ETV Bharat / state

ಭಟ್ಕಳ; ಟಿಪ್ಪರ್ ಲಾರಿಗಾಗಿ ಪೊಲೀಸ್​ ಠಾಣೆ ಆವರಣ ಶೋಧಿಸಲು ಕೋರ್ಟ್ ಆದೇಶ

author img

By

Published : Mar 18, 2021, 5:04 PM IST

bhatkala court order as search court premises for lorry
ಭಟ್ಕಳದಲ್ಲಿ 2 ಟಿಪ್ಪರ್ ಲಾರಿಗಳಿಗಾಗಿ ಪೊಲೀಸ್ ಠಾಣಾ ಆವರಣ ಶೋಧನೆ ನಡೆಸುವಂತೆ ಕೋರ್ಟ್ ಆದೇಶ

ನವಾಯತ ಕಾಲೋನಿಯ ಮಹ್ಮದ್ ಫರ್ಹಾನ್ ಶಾಬಂದ್ರಿ ಎಂಬುವವರು ಕಳೆದ ಜ. 7ರಂದು ಭಟ್ಕಳ ತಾಲೂಕಿನ ಸಿದ್ದೀಕ್ ಸ್ಟ್ರೀಟ್‍ನಲ್ಲಿ ಟಿಪ್ಪರ್ ವಾಹನಗಳನ್ನು ಉಪಯೋಗಿಸಿಕೊಂಡು ಕೆಲಸ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಅಲ್ಲಿಗೆ ಬಂದ ಪೊಲೀಸ್ ಅಧಿಕಾರಿಗಳು, ಯಾವುದೇ ಕಾರಣ ನೀಡದೆ ಎರಡೂ ಟಿಪ್ಪರ್​​​ಗಳನ್ನು ವಶಕ್ಕೆ ಪಡೆದುಕೊಂಡು ಭಟ್ಕಳ ಶಹರ ಠಾಣೆಗೆ ತೆಗೆದುಕೊಂಡು ಹೋಗಿದ್ದರು.

ಭಟ್ಕಳ: ತನ್ನ 2 ಟಿಪ್ಪರ್ ಲಾರಿಗಳನ್ನು ಪೊಲೀಸರು ಯಾವುದೇ ಸಕಾರಣ ಇಲ್ಲದೇ, ಯಾವುದೇ ಪ್ರಕರಣವನ್ನೂ ದಾಖಲಿಸದೇ, ಕಾನೂನು ಬಾಹಿರವಾಗಿ ತಮ್ಮ ವಶದಲ್ಲಿ ಇಟ್ಟುಕೊಂಡಿದ್ದಾರೆ ಎಂಬ ಖಾಸಗಿ ದೂರಿನ ಮೇರೆಗೆ ಕೋರ್ಟ್​​ ಕಮಿಷನ್‍ನಿಂದ ವರದಿ ಪಡೆದ ಭಟ್ಕಳ ಜೆಎಮ್‍ಎಫ್‍ಸಿ ನ್ಯಾಯಾಲಯ, ಭಟ್ಕಳ ಶಹರ ಪೊಲೀಸ್ ಠಾಣಾ ಆವರಣ ಶೋಧನೆಗೆ ಆದೇಶ ನೀಡಿದೆ.

ಈ ಸಂಬಂಧ ಕುಂದಾಪುರದ ವಕೀಲ ಎನ್.ಎಸ್.ಆರ್. ಭಟ್ ಸುದ್ದಿಗಾರರಿಗೆ ಮಾಹಿತಿ ನೀಡಿದರು. ತಾಲೂಕಿನ ನವಾಯತ ಕಾಲೋನಿಯ ಮಹ್ಮದ್ ಫರ್ಹಾನ್ ಶಾಬಂದ್ರಿ ಎಂಬುವವರು ಕಳೆದ ಜ. 7ರಂದು ಭಟ್ಕಳ ತಾಲೂಕಿನ ಸಿದ್ದೀಕ್ ಸ್ಟ್ರೀಟ್‍ನಲ್ಲಿ ಟಿಪ್ಪರ್ ವಾಹನಗಳನ್ನು ಉಪಯೋಗಿಸಿಕೊಂಡು ಕೆಲಸ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಅಲ್ಲಿಗೆ ಬಂದ ಪೊಲೀಸ್ ಅಧಿಕಾರಿಗಳು, ಯಾವುದೇ ಕಾರಣ ನೀಡದೆ ಎರಡೂ ಟಿಪ್ಪರ್​​​ಗಳನ್ನು ವಶಕ್ಕೆ ಪಡೆದುಕೊಂಡು ಭಟ್ಕಳ ಶಹರ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ.

ಪೊಲೀಸ್ ಠಾಣಾ ಆವರಣ ಶೋಧನೆ ನಡೆಸುವಂತೆ ಕೋರ್ಟ್ ಆದೇಶ

ಟಿಪ್ಪರ್​​ಗಳನ್ನು ತಮ್ಮ ಬಳಿಯೇ ಅಕ್ರಮವಾಗಿ ಇಟ್ಟುಕೊಂಡಿದ್ದು, ಈವರೆಗೂ ಯಾವುದೇ ಪ್ರಕರಣವನ್ನು ದಾಖಲಿಸಿಲ್ಲ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಹಾಗೂ ತನಗೆ ಆಗಿರುವ ನಷ್ಟವನ್ನು ಭರಿಸಿಕೊಡಬೇಕು ಎಂದು ನ್ಯಾಯಾಲಯಕ್ಕೆ ದೂರು ಸಲ್ಲಿಸಲಾಗಿತ್ತು.

ಇದನ್ನೂ ಓದಿ: ಗುಜ್ಜರಕೆರೆ ಜಲಶುದ್ಧೀಕರಣಕ್ಕೆ 'ಆಕ್ಸಿಡೇಷನ್ ಪಾಂಡ್': ಜಿಲ್ಲಾಡಳಿತ ಚಿಂತನೆ

ಈ ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಾಲಯ, ಈ ಕುರಿತು ವರದಿ ನೀಡುವಂತೆ ಕೋರ್ಟ್ ಕಮಿಷನ್‍ನನ್ನು ನೇಮಿಸಿತ್ತು. ನಂತರ ಕಮಿಷನ್‍ನ ವಕೀಲರು ನೀಡಿದ ವರದಿಯನ್ನು ಪರಿಗಣಿಸಿ ಪೊಲೀಸ್ ಠಾಣಾ ಆವರಣ ಶೋಧನೆಗೆ ಆದೇಶ ನೀಡಿದ್ದು, ಎರಡೂ ಟಿಪ್ಪರ್​​ಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ತಿಳಿಸಿದೆ ಎಂದು ವಕೀಲರು ವಿವರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.