ETV Bharat / state

ನಿರಂತರ ಆಕ್ಸಿಜನ್ ಬದಲಾವಣೆಯಿಂದ ಸೋರಿಕೆ ಆಗಿದೆ : ಜಿಲ್ಲಾಧಿಕಾರಿ ಸ್ಪಷ್ಟನೆ

author img

By

Published : May 22, 2021, 7:56 PM IST

Leakage is happens after constant change in oxygen at Sirasi says dc
ನಿರಂತರ ಆಕ್ಸಿಜನ್ ಬದಲಾವಣೆಯಿಂದ ಸೋರಿಕೆ ಆಗಿದೆ:

ಆಕ್ಸಿಜನ್ ಘಟಕದಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಲು ನೌಕಾನೆಲೆಯೆ ಇಂಜಿನಿಯರ್​​​​ ಒಳಗೊಂಡ ತಂಡವನ್ನೇ ರಚಿಸಲಾಗಿದೆ..

ಕಾರವಾರ (ಉ.ಕ): ಶಿರಸಿಯಲ್ಲಾದ ಆಕ್ಸಿಜನ್ ಸೋರಿಕೆ ಬಗ್ಗೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಸ್ಪಷ್ಟನೆ ನೀಡಿದ್ದಾರೆ. ಆಕ್ಸಿಜನ್ ಅವಶ್ಯಕತೆ ತುಂಬಾ ಇರುವುದರಿಂದ ನಿರಂತರವಾಗಿ ಬದಲಾವಣೆ ಮಾಡಲಾಗುತ್ತಿದ್ದು, ಇದರಿಂದ ಸೋರಿಕೆಯಾಗಿದೆ. ತಕ್ಷಣ ನೌಕಾನೆಲೆಯ ತಜ್ಞರನ್ನೊಳಗೊಂಡ ತಂಡ ಸಮಸ್ಯೆ ಬಗೆಹರಿಸಿರುವುದಾಗಿ ತಿಳಿಸಿದ್ದಾರೆ.

ಕಾರವಾರದಲ್ಲಿ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಕ್ಸಿಜನ್ ಪೂರೈಕೆ ಮಾಡುತ್ತಿದ್ದ ಯುನಿಟ್‌ನಲ್ಲಿ ಸೋರಿಕೆಯಾಗುತ್ತಿರುವುದು ತಿಳಿದ ತಕ್ಷಣ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗಿದೆ.

ಆಕ್ಸಿಜನ್ ಘಟಕದಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಲು ನೌಕಾನೆಲೆಯೆ ಇಂಜಿನಿಯರ್​​​​ ಒಳಗೊಂಡ ತಂಡವನ್ನೇ ರಚಿಸಲಾಗಿದೆ.

ಆಕ್ಸಿಜನ್ ಸೋರಿಕೆ ಕುರಿತು ಡಿಸಿ ಸ್ಪಷ್ಟನೆ

ನಿನ್ನೆ ರಾತ್ರಿ ಸೋರಿಕೆಯಾಗುತ್ತಿರುವುದು ತಿಳಿದ ತಕ್ಷಣ ಸಮಸ್ಯೆ ಸರಿಪಡಿಸಲು ತಂಡವನ್ನು ಕಳುಹಿಸಲಾಗಿದೆ. ಅದರಂತೆ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದವರನ್ನು ಹೊರತುಪಡಿಸಿ ಆಕ್ಸಿಜನ್ ಅವಶ್ಯಕತೆ ಉಳಿದ ಸೋಂಕಿತರನ್ನು ಮುಂಡಗೋಡಕ್ಕೆ 5, ಸಿದ್ಧಾಪುರ 6, ಯಲ್ಲಾಪುರಕ್ಕೆ ಓರ್ವ ಸೋಂಕಿತರ ಸ್ಥಳಾಂತರಿಸಲಾಗಿದೆ ಎಂದರು.

ಸ್ಥಳಾಂತರಿಸಿದ ಬಳಿಕ ಆಸ್ಪತ್ರೆಯಲ್ಲಿದ್ದ ಗಂಭೀರ ಸ್ಥಿತಿಯಲ್ಲಿದ್ದವರನ್ನು ತುರ್ತು ನಿಗಾ ಘಟಕದಲ್ಲಿ ಇರಿಸಿ ಸೋರಿಕೆಯಾಗದಂತೆ ತಜ್ಞರ ತಂಡ ಪರಿಶೀಲನೆ ನಡೆಸಿದೆ.

ಇದರ ಬಳಿಕ ಜಿಲ್ಲೆಯ ಎಲ್ಲ ಆಸ್ಪತ್ರೆಗಳಲ್ಲಿಯೂ ಪರಿಶೀಲನೆ ನಡೆಸಿ ಮತ್ತೆ ಸೋರಿಕೆಯಾಗದಂತೆ ತಡೆಯಲು ಕ್ರಮವಹಿಸುವುದಾಗಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.