನೂ ಓದಿ: ಕಲ್ಮೇಶ್ವರನಿಗೆ ಹುಟ್ಟುಹಬ್ಬ ಆಚರಣೆ: ದನಬೆದರಿಸುವ ಸ್ಪರ್ಧೆಯಲ್ಲಿ ಇವನೇ ಕಿಂಗ್

Last Updated :Dec 14, 2023, 2:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.