ETV Bharat / state

ಅಡಿಕೆಗೆ ಬಾಧಿಸಿದ ಕೊಳೆರೋಗ: ಶಿರಸಿ ರೈತರು ಕಂಗಾಲು

author img

By

Published : Sep 8, 2019, 2:30 PM IST

ಅಡಿಕೆ ತೋಟಕ್ಕೆ ಭಾಧಿಸಿದ ಕೊಳೆರೋಗ

ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಯಿಂದಾಗಿ ಶಿರಸಿ ತಾಲೂಕಿನಲ್ಲಿನ ಅಡಿಕೆ ತೋಟವು ಕೊಳೆ ರೋಗಕ್ಕೆ ತುತ್ತಾಗಿದೆ.

ಶಿರಸಿ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಯಿಂದಾಗಿ ಶಿರಸಿ ತಾಲೂಕಿನಲ್ಲಿ 6600 ಹೆಕ್ಟೇರ್ ಅಡಿಕೆ ತೋಟವು ಕೊಳೆ ರೋಗಕ್ಕೆ ತುತ್ತಾಗಿದೆ.

ಶಿರಸಿ ಭಾಗದ ಪ್ರಮುಖ ತೋಟಗಾರಿಕೆ ಬೆಳೆಯಾಗಿರುವ ಅಡಿಕೆ ಅತಿಯಾದ ಮಳೆಯಿಂದ ಸಂಪೂರ್ಣವಾಗಿ ನೆಲಕಚ್ಚಿದೆ.

ಅಡಿಕೆ ತೋಟಕ್ಕೆ ಬಾಧಿಸಿದ ಕೊಳೆರೋಗ
8,457 ಹೆಕ್ಟೇರ್ ಅಡಿಕೆ ತೋಟವಿದ್ದು, 1,857 ಹೆಕ್ಟೇರ್​ಗಳಲ್ಲಿ ಇನ್ನು ಕೂಡ ಬೆಳೆ ಬಾರದ ಅಡಿಕೆ ಸಸಿಗಳಿವೆ. ಆದರೆ 6600 ಹೆಕ್ಟೇರ್ ಅಡಿಕೆ ತೋಟ ಕೊಳೆ ರೋಗಕ್ಕೆ ತುತ್ತಾಗಿ ಸುಮಾರು 112 ಕೋಟಿ ರೂ. ಗಳಷ್ಟು ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಈ ಕುರಿತ ವರದಿಯನ್ನು ಸರ್ಕಾರಕ್ಕೆ ಕಳಿಸಲಾಗಿದೆ.
ತಾಲೂಕಿನಲ್ಲಿ 32 ಗ್ರಾಮ ಪಂಚಾಯತ್​ ಹಾಗೂ ಶಿರಸಿ ನಗರಸಭೆ ಸೇರಿ ಎಲ್ಲಾ ಪ್ರದೇಶದಲ್ಲಿಯೂ ಶೇ. 33ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕೊಳೆ ರೋಗ ಬಂದಿದೆ. ಕಂದಾಯ ಮತ್ತು ತೋಟಗಾರಿಕೆ ಇಲಾಖೆಗಳು ಜಂಟಿ ಸರ್ವೆ ನಡೆಸಿದ್ದು, ಜಿಲ್ಲಾಧಿಕಾರಿಗೆ ಈಗಾಗಲೇ ವರದಿಯನ್ನು ಸಲ್ಲಿಸಲಾಗಿದೆ. ಅವರ ಮುಖಾಂತರ ಸರ್ಕಾರಕ್ಕೆ ವರದಿ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Intro:ಶಿರಸಿ :
ಭಾರೀ ಮಳೆಯ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಪ್ರಮುಖ ಬೆಳೆಯಾದ ಅಡಿಕೆಗೆ ಮಹಾಮಾರಿ ಕೊಳೆ ರೋಗ ಆವರಿಸಿದ್ದು, ಶಿರಸಿ ತಾಲೂಕೊಂದರಲ್ಲೇ ೬೬೦೦ ಹೆಕ್ಟೇರ್ ಅಡಿಕೆ ತೋಟಕ್ಕೆ ಕೊಳೆ ರೋಗ ಬಂದಿದೆ. ಇದರಿಂದ ೧೧೩ ಕೋಟಿ ರೂ. ಗಳಷ್ಟು ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದ್ದು, ವರದಿಯನ್ನು ಸರ್ಕಾರಕ್ಕೆ ಕಳಿಸಲಾಗಿದೆ.

