ETV Bharat / state

ಜಾಗ ಖಾಲಿ ಮಾಡುವಂತೆ ಅತಿಕ್ರಮಣದಾರರಿಗೆ ಕಿರುಕುಳ ನೀಡುತ್ತಿರುವ ಅರಣ್ಯ ಸಿಬ್ಬಂದಿ

author img

By

Published : Oct 15, 2019, 8:48 PM IST

ಕಿರುಕುಳ ನೀಡುತ್ತಿರುವ ಅರಣ್ಯ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಅತಿಕ್ರಮಣದಾರರು ಪ್ರತಿಭಟನೆ ನಡೆಸಿದರು.

forest-staff-harassing-to-people

ಭಟ್ಕಳ: ಮಾನಸಿಕ, ದೈಹಿಕ ಕಿರುಕುಳ ನೀಡುತ್ತಿರುವ ತಾಲೂಕಿನ ಅರಣ್ಯ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಅರಣ್ಯ ಅತಿಕ್ರಮಣದಾರರು ಪಿಎಸ್​​ಐ ಹನುಮಂತಪ್ಪ ಕುಡಗುಂಟಿ ಅವರಿಗೆ ಇಂದು ಮನವಿ ಸಲ್ಲಿಸಿದ್ದಾರೆ.

ಮನವಿ ಸಲ್ಲಿಸುವುದಕ್ಕೂ ಮುನ್ನ ನಗರ ಠಾಣೆ ಪೊಲೀಸ್ ಎದುರು ಪ್ರತಿಭಟನೆ ನಡೆಸಿದ ಅರಣ್ಯ ಅತಿಕ್ರಮಣದಾರರು, ನಮಗೆ ರಕ್ಷಣೆ ಕೊಟ್ಟು ನ್ಯಾಯ ಒದಗಿಸಿ ಎಂದು ಒತ್ತಾಯಿಸಿದರು.

ಪ್ರತಿಭಟನೆ ನಡೆಸಿದ ಅತಿಕ್ರಮಣದಾರರು.

ಅರಣ್ಯ ಅತಿಕ್ರಮಣದಾರರು ವಾಸ್ತವ್ಯ ಹಾಗೂ ಸಾಗುವಳಿಗಾಗಿ ಅರಣ್ಯ ಭೂಮಿ ಅವಲಂಬಿಸಿದ್ದಾರೆ. ಅರಣ್ಯ ಸಿಬ್ಬಂದಿ ಅತಿಕ್ರಮಣ ಸ್ವಾಧೀನದಲ್ಲಿರುವ ಕುಟುಂಬಗಳಿಗೆ ಏಕಾಏಕಿ ಪ್ರವೇಶಿಸಿ ವಾಸವಿದ್ದವರಿಗೆ ತೊಂದರೆ ಕೊಟ್ಟಿದ್ದಾರೆ. ಮಹಿಳೆಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಕಾನೂನಾತ್ಮಕ ಬೆಂಬಲ ಇಲ್ಲದಿದ್ದರೂ ಅತಿಕ್ರಮಣದಾರರನ್ನು ನಮ್ಮನ್ನು ಅಲ್ಲಿಂದ ಓಡಿಸಲು ಮುಂದಾಗಿದ್ದಾರೆ.

ಅರಣ್ಯ ಸಿಬ್ಬಂದಿ ದುರ್ನಡತೆ ಕುರಿತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ವಲಯ ಅರಣ್ಯಾಧಿಕಾರಿ ಗಮನಕ್ಕೆ ತಂದರೂ ಕ್ರಮ ಜರುಗಿಸಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

