ETV Bharat / state

102 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ 41,162 ಅರ್ಜಿ.. 87 ಮಂದಿಗೆ ಶೇ. 100 ಅಂಕ

author img

By

Published : May 12, 2022, 10:07 PM IST

Updated : May 12, 2022, 11:04 PM IST

41162-applications-for-post-of-102-village-accountants-in-uttar-kannada
102 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ 41,162 ಅರ್ಜಿ.. 87 ಮಂದಿಗೆ ಶೇ. 100 ಅಂಕ

ಉತ್ತರಕನ್ನಡ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 102 ಗ್ರಾಮ ಲೆಕ್ಕಾಧಿಕಾರಿ ಹುದ್ದೆ ನೇಮಕಾತಿಗೆ 41,162 ಅರ್ಜಿಗಳು ಸಲ್ಲಿಕೆಯಾಗಿವೆ.

ಕಾರವಾರ: ಉತ್ತರಕನ್ನಡ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 102 ಗ್ರಾಮ ಲೆಕ್ಕಾಧಿಕಾರಿ ಹುದ್ದೆ ನೇಮಕಾತಿಗೆ ಆನ್​ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, 41,162 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ 87 ಮಂದಿ ಶೇ. 100ಕ್ಕೆ 100 ಅಂಕ ಪಡೆದ್ದಾರೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 102 ಗ್ರಾಮ ಲೆಕ್ಕಿಗರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಇದರೊಂದಿಗೆ 2017-18, 2018-19ರ 2+14=16 ಬ್ಯಾಕ್‌ಲಾಗ್ ಹುದ್ದೆಗಳಿವೆ. ನೇಮಕಾತಿಗೆ ದ್ವಿತೀಯ ಪಿಯುಸಿಯ ಅಂಕ ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿದೆ. ಮೇ 10ರಂದು ಅರ್ಜಿ ಸಲ್ಲಿಸಲು ಇದ್ದ ಕೊನೆಯ ದಿನಾಂಕ ಮುಕ್ತಾಯವಾಗಿದ್ದು, ಒಟ್ಟು 41,162 ಅರ್ಜಿಗಳು ಸಲ್ಲಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾಹಿತಿ

ಬಂದ ಅರ್ಜಿಗಳ ಪೈಕಿ ಸಾಮಾನ್ಯ ವರ್ಗದಲ್ಲಿ 2600, 2ಎನಲ್ಲಿ 11,152, ಪರಿಶಿಷ್ಟ ಜಾತಿಗೆ 9,419 ಅರ್ಜಿಗಳು ಸ್ವೀಕೃತವಾಗಿವೆ. ಇದರಲ್ಲಿ 1:5ರಂತೆ, ಅಂದರೆ 102 ಹುದ್ದೆಗಳಿಗೆ 510 ಅಭ್ಯರ್ಥಿಗಳನ್ನು ದಾಖಲೆಗಳ ಪರಿಶೀಲನೆಗೆ ಕರೆಯುತ್ತೇವೆ. ಮೆರಿಟ್ ಆಧಾರದಲ್ಲಿ ತಂತ್ರಾಂಶದಿಂದಲೇ ಈ ಅಭ್ಯರ್ಥಿಗಳ ಪಟ್ಟಿ ಸಿದ್ಧಗೊಳ್ಳಲಿದ್ದು, ಅದರಂತೆ ಕರೆದು ದಾಖಲಾತಿ ಪರಿಶೀಲನೆ ಮಾಡಲಾಗುತ್ತದೆ.

ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಸರ್ಕಾರದ ಅಂತಿಮ ಒಪ್ಪಿಗೆಗೆ ಕಳುಹಿಸಲಾಗುತ್ತದೆ. ಅಲ್ಲಿಂದ ನೇಮಕಾತಿ ಆದೇಶ ಬಂದ ಬಳಿಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ನೇಮಕಾತಿ ಪ್ರಕ್ರಿಯೆ ಎಲ್ಲವೂ ಆನ್‌ಲೈನ್ ಮೂಲಕ ಆಗುವ ಕಾರಣ ಪಾರದರ್ಶಕವಾಗಿ ಆಗಲಿದೆ. ಈ ಬಗ್ಗೆ ಯಾವುದೇ ಗೊಂದಲಗಳು ಬೇಡ ಎಂದರು.

ಕೋವಿಡ್ ಬ್ಯಾಚ್‌ನ ವಿದ್ಯಾರ್ಥಿಗಳು ಅತಿಹೆಚ್ಚು ಮಾರ್ಕ್ಸ್​ ಪಡೆದಿದ್ದು, ಇದಕ್ಕೆ ಇತರ ವರ್ಷಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ತಕರಾರಿದೆ. ಕೋವಿಡ್ ಬ್ಯಾಚ್ ವಿದ್ಯಾರ್ಥಿಗಳೇ ಮೆರಿಟ್ ಆಧಾರದಲ್ಲಿ ನೇಮಕಾತಿಯಾಗಲಿದ್ದಾರೆ ಎಂಬ ದೂರಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಸರ್ಕಾರದಿಂದ ಈ ಬಗ್ಗೆ ಸ್ಪಷ್ಟನೆಗೆ ಕೋರಿದ್ದೇವೆ. ಆದರೆ ಈವರೆಗಿನ ನಿಯಮಗಳ ಪ್ರಕಾರ ಯಾವುದೇ ಜಿಲ್ಲೆ, ಬ್ಯಾಚ್ ತಾರತಮ್ಯಗಳಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಪಿಎಸ್ಐ ಪರೀಕ್ಷೆ ಅಕ್ರಮ: ನೇಮಕಾತಿ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದ ಅಧಿಕಾರಿ ಬಂಧನ

Last Updated :May 12, 2022, 11:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.