ಶಿರಸಿ ಭಾಗದ ಪ್ರಮುಖ ತೋಟಗಾರಿಕೆ ಬೆಳೆಯಾಗಿರು ಅಡಿಕೆ ಈ ವರ್ಷದ ಅತಿಯಾದ ಮಳೆಯಿಂದ ಸಂಪೂರ್ಣವಾಗಿ ನೆಲಕಚ್ಚಿದ್ದು, ಕೊಳ ರೋಗಕ್ಕೆ ತುತ್ತಾಗಿದೆ. ಒಟ್ಟೂ
೮೪೫೭ ಹೆಕ್ಟೇರ್ ಅಡಿಕೆ ತೋಟವಿದ್ದು, ಅದರಲ್ಲಿ ೧೮೫೭ ಹೆಕ್ಟೇರ್ ಬೆಳೆ ಬಾರದ ಅಡಿಕೆ ಸಸಿಗಳಿದೆ. ಉಳಿದ ಫಲ ಬಿಡುವ ೬೬೦೦ ಹೆಕ್ಟೇರ್ ಪ್ರದೇಶಕ್ಕೆ ಕೊಳೆ ರೋಗ ಬಂದಿದ್ದು, ಲಾಸ್ ೧೧೩ ಕೋಟಿ ಹಾನಿ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಪ್ರತಿ ಗುಂಟೆಗೆ ೧೮೦ ರೂ. ನಂತೆ ಸರ್ಕಾರದಿಂದ ಪರಿಹಾರ ದೊರೆಯಲಿದ್ದು, ಒಟ್ಟೂ
೧೧ ಕೋಟಿ ಆಗಲಿದೆ.

Body:ಶಿರಸಿಯಲ್ಲಿ ೨೨೩೮೩ ಸ.ನಂ. ಗಳಿದ್ದು, ತಾಲೂಕಿನಲ್ಲಿ ಎಲ್ಲಾ ೩೨ ಗ್ರಾಮ ಪಂಚಾಯತ ಹಾಗೂ ಶಿರಸಿ ನಗರಸಭೆ ಸೇರಿ ಎಲ್ಲಾ ಪ್ರದೇಶದಲ್ಲಿಯೂ ಶೆ.೩೩ ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕೊಳೆ ರೋಗ ಬಂದಿದೆ. ದೇವಹನಳ್ಳಿ ಗ್ರಾಮ ಪಂಚಾಯತದಲ್ಲಿ ಅತಿ ಹೆಚ್ಚಿನ ಅಂದರೆ ೪೯.೫ % ಹಾಗೂ ಸುಗಾವಿ ಗ್ರಾಪಂ ದಲ್ಲಿ ಅತಿ ಕಡಿಮೆ ಅಂದರೆ ೩೪% ಕೊಳೆ ರೋಗ ಬಂದಿದೆ.

ಕಂದಾಯ ಮತ್ತು ತೋಟಗಾರಿಕೆ ಇಲಾಖೆಯಗಳು ಜಂಟಿ ಸರ್ವೆ ನಡೆಸಿದ್ದು, ಜಿಲ್ಲಾಧಿಕಾರಿಗಳಿಗೆ ಈಗಾಗಲೇ ವರದಿಯನ್ನು ಸಲ್ಲಿಸಲಾಗಿದೆ. ಅವರ ಮುಖಾಂತರ ಸರ್ಕಾರಕ್ಕೆ ವರದಿ ನೀಡಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ಬೈಟ್ (೧) : ಸತೀಶ ಹೆಗಡೆ, ತೋಟಗಾರಿಕಾ ಹಿರಿಯ ನಿರ್ದೇಶಕ.

.............
ಸಂದೇಶ ಭಟ್ ಶಿರಸಿ. Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.