Intro:ಭಟ್ಕಳ: ಅರಣ್ಯ ಅತಿಕ್ರಮಣದಾರರಿಗೆ ಭಟ್ಕಳ ತಾಲೂಕಿನ ಕೆಲವು ಅರಣ್ಯ ಸಿಬ್ಬಂದಿಗಳಿಂದ ಮಾನಸಿಕ ದೈಹಿಕ ಕಿರುಕುಳ ದೌರ್ಜನ್ಯ ಎಸಗುವ ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮ ಹಾಗೂ ಅಂತಹ ಸಿಬ್ಬಂದಿಗಳಿಂದ ರಕ್ಷಣೆ ಒದಗಿಸುವ ಕುರಿತು ಭಟ್ಕಳ ಎಎಸ್ಪಿಯವರಿಗೆ ಮನವಿ ಸಲ್ಲಿಸಿದ್ದು ಎಎಸ್ಪಿ ಅನುಪಸ್ಥಿತಿಯಲ್ಲಿ ಪಿ.ಎಸ್.ಐ ಹನುಮಂತಪ್ಪ ಕುಡಗುಂಟಿ ಅವರು ಮಂಗಳವಾರದಂದು ಮನವಿ ಸ್ವೀಕರಿಸಿದ್ದಾರೆ.Body:ಭಟ್ಕಳ: ಅರಣ್ಯ ಅತಿಕ್ರಮಣದಾರರಿಗೆ ಭಟ್ಕಳ ತಾಲೂಕಿನ ಕೆಲವು ಅರಣ್ಯ ಸಿಬ್ಬಂದಿಗಳಿಂದ ಮಾನಸಿಕ ದೈಹಿಕ ಕಿರುಕುಳ ದೌರ್ಜನ್ಯ ಎಸಗುವ ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮ ಹಾಗೂ ಅಂತಹ ಸಿಬ್ಬಂದಿಗಳಿಂದ ರಕ್ಷಣೆ ಒದಗಿಸುವ ಕುರಿತು ಭಟ್ಕಳ ಎಎಸ್ಪಿಯವರಿಗೆ ಮನವಿ ಸಲ್ಲಿಸಿದ್ದು ಎಎಸ್ಪಿ ಅನುಪಸ್ಥಿತಿಯಲ್ಲಿ ಪಿ.ಎಸ್.ಐ ಹನುಮಂತಪ್ಪ ಕುಡಗುಂಟಿ ಅವರು ಮಂಗಳವಾರದಂದು ಮನವಿ ಸ್ವೀಕರಿಸಿದ್ದಾರೆ.

ಭಟ್ಕಳ ತಾಲೂಕಾದ್ಯಂತ ಅರಣ್ಯ ಅತಿಕ್ರಮಣದಾರರು ವಾಸ್ತವ್ಯ ಹಾಗೂ ಸಾಗುವಳಿಗಾಗಿ ಅರಣ್ಯಭೂಮಿ ಅವಲಂಬಿಸಿದ್ದು, ಅರಣ್ಯ ಅತಿಕ್ರಮಣದಾರರ ವಾಸ್ತವ್ಯದ ಇಮಾರತಿಗೆ ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳಿಗೆ ಮನೆ ಕರ, ನೀರಿನ ಕರ ತುಂಬುತ್ತಿದ್ದಾರೆ. ವಾಸ್ತವ್ಯದ ಈ ಮಾತಿಗೆ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದು ಇರುತ್ತದೆ. ಅತಿಕ್ರಮಣದಾರರು ಅರಣ್ಯ ಭೂಮಿಯ ಬಗೆಗೆ ಅತಿಕ್ರಮಣ ಮಾತೆಯಿಂದ ಕಬ್ಜಾ ಒಗ್ಗಟ್ಟೇ ಹಕ್ಕಿಗೆ ಸಂಬಂಧಿಸಿದ ಭೂಮಿಗೆ ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದು ಅತಿಕ್ರಮಣ ಕ್ಷೇತ್ರಕ್ಕೆ ಜಿಪಿಎಸ್ ಆಗಿದ್ದು ಇರುತ್ತದೆ.

ಅರಣ್ಯಹಕ್ಕು ಕಾಯಿದೆ ಅಡಿಯಲ್ಲಿ ರಾಜ್ಯ ಸರಕಾರ ಅಂದು ಆದೇಶ ಹೊರಡಿಸಿದ್ದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಆಗಿರುವ ಅರಣ್ಯ ಒತ್ತುವರಿಯಲ್ಲಿ ಒತ್ತುವರಿ ಭೂಮಿ ಮತ್ತು ಆತನ ಪಟ್ಟಾ ಭೂಮಿ ಸೇರಿ ಮೂರು ಎಕರೆವರೆಗೆ ಅರಣ್ಯ ಒತ್ತುವರಿ ಮಾಡಿಕೊಂಡಿರುವಂತಹ ಒತ್ತುವರಿದಾರರಿಗೆ ಪುನರ್ವಸತಿ ಮತ್ತು ಪುನರ್ ವ್ಯವಸ್ಥೆ ಪ್ಯಾಕೇಜ್ ಕಲ್ಪಿಸುವ ಬಗ್ಗೆ ಸರಕಾರದ ಹಂತದಲ್ಲಿ ಪರಿಶೀಲಿಸಲಾಗುವುದೆಂದೂ ಗಂಭೀರ ಸ್ವರೂಪದಲ್ಲಿ ಅರಣ್ಯವಾಸಿಗಳ ಪರವಾದ ನಿರ್ಣಯ ಹೊರಡಿಸಿ ದಾಗಿಯೂ ಮತ್ತು ಕೇಂದ್ರ ಬುಡಕಟ್ಟು ಮಂತ್ರಾಲಯವು ಒತ್ತು ದಾರರನ್ನು ಕಾನೂನು ರೀತ್ಯ ಕಾಯ್ದಿರಿಸಿ ಒಕ್ಕಲೆಬ್ಬಿಸುವ ಪ್ರಕ್ರಿಯೆ ಜರುಗಿಸಬಾರದೆಂದು ಸ್ಪಷ್ಟ ಆದೇಶವನ್ನು ನೀಡಿದ್ದು ಸ್ಥಳೀಯ ವಲಯ ಮಟ್ಟದ ಕೆಲವು ವನಪಾಲಕರು ಗಾರ್ಡುಗಳು ವಾಚಮೆನಗಳು ಕಾನೂನಿಗೆ ವ್ಯತಿರಿಕ್ತವಾಗಿ ಕ್ರಮ ಜರುಗಿಸುತ್ತಿರುವ ಇದು ಖಂಡನಾರ್ಹವಾಗಿದೆ.

ಹೀಗಿದ್ದಾಗಿಯೂ ಭಟ್ಕಳ ವ್ಯಾಪ್ತಿಯ ನಗರ ಪ್ರದೇಶ ಜಾಲಿ ಬಳಕೆ ವ್ಯಾಪ್ತಿಯಲ್ಲಿ ಬರುವ ಅರಣ್ಯ ರಕ್ಷಕ, ವಾಚಮೆನ್ ಅತಿಕ್ರಮಣ ಸ್ವಾಧೀನದಲ್ಲಿರುವ ಮನೆಗಳಿಗೆ ಏಕಾಏಕಿಯಾಗಿ ಅಕ್ರಮ ಪ್ರವೇಶ ಮಾಡಿ ಅತಿಕ್ರಮಣದಾರರ ಸಾಗುವಳಿ ಆತಂಕ ಉಂಟು ಮಾಡುವುದಲ್ಲದೇ ಅಸ್ತಿತ್ವದಲ್ಲಿರುವ ಕಟ್ಟಡಗಳಿಗೆ ಅನಾಹುತ ಮಾಡುತ್ತಿದ್ದು ಇದಲ್ಲದೇ ಮಹಿಳೆಯರು ಮನೆಯಲ್ಲಿರುವ ಸಂದರ್ಭದಲ್ಲಿ ಮಹಿಳೆಯರಿಗೆ ಅವಾಚ್ಯ ಶಬ್ದದಿಂದ ಬರುವುದಲ್ಲದೇ ಸ್ಥಳದಿಂದ ಎತ್ತಂಗಡಿ ಮಾಡಿ ಹೊರದಬ್ಬುವ ಬೆದರಿಕೆ ಸಹಿ ಹಾಕಿದ್ದು ಈ ರೀತಿ ಮಾಡಲು ಸಿಬ್ಬಂದಿಗಳಿಗೆ ಯಾವುದೇ ಕಾನೂನಾತ್ಮಕ ಬೆಂಬಲ ಇಲ್ಲದಾಗಿ ಅರಣ್ಯ ಅತಿಕ್ರಮಣದಾರರಿಗೆ ಅನಧೀಕೃತವಾಗಿ ಬೆದರಿಸುವ ಹಣ ಮಾಡುವ ತಂತ್ರವಾಗಿರುತ್ತದೆ.

ಸಂಬಂಧಿಸಿದ ಅರಣ್ಯ ಸಿಬ್ಬಂದಿಗಳಿಂದ ಅವರ ದುರ್ನಡತೆ ಕುರಿತು ಈಗಾಗಲೇ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ವಲಯ ಅರಣ್ಯಾಧಿಕಾರಿಗಳ ಗಮನಕ್ಕೆ ತಂದಾಗಲೂ ಯಾವುದೇ ರೀತಿಯ ಕಾನೂನು ಬಾಹಿರ ಕೃತ್ಯ ನಿಲ್ಲಿಸದೇ ಇರುವುದಿಲ್ಲ. ಕಾರಣ ದುರ್ನಡತೆ ತೋರಿದ ಅರಣ್ಯ ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವುದಲ್ಲದೇ ಅರಣ್ಯಾಧಿಕಾರಿಗೆ ಸೂಕ್ತ ರಕ್ಷಣೆ ನೀಡಲು ಮನವಿ ಸಲ್ಲಿಸಿದ್ದಾರೆ.

ಖಾನಮೀರ್ ಸಾಹೇಬ್, ರಹೀಂ ಶಾಬಂದ್ರಿ, ಮೊಹಮ್ಮದ್ ಫೈಸಲ್, ಮಹಾದೇವ ಮೊಗೇರ, ಶ್ರೀಧರ ಜೋಗಿ, ನಸ್ರೀನ್ ಬಾನು, ಮಹಮ್ಮದ್ ಅಲಿ, ಹಜರತ್ ಅಲಿ, ಶಿವರಾಜ ಬಡಾಬಾಗ, ಮೆಹಬೂಬ ದಾವಲ ಸಾಬ್, ಕೃಷ್ಣಾ ಮರಾಠಿ, ವಿಮಲಾ ಮೋಗೇರ, ರೇಖಾ ಮೋಗೇರ, ಶೇಷ ಮರಾಠಿ, ರವಿ ಮೋಗೇರ, ಸಲೀಮ್ ಬಿ ಬೇಗ ಸಿರಾಜ್ ಇವರು ಅರಣ್ಯ ಅತಿಕ್ರಮಣ ಸಿಬ್ಬಂದಿಗಳಿಂದ ಕೆಲವು ನೊಂದ ಅತಿಕ್ರಮಣದಾರರಾಗಿದ್ದಾರೆ.‌

ಈ ಸಂಧರ್ಭದಲ್ಲಿ ನಗರ ಠಾಣೆ ಪೊಲೀಸ್ ಎದುರು ಅತಿಕ್ರಮಣದಾರರು ಅರಣ್ಯ ಅತಿಕ್ರಮಣದಾರರು ಕೆಲ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಪರಿಸ್ಥಿತಿಯನ್ನು ಪೊಲೀಸರು ತಿಳಿಗೊಳಿಸಿ ಪ್ರತಿಭಟನೆಯನ್ನು ಸ್ಥಗಿತಗೊಳಿಸುವಲ್ಲಿ ಯಶಸ್ವಿಯಾಗಿದರು.

ಈ ವೇಳೆ ಜಿಲ್ಲಾ ಅತಿಕ್ರಮಣ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಎ.ರವೀಂದ್ರ ನಾಯ್ಕ, ಪಾಂಡು ನಾಯ್ಕ, ರಿಜ್ವಾನ್, ಸೈಯದ್ ಅಲಿ ಮಲಿಕ್ ಸೇರಿದಂತೆ ನೂರಾರು ಅತಿಕ್ರಮಣದಾರರು ಇದ್ದರು.


ಬೈಟ್: ರವಿಂದ ನಾಯ್ಕConclusion:ಉದಯ ನಾಯ್ಕ.ಭಟ್ಕಳ